ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.13
ಆಳಂದ ಮತಗಳ್ಳತನ ಪ್ರಕರಣ ಸಂಬಂಧಿಸಿದಂತೆ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಆಳಂದ ಮಾಜಿ ಶಾಸಕ ಸುಭಾಷ ಗುತ್ತೇರ್ದಾ ಪುತ್ರ ಹರ್ಷಾನಂದ ಗುತ್ತೇರ್ದಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರವಷ್ಟೇ ನೋಟಿಸ್ ಕೊಟ್ಟು ಹೇಳಿಕೆ ಪಡೆದುಕೊಂಡಿದ್ದಾರೆ. ಈಗಾಗಲೇ ಈ ಪ್ರಕರಣದಲ್ಲಿ ನಮ್ಮ ಪಾತ್ರ ಏನೂ ಇಲ್ಲಾ ಅಂತ ಹೇಳಿಕೆ ಕೊಟ್ಟಿಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆೆಸ್ ಶಾಸಕ ಬಿ.ಆರ್.ಪಾಟೀಲ್ 2023ರ ಚುನಾವಣೆಯಲ್ಲಿ ಆರೋಪ ಮಾಡಿದ್ದಾರೆ. ಎರಡು ವರ್ಷದಲ್ಲಿ ಈ ಪ್ರಕರಣದಲ್ಲಿ ಯಾವ ಬೆಳವಣಿಗೆ ಕೂಡ ಆಗಿಲ್ಲ. ಇದೀಗ ತಮ್ಮದೇ ಕಾಂಗ್ರೆೆಸ್ ಸರ್ಕಾರ ಇರುವುದರಿಂದ ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ತಂದೆ ಹಾಗೂ ನನ್ನ ಹೆಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಯಾವಾಗ ವೋಟ್ ಚೋರಿ ವಿಚಾರ ಪ್ರಸ್ತಾಾಪಿಸಿದ್ದಾರೋ, ಆಗ ಶಾಸಕ ಬಿ. ಆರ್. ಪಾಟೀಲ್ ರಾಹುಲ್ ಗಾಂಧಿಗೆ ಹತ್ತಿಿರವಾಗಲು ಹಾಗೂ ಸಚಿವ ಸ್ಥಾಾನ ಪಡೆಯಲು, ಈ ಪ್ರಕರಣವನ್ನು ಬಳಸಿಕೊಂಡಿದ್ದಾರೆ. ಒಂದು ವೇಳೆ ನಮ್ಮ ಪಾತ್ರ ದೃಡವಾಗಿದರೆ ನ್ಯಾಾಯಾಲಯದಲ್ಲಿ ಸಾಬೀತು ಪಡಿಸಲಿ ಎಂದು ಹೇಳಿದ ಅವರು, ಎಸ್ಐಟಿ ತಂಡ ಸಲ್ಲಿಸಿರುವ ಚಾರ್ಜ್ ಶೀಟ್ ಒಳಗಡೆಯಿರುವ ಅಂಶಗಳ ಬಗ್ಗೆೆ ನಮಗೆ ಮಾಹಿತಿಯಿಲ್ಲ. ನಮ್ಮ ವಕೀಲರ ಮೂಲಕ ಚಾರ್ಜ್ ಶೀಟ್ ನೋಡುತ್ತೇವೆ ಎಂದು ಹೇಳಿದರು.
ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವೋಟ್ ಚೋರಿ ನೇರೆಟಿವ್ ಸೆಟ್ ಮಾಡಲು ಮುಂದಾಗಿದ್ದಾರೆ. ಕಾಂಗ್ರೆೆಸ್ ಪಕ್ಷ ಜನ ತಿರಸ್ಕಾಾರ ಮಾಡಿದ್ದಾರೆ. ಹೀಗಾಗಿ ವೋಟ್ ಚೋರಿ ಎಂದು ಹೇಳೋಕೆ ಮುಂದಾಗಿದ್ದಾರೆ. ದೆಹಲಿಯಲ್ಲಿ ರಾಹುಲ್ ಗಾಂಧಿ ವೋಟ್ ಚೋರಿ ಸಮಾವೇಶ ಮಾಡಿಕೊಂಡು ಬರುತ್ತಿಿದ್ದಾರೆ. ದೇಶಕ್ಕೆೆ ಮೆಸೆಜ್ ಕೊಡುವ ತರಾತುರಿಯಲ್ಲಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ನಮಗೆ ನ್ಯಾಾಯಾಲಯದ ಮೇಲೆ ಸಂಪೂರ್ಣ ವಿಶ್ವಾಾಸವಿದೆ ಎಂದು ಹೇಳಿದರು.
ಇನ್ನೂ, 2023ರ ವಿಧಾನಸಭಾ ಚುನಾವಣೆಯಲ್ಲಿ ಆಳಂದ ವೋಟ್ ಚೋರಿ ಪ್ರಕರಣಕ್ಕೆೆ ಸಂಬಂಧಿಸಿದಂತೆ ಬೆಂಗಳೂರು ನಗರದ ಎಸಿಎಂಎಂ ನ್ಯಾಾಯಾಲಯಕ್ಕೆೆ ಎಸ್ಐಟಿಯಿಂದ ಈಗಾಗಲೇ 22 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಚಾರ್ಜ್ ಶೀಟ್ ನಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ್, ಹರ್ಷಾನಂದ ಗುತ್ತೇದಾರ್ ಸೇರಿ 7 ಜನರ ಹೆಸರು ಉಲ್ಲೇಖಿಸಲಾಗಿದೆ. ಈಗಾಗಲೇ ಮಾಜಿ ಶಾಸಕ ಸುಭಾಷ ಗುತ್ತೇದಾರ್ ಹಾಗೂ ಅವರ ಪುತ್ರ ಹರ್ಷಾ ಗುತ್ತೇದಾರ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

