ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಪೊಲೀಸ್ ಪೇದೆಗಳಲ್ಲಿ ಎಂಎಸ್ಸಿಿ, ಎಂಬಿಎ ಮೊದಲಾದ ಸ್ನಾಾತಕೋತ್ತರ ಪದವೀಧರರು ಕೂಡಾ ಇದ್ದು ಪೊಲೀಸ್ ನೇಮಕಾತಿ ಅರ್ಹತೆ ಬದಲಾವಣೆಯ ಅಗತ್ಯತೆ ಇದೆ ಎಂಬ ಅಭಿಪ್ರಾಾಯವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವ್ಯಕ್ತಪಡಿಸಿದರು.
ವಿಧಾನಪರಿಷತ್ನಲ್ಲಿ ಪ್ರಶ್ನೋೋತ್ತರ ವೇಳೆ ಸದಸ್ಯರಾದ ಡಿ.ಟಿ.ಶ್ರೀನಿವಾಸ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು,ಪೊಲೀಸ್ ಇಲಾಖೆಗೆ ಬಿಸಿ ರಕ್ತದ ತರುಣರ ಅಗತ್ಯವಿದೆ. ಈ ನಿಟ್ಟಿಿನಲ್ಲಿ ಶೇ.50:50 ಮಾಡಿದರೆ ಯುವ ಅಧಿಕಾರಿಗಳ ಸಂಖ್ಯೆೆ ಕಡಿಮೆ ಆಗುವ ಹಿನ್ನಲೆಯಲ್ಲಿ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಪಿಎಸ್ಐ ಹುದ್ದೆಗೆ ಅನುಭವವುಳ್ಳ ಮತ್ತು ಯುವ ಅಧಿಕಾರಿಗಳನ್ನು ಪರಿಗಣಿಸಿ ನೇರ ನೇಮಕಾತಿ ಮತ್ತು ಮುಂಬಡ್ತಿಿಗೆ ಶೇಕಡ 70:30 ಅನುಪಾತ ನಿಗದಿಪಡಿಸಲಾಗಿದೆ ಎಂದರು.
ಈ ಅನುಪಾತ ನಿಗದಿಯು ಇಲಾಖೆಯ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕೆೆ ಪೂರಕವಾಗಿರುತ್ತದೆ ಎಂದ ಅವರು ಪೋಲೀಸ್ ಇಲಾಖೆಯಲ್ಲಿ ಪಿ.ಎಸ್.ಐ (ಸಿವಿಲ್) ಪ್ರಮುಖ ಹುದ್ದೆಯಾಗಿದ್ದು, ಸಂಬಂಧಪಟ್ಟ ಠಾಣಾ ವ್ಯಾಾಪ್ತಿಿಯ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆೆಯ ನಿರ್ವಹಣೆ, ಅಪರಾಧ ತಡೆಗಟ್ಟುವಿಕೆ, ಅಪರಾಧ ಪ್ರಕರಣಗಳ ಪತ್ತೆೆ ಮತ್ತು ತನಿಖೆ, ಸಂಚಾರ ನಿರ್ವಹಣೆಯು ಇವರ ಮುಖ್ಯ ಕರ್ತವ್ಯವಾಗಿರುತ್ತದೆ. ಈ ಕರ್ತವ್ಯಗಳನ್ನು ನಿರ್ವಹಿಸಲು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾದ ಹಾಗೂ ತಾಂತ್ರಿಿಕ ನೈಪುಣ್ಯತೆಯುಳ್ಳ ಯುವ ಅಧಿಕಾರಿಗಳ ಅವಶ್ಯಕತೆ ಇರುತ್ತದೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಅಪರಾಧ. ಪ್ರಕರಣಗಳು ಹೆಚ್ಚಿಿನ ತಾಂತ್ರಿಿಕತೆಯಿಂದ ಕೂಡಿದ್ದು, ಇಂತಹ ಪ್ರಕರಣಗಳ ಪತ್ತೆೆಗೆ ಹೆಚ್ಚಿಿನ ತಾಂತ್ರಿಿಕ ವಿದ್ಯಾಾರ್ಹತೆಯುಳ್ಳ ಯುವಕರ ಅವಶ್ಯಕತೆ ಇರುತ್ತದೆ ಎಂದು ಅಭಿಪ್ರಾಾಯಪಟ್ಟರು.
ಸೈಬರ್ ಕ್ರೈಮ್ ಹೆಚ್ಚಳ :
ರಾಜ್ಯದಲ್ಲಿ ಸೈರ್ಬ ಕ್ರೈಮ್ ಸಂಖ್ಯೆೆ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿಿದೆ. ಈ ನಿಟ್ಟಿಿನಲ್ಲಿ ಪ್ರತೀ ಪೊಲೀಸ್ಗು ತಾಂತ್ರಿಿಕ ತರಬೇತಿ ನೀಡಲು ಆದ್ಯತೆ ನೀಡಲಾಗುತ್ತಿಿದ್ದು ಪ್ರತಿ ಜಿಲ್ಲೆಯಲ್ಲೂ ತರಬೇತಿ ಪ್ರಯೋಗಾಲಯಗಳನ್ನು ಸ್ಥಾಾಪಿಸಲಾಗುತ್ತಿಿದ್ದು ತಾಂತ್ರಿಿಕ ನೈಪುಣ್ಯತೆಯ ಪೊಲೀಸ್ ಪಡೆ ನಿರ್ಮಾಣಕ್ಕೆೆ ಕ್ರಮ ವಹಿಸಲಾಗುತ್ತಿಿದೆ ಎಂದು ತಿಳಿಸಿದರು.
ಪೊಲೀಸ್ ನೇಮಕಾತಿಗೆ ಅರ್ಹತೆ ಬದಲಾವಣೆ ಅಗತ್ಯ: ಪರಮೇಶ್ವರ್ ಅಭಿಮತ

