ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.11:
ಮಾದಕವಸ್ತು ಪ್ರಕರಣಗಳ ಸಂಖ್ಯೆೆ ಪ್ರತೀ ವರ್ಷ ಹೆಚ್ಚುತ್ತಿಿರುವ ಕುರಿತು ವಿಧಾನಪರಿಷತ್ನಲ್ಲಿ ವಿಚಾರ ಪ್ರಸ್ತಾಾಪವಾಗಿ ಯುವತಿಯರೂ ಪ್ರಕರಣಗಳಲ್ಲಿ ಭಾಗಿಯಾಗುತ್ತಿಿರುವ ಸಂಖ್ಯೆೆ ಹೆಚ್ಚಿಿರುವುದರ ಕುರಿತು ಕಳವಳ ವ್ಯಕ್ತವಾಯಿತು.
ಪ್ರಶ್ನೋೋತ್ತರ ವೇಳೆ ಸದಸ್ಯ ಅಬ್ದುಲ್ ಜಬ್ಬಾಾರ್ ಪ್ರಶ್ನೆೆಗೆ ಉತ್ತರಿಸಿದ ಗೃಹಸಚಿವ ಡಾ.ಜಿ.ಪರಮೇಶ್ವರ್ ನಮ್ಮ ಸರ್ಕಾರ ಬಂದ ಮೇಲೆ ಮಾದಕ ದ್ರವ್ಯದ ವಿರುದ್ಧ ಸಮರ ಸಾರಲಾಗಿದೆ. ರಾಜ್ಯವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಾಗಿ ಮಾಡುವುದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಪ್ರತೀ ತಿಂಗಳು ಪೊಲೀಸರು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸುವುದರ ಜೊತೆಗೆ ಮಾದಕ ವಸ್ತು ಬಳಕೆ ಮಾಡುತ್ತಿಿದ್ದರೆ ಅವರನ್ನು ಬಂಧಿಸುತ್ತಿಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ಪೊಲೀಸರು ಒಂದೇ ದಿನ ಒಂದು ಸಾವಿರ ಶಾಲೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದ್ದಾರೆ ಎಂದ ಗೃಹ ಸಚಿವರು ಹೆಚ್ಚು ಹೆಚ್ಚು ಸಂಖ್ಯೆೆಯಲ್ಲಿ ವಿದೇಶೀಯರಿಂದರೆ ಡ್ರಗ್ಸ್ ದಂಧೆ ಹೆಚ್ಚುತ್ತಿಿದೆ. ಅವರೂ ಬಂಧಿಸುವುದನ್ನೇ ಕಾಯುತ್ತಿಿರುವಂತಿರುತ್ತದೆ. ಕಳೆದ ವರ್ಷ 300 ವಿದೇಶಿಯರನ್ನು ಗಡೀಪಾರು ಮಾಡಲಾಗಿದ್ದು ಆಫ್ರಿಿಕನ್ನರ ಸಂಖ್ಯೆೆಯೇ ಹೆಚ್ಚಿಿದೆ ಎಂದರು.
ಡ್ರಗ್ಸ್ ಪ್ರಕರಣದಲ್ಲಿ ಅಧಿಕಾರಿಗಳೂ ಭಾಗಿಯಾಗುತ್ತಿಿದ್ದಾರೆ ಎಂದ ಸದಸ್ಯರು ಪೊಲೀಸ್ ಅಧಿಕಾರಿಗಳನ್ನು ಆಗಾಗ ಬದಲಿಸುತ್ತಿಿರಿ. ಪ್ರದೇಶವಾರು ಪೊಲೀಸರನ್ನು ಬದಲಿಸುವಂತೆ ಆಗ್ರಹಿಸಿದಾಗ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದು ಕಂಡು ಬಂದರೆ ಅವರ ವಿರುದ್ಧ ಎ್ಐರ್ಆ ದಾಖಲಿಸಿ ಕ್ರಮ ಕೈಗೊಂಡು ಶಿಕ್ಷೆ ವಿಧಿಸಲಾಗುತ್ತಿಿದೆ ಎಂದರು.
ಕಾನೂನು ಸುವ್ಯವಸ್ಥೆೆ ಸದೃಢವಾಗಿದೆ
ರಾಜ್ಯದಲ್ಲಿಿ ಮಾದಕ ವಸ್ತು ವಿರೋಧಿ ದಳ ಸ್ಥಾಾಪಿಸಲಾಗಿದ್ದು ಈ ಕ್ರಮ ಕೈಗೊಂಡ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದ್ದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆೆ ಹದಗೆಟ್ಟಿಿದೆ ಎಂದು ಸದಸ್ಯರು ಮಾಡಿದ ಆರೋಪ ಸರಿಯಲ್ಲ ಎಂದ ಗೃಹ ಸಚಿವ ಪರಮೇಶ್ವರ್, ಸದಸ್ಯರು ಜವಾಬ್ಧಾಾರಿಯಿಂದ ಹೇಳಿಕೆ ನೀಡಬೇಕು. ಪೊಲೀಸ್ ಎಂಬುದು ರಾಜ್ಯ ಸರ್ಕಾರದ ಆಡಳಿತದ ಕೈಗನ್ನಡಿ ಆಗಿದ್ದು ಪೊಲೀಸರು ಸರಿಯಾಗಿ ಕೆಲಸ ಮಾಡಿಲ್ಲವೆಂದರೆ ಸರ್ಕಾರ ಸರಿಯಾಗಿ ಕೆಲಸ ಮಾಡುತ್ತಿಿಲ್ಲವೆಂದೇ ಅರ್ಥ ಎಂದ ಅವರು ರಾಜ್ಯದಲ್ಲಿ ಪೊಲೀಸರು ಇತರ ರಾಜ್ಯಗಳಂತೆ ಮಷಿನ್ ಗನ್ ಹಿಡಿದು ಗಸ್ತು ತಿರುಗಾಡಬೇಕಾದ ಅಗತ್ಯವಿಲ್ಲ ಎಂದರು.

