ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಮುಖ್ಯಮಂತ್ರಿಿ ಸಿದ್ದರಾಮಯ್ಯ ಕುರ್ಚಿ ಮಾತು ಪ್ರತಿದಿನವೂ ಸದನದ ಒಂದಲ್ಲಾ ಒಂದು ಸಂದರ್ಭದಲ್ಲಿ ಪ್ರಸ್ತಾಾಪವಾಗಿ ಪ್ರತಿಧ್ವನಿಸುತ್ತಿಿದೆ.
ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿಿರುವ ಚಳಿಗಾಲದ ಅಧಿವೇಶನದ ನಾಲ್ಕನೆಯ ದಿನ ಬೆಳಗ್ಗೆೆಯೇ ವಿಧಾನಪರಿಷತ್ ಕಲಾಪದಲ್ಲಿ ಪಾಲ್ಗೊೊಂಡಿದ್ದ ಮುಖ್ಯಮಂತ್ರಿಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಇಬ್ಬರ ಉಪಸ್ಥಿಿತಿಯಲ್ಲಿ ಸಿಎಂ ಖುರ್ಚಿ ವಿಷಯ ಚರ್ಚೆಗೆ ಬಂತು.
ಖಾಲಿ ಹುದ್ದೆ ಭರ್ತಿ ಕುರಿತ ಸದಸ್ಯರ ಪ್ರಶ್ನೆೆಗೆ ಉತ್ತರಿಸಲು ಎದ್ದು ನಿಂತ ಸಿಎಂ ತಾವೇ ತಾವು ಕುಳಿತಿರುವ ಕುರ್ಚಿ ಬಗ್ಗೆೆ ಈ ಕುರ್ಚಿ ಸರಿ ಇಲ್ಲ. ಸ್ವಲ್ಪ ಹಿಂದಕ್ಕೆೆ ಸರಿಸಿ ಎಂದರು.
ಇದೇ ಅವಕಾಶ ಬಳಸಿಕೊಂಡ ಪ್ರತಿಪಕ್ಷಗಳ ಸದಸ್ಯರು ಸಿಎಂ ಕುರ್ಚಿ ಕುರಿತು ಪುಂಖಾನುಪುಂಖವಾಗಿ ಒಬ್ಬೊೊಬ್ಬರೇ ಟೀಕೆ ಟಿಪ್ಪಣಿ ಮಾಡಲು ಶುರುವಿಟ್ಟುಕೊಂಡರು. ನಿಮ್ಮ ಗಾತ್ರಕ್ಕೆೆ ತಕ್ಕ ಕುರ್ಚಿ ಇಲ್ಲ ಅಂತ ಒಬ್ಬರು ಹೇಳಿದರೆ ಸದಸ್ಯ ಭೋಜೇಗೌಡ ಸಿಎಂ ಕುರ್ಚಿನೇ ತೊಂದರೆ ಆದ್ರೆೆ ..ಎಂದರು. ವಿಧಾನಪರಿಷತ್ನಲ್ಲಿ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಾಮಿ ಮುಖ್ಯಮಂತ್ರಿಿ ಅವರ ಕುರ್ಚಿ ಅತಂತ್ರ ಸ್ಥಿಿತಿಯಲ್ಲಿದೆ ಎಂದು ಕಾಲೆಳೆದರು.
ಎಲ್ಲರ ಮಾತಿಗೆ ಪ್ರತಿಕ್ರಿಿಯಿಸಿದ ಸಿಎಂ, ನನ್ನ ಕುರ್ಚಿ ಗಟ್ಟಿಿ ಆಗಿದೆ. ನಿಮ್ಮ ಕುರ್ಚಿ ಗಟ್ಟಿಿ ಆಗಿದೆಯಾ ನೋಡಿ ಎಂದರು. ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ್ ಮಾತ್ರ ಪ್ರತಿಕ್ರಿಿಯಿಸದೇ ಮೌನವಾಗಿದ್ದರು.

