ಸುದ್ದಿಮೂಲ ವಾರ್ತೆ ರಾಯಚೂರು, ಡಿ.11:
ರಾಯಚೂರಿನ ವಾರ್ಡ್ ನಂ 13ರಲ್ಲಿ ಬಿಜೆಪಿ ಮುಖಂಡ ರವೀಂದ್ರ ಜಲ್ದಾಾರ್ ಶುದ್ಧ ಕುಡಿಯುವ ನೀರಿನ ಘಟಕಕ್ಕೆೆ ಭೂಮಿ ಪೂಜೆ ನೆರವೇರಿಸಿದರು.
ಇಂದು ಧನಲಕ್ಷ್ಮೀ ಬಡಾವಣೆಯ ಶ್ರೀ ಮಾತೆ ಮಾರುಗೆಮ್ಮ ದೇವಸ್ಥಾಾನದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯೆೆ ಉಮಾ ರವೀಂದ್ರ ಜಲ್ದಾಾರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಹನುಮಂತಪ್ಪ ಯಾದವ, ಶಿವಕುಮಾರ ವಕೀಲ, ಹುಸೇನಪ್ಪ ಗೌಡ, ಭೀಮರಾವ್ ಗಡಗಡೆ, ನಾಗೇಶ ಜಗತ್ಕಾಾರಿ, ಮುದುಕಪ್ಪ ಯಾದವ, ನಾಗಭೂಷಣ ಗೌಡ, ಅಶೋಕ ಕುಮಾರ ಗುತ್ತೇದಾರ, ಸಂಪತ ಕುಮಾರ, ನರಸಿಂಹಲು, ಕಿಶನ್ ರಾವ್, ಹುಲೀಗೆಪ್ಪ, ಶ್ರೀನಿವಾಸ ಗೌಡ, ಗುರುರಾಜ್, ಭೀಮಣ್ಣ ಮಡಿವಾಳ್, ನಾರಾಯಣ ನಾಯಕ ವಕೀಲ, ಶ್ರೀನಿವಾಸ, ಹನುಮಂತಪ್ಪ, ಶ್ರೀ ಮಾತೆ ಮರುಗೆಮ್ಮ ದೇವಿಯ ಸಂಘದ ಸದಸ್ಯರು ಮತ್ತು ಬಡಾವಣೆಯ ಹಿರಿಯರು ಭಾಗವಹಿಸಿದ್ದರು.
ರಾಯಚೂರು : ವಾರ್ಡ್ 13ರಲ್ಲಿ ಶುದ್ಧ ಕುಡಿಯುವ ನೀರು ಘಟಕಕ್ಕೆ ಭೂಮಿ ಪೂಜೆ

