ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.11:
ದೊಡ್ಡವರ ವಿರುದ್ಧ ಮಾತನಾಡಿದರೆ ದೊಡ್ಡವನಾಗುವುದಿಲ್ಲ ಎಂಬುದನ್ನು ಲಿಂಗಸಗೂರು ಬ್ಲಾಾಕ್ ಅಧ್ಯಕ್ಷ ಗೊವಿಂದ ನಾಯಕ ಅರ್ಥ ಮಾಡಿಕೊಳ್ಳಬೇಕೆಂದು ಲಿಂಗಸಗೂರು ಎಸ್ಟಿ ಘಟಕದ ತಾಲೂಕಾಧ್ಯಕ್ಷ ಜಗದೀಶಗೌಡ ಪಾಟೀಲ ಹಾಲಭಾವಿ ಹಾಗೂ ಹಿಂದುಳಿದ ವರ್ಗದ ತಾಲೂಕ ಘಟಕದ ಅಧ್ಯಕ್ಷ ಪ್ರಕಾಶ ಕುರಿ ಚಿತಾಪೂರ ಜಂಟಿ ಪತ್ರಿಿಕಾ ಹೇಳಿಕೆ ನೀಡಿದ್ದಾಾರೆ.
ಪಟ್ಟಣದ ಪತ್ರಿಿಕಾ ಭವನದಲ್ಲಿ ಪತ್ರಿಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು ಮಾಜಿ ಸಚಿವ ಅಮರೇಗೌಡ ಬಯ್ಯಾಾಪೂರ ಲಿಂಗಸಗೂರು ಹಾಗೂ ಕುಷ್ಟಗಿ ಕ್ಷೇತ್ರದಿಂದ 5ಬಾರಿ ಶಾಸಕ ಸಚಿವರಾಗಿ ಹತ್ತು ಹಲವಾರು ಅಭಿವೃದ್ಧಿಿ ಕಾರ್ಯ ಮಾಡಿರುತ್ತಾಾರೆ. ಇಂದಿಗೂ ಕ್ಷೇತ್ರದ ಜನತೆ ಜತೆ ನಿತ್ಯದ ಸಮಸ್ಯೆೆಗಳ ಬಗ್ಗೆೆ ನಿಕಟ ಸಂಪರ್ಕ ಹೊಂದಿದ್ದಾಾರೆ. ನೀವು ಕಾಂಗ್ರೆೆಸ್ ಪಕ್ಷಕ್ಕೆೆ ಬರುವ ಮುಂಚೆ ಬಿಜೆಪಿಯಲ್ಲಿದ್ದ ಡಿ.ಎಸ್ ಹೂಲಗೇರಿ ಅವರನ್ನು ಕಾಂಗ್ರೆೆಸ್ ಪಕ್ಷಕ್ಕೆೆ ಕರೆತಂದು 3 ಬಾರಿ ಟಿಕೆಟ್ ಕೊಡಿಸಿ ಶಾಸಕರನ್ನಾಾಗಿಸಿದ ಬಯ್ಯಾಾಪೂರ ಮಾರ್ಗದರ್ಶನ ನಾಯಕತ್ವ ನಿರ್ಲಕ್ಷ್ಯಸಿ ಡಿ.ಎಸ್.ಹೂಲಗೇರಿ ಸೋತಿದ್ದಾಾರೆ. ಕಾಂಗ್ರೆೆಸ್ ಕೊಪ್ಪಳ ಜಿಲ್ಲಾಾಧ್ಯಕ್ಷರಾಗಿರುವ ಅವರ ಬಗ್ಗೆೆ ಹಗುರವಾಗಿ ಮಾತನಾಡುವುದು ನಿಮಗೆ ಶೋಭೆ ತರುವ ವಿಚಾರವಲ್ಲ ಕೂಡಲೆ ನಿಲ್ಲಿಸಬೇಕು.
ತಾಲೂಕು ಪದಾಧಿಕಾರಿಗಳ ನೇಮಕಕ್ಕೆೆ ಮಾನ್ಯತೆ ಇಲ್ಲ ಎಂದಿದ್ದೀರಿ ಮುಂಚೂಣಿ ಘಟಕದ ಅಧ್ಯಕ್ಷರನ್ನು ಜಿಲ್ಲಾಾಧ್ಯಕ್ಷರು ನೇಮಕ ಮಾಡುತ್ತಾಾರೆಂಬ ಪಕ್ಷದ ತತ್ವ-ಸಿದ್ಧಾಾಂತ. ವ್ಯವಸ್ಥೆೆ ನೀವು ಅರ್ಥ ಮಾಡಿಕೊಳ್ಳದೆ ಇನ್ನೂ ಬಿಜೆಪಿ ಆರ್ಎಸ್ಎಸ್ ಗುಂಗಿನಲ್ಲಿರುವಂತಿದೆ. ಇನ್ನೊೊಂದು ಬಣ ನನಗೆ 50ಲಕ್ಷರೂ ಆಮಿಷ ಒಡ್ಡಿಿದೆ ಎಂದು ಹೇಳಿ ನಿಮ್ಮ ರೇಟನ್ನು ನೀವೇ ಹೆಚ್ಚಿಿಸಿ ಕೊಂಡಿದ್ದೀರಿ. ಪಕ್ಷಕ್ಕೆೆ ಬರುವಾಗ 3ಲಕ್ಷರೂ ಪಡೆದ ಬಗ್ಗೆೆ ಸಾಕ್ಷ್ಯ ಸಮೇತ ಬಹಿರಂಗಪಡಿಸುತ್ತೇವೆ. ನಮ್ಮ ನಾಯಕರ ಬಗ್ಗೆೆ ಹಗುರ ಮಾತನಾಡುವುದನ್ನು ಬಿಟ್ಟು, ಪಕ್ಷದ ಸಂಘಟನೆಗೆ ಗಮನಹರಿಸಿ ಲಿಂಗಸುಗೂರು ಕ್ಷೇತ್ರದಲ್ಲಿ ಯಾರೇ ಟಿಕೆಟ್ ತಂದರೂ ಪಕ್ಷದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಶ್ರಮಿಸೋಣವೆಂದರು. ಮೋಹನ ಗೋಸ್ಥೆೆ, ಶರಣಪ್ಪ ಹುನಕುಂಟಿ, ಅಮರೇಶ ನಾಯಕ ಗುರುಗುಂಟಾ, ತಿಮ್ಮಣ್ಣ ನಾಯಕ, ವೆಂಕಪ್ಪ ಕಳ್ಳಲಿಂಗಸುಗೂರು ಇದ್ದರು.
ದೊಡ್ಡವರ ವಿರುದ್ಧ ಮಾತನಾಡಿದರೆ ದೊಡ್ಡವನಾಗುವುದಿಲ್ಲ : ಜಗದೀಶಗೌಡ ಕುರಿ

