ಸುದ್ದಿಮೂಲ ವಾರ್ತೆ ಬೀದರ್, ಡಿ.11:
ಜಿಲ್ಲೆಯಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿ ವೃಷ್ಟಿಿಯಿಂದ ಬೆಳೆಹಾನಿಯಾದ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೀಡಲಾಗುತ್ತಿಿರುವ ಬೆಳೆ ಹಾನಿ ಪರಿಹಾರ ಹಣವು ಬ್ಯಾಾಂಕ್ ಗಳು ರೈತರ ಸಾಲದ ಹಣಕ್ಕೆೆ ಜಮೆ ಮಾಡಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.
ಪರಿಹಾರ ಹಣವು ರೈತರಿಗೆ ಆರ್ಥಿಕ ಪುನಶ್ಚೇತನ ನೀಡಿ ಮುಂದಿನ ಬೆಳೆಗೆ ಬೇಕಾಗುವ ಕೃಷಿ ಪರಿಕರಗಳ ಖರೀದಿಸಿ ಬೆಳೆ ಬೆಳೆಯಲು ಸಹಕಾರಿಯಾಗುತ್ತಿಿದೆ. ಆದರೆ ಬೆಳೆ ಹಾನಿ ಪರಿಹಾರ ಹಣವನ್ನು ಸಾಲದ ಖಾತೆಗೆ ಹೊಂದಾಣಿಕೆ ಮಾಡಬಾರದೆಂದು ಭಾರತ ಸರ್ಕಾರದ ನಿರ್ದೇಶನವಿರುತ್ತದೆ. ಸದರಿ ನಿರ್ದೇಶನ ಪಾಲಿಸಿಕೊಂಡು ಬಂದಿರುವ ಬೆಳೆ ಹಾನಿ ಪರಿಹಾರವನ್ನು ರೈತರಿಗೆ ವಿತರಿಸಲು ಹಾಗೂ ಯಾವುದೇ ಕಾರಣಕ್ಕೂ ಬ್ಯಾಾಂಕ್ ಸಾಲದ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕ್ರಮ ಜರುಗಿಸಲು ಸೂಚಿಸಿದೆ. ಹಾಗೂ ಈ ಸೂಚನೆ ಉಲ್ಲಂಘಿಸಿ ಯಾವುದೇ ಬ್ಯಾಾಂಕ್ ನವರು ಬೆಳೆ ಹಾನಿ ಪರಿಹಾರದ ಮೊತ್ತ ಸಾಲಕ್ಕೆೆ ಜಮೆ ಮಾಡಿಸಿಕೊಂಡಲ್ಲಿ ಅಂತಹ ಬ್ಯಾಾಂಕ್ ಮ್ಯಾಾನೇಜರ್ಗಳ ಮೇಲೆ ಕ್ರಮ ಜರುಗಿಸಲು ಶಿಾರಸ್ಸು ಮಾಡಲಾಗುವುದು ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ ಅವರು ಎಚ್ಚರಿಸಿದ್ದಾರೆ.
ನ.4ರಂದು ಈ ಕುರಿತು ಸುದ್ದಿಮೂಲದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಬಳಿಕ ಜಿಲ್ಲಾಾಧಿಕಾರಿ ಶಿಲ್ಪಾಾ ಶರ್ಮಾ ಅವರ ಗಮನಕ್ಕೂ ತರಲಾಗಿತ್ತು.
ಖಾತೆಗಳಿಗೆ ಬೀಗ : ಏನಿದೆ ಕ್ರಮ
ಜಿಲ್ಲಾ ಕೇಂದ್ರ ಸಹಕಾರ ಹಾಗೂ ಇತರೆ ಬ್ಯಾಾಂಕ್ ಗಳಲ್ಲಿ ಸಾಲ ಪಡೆದು ಸುಸ್ತಿಿದಾರರಾದ ರೈತರ ಖಾತೆಗಳಿಗೆ ಬೀಗ ಹಾಕಿರುವ ಬ್ಯಾಾಂಕ್ ಗಳು ಹಣ ಡ್ರಾಾ ಮಾಡದಂತೆ ತಡೆ ಹಿಡಿದಿವೆ.
ಬೆಳೆ ಪರಿಹಾರ ಹಣ ಖಾತೆಗಳಿಗೆ ಜಮೆಯಾಗಿದೆ. ಸದರಿ ಹಣ ಖಾತೆಗಳಲ್ಲಿಯೇ ಉಳಿಯಲಿದೆ. ಸಾಲಕ್ಕೂ ಜಮೆಯಾಗುವುದಿಲ್ಲ. ಹಾಗೂ ರೈತರಿಗೂ ಡ್ರಾಾ ಮಾಡಲು ಅವಕಾಶವಿಲ್ಲ. ಹಾಗಾಗಿ, ವಿಶೇಷವಾಗಿ ಡಿಸಿಸಿ ಬ್ಯಾಾಂಕ್ ನಲ್ಲಿ ಖಾತೆ ಹೊಂದಿರುವ ಸುಸ್ತಿಿ ಸಾಲಗಾರ ರೈತರಿಗೆ ಪರಿಹಾರ ಬಂದರೂ ಕೈಗೆ ಮಾತ್ರ ತಲುಪುತ್ತಿಿಲ್ಲ. ಈ ಬಗ್ಗೆೆ ಜಿಲ್ಲಾಡಳಿತ ಕ್ರಮ ಜರುಗಿಸಬೇಕಿದೆ ಎನ್ನುತ್ತಿಿದ್ದಾರೆ ಜಿಲ್ಲೆಯ ರೈತರು.

