ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.13:
ಕಡಿಮೆ ಪ್ರಮಾಣದಲ್ಲಿ ಸಂಪನ್ಮೂಲಗ ಬಳಕೆ ಮಾಡಿಕೊಂಡು ಉತ್ತಮ ಉತ್ಪಾಾದನೆ ಮಾಡಿ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಪ್ರತಿ ಉದ್ಯಮ ಮತ್ತು ಉದ್ಯಮಿಯ ಸವಾಲಾಗಿರುತ್ತದೆ ಎಂದು ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಧ್ಯಕ್ಷ ಅವ್ವಾಾರು ಮಂಜುನಾಥ್ ಅವರು ತಿಳಿಸಿದ್ದಾಾರೆ.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆ, ಇಂಟರ್ ನ್ಯಾಾಷನಲ್ ಕಾಪರ್ ಅಸೋಸಿಯೇಶನ್ ಆ್ ಇಂಡಿಯಾ ಹಾಗೂ ಎನರ್ಜಿ ಎಫಿಶಿಯನ್ಸಿಿ ಸರ್ವಿಸಸ್ ಲಿಮಿಟೆಡ್ನ ಜಂಟಿ ಸಹಭಾಗಿತ್ವದಲ್ಲಿ ನಡೆದ ಕೈಗಾರಿಕೆಗಳು ಮತ್ತು ಬಂಡವಾಳ ಹೂಡಿಕೆದಾರರಿಗೆ ಹೊಸ ದಿಕ್ಕನ್ನು ಮೂಡಿಸುವ ‘ವಿಶ್ವಾಾಸಾರ್ಹತೆಯ ವೇಗವರ್ಧನೆ’ಯ ಕಾರ್ಯಾಗಾರ ಶುಕ್ರವಾರ ಉದ್ಘಾಾಟಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚುತ್ತಿಿದೆ. ಸ್ಪರ್ಧಾತ್ಮಕ ಮಾರುಕಟ್ಟೆೆಯಲ್ಲಿ ಕೈಗಾರಿಕೆಗಳು ಉತ್ಪನ್ನದ ಗುಣಮಟ್ಟ, ಬೆಲೆ – ಸಕಾಲಿಕ ಸೇವೆ ಇನ್ನಿಿತರೆಗಳ ಕುರಿತು ವಿಶೇಷ ಗಮನ ನೀಡಬೇಕು. ಉದ್ಯಮದ ಬೆಳವಣಿಗೆಯ ಕಾರ್ಯಕ್ಷಮತೆ ಮತ್ತು ವಿಶ್ವಾಾಸಾರ್ಹತೆಯ ಕಡೆಗೆ ಉದ್ಯಮಿಗಳು ವಿಶೇಷ ಗಮನ ನೀಡಬೇಕಿದೆ ಎಂದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಅತಿಥಿಗಳಾಗಿ – ಉದ್ಯಮದಲ್ಲಿ ಕಾರ್ಯಕ್ಷಮತೆ ಹೆಚ್ಚಿಿಸುವುದು ಎಂದರೆ ಕಡಿಮೆ ಪ್ರಮಾಣದ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಹೆಚ್ಚಿಿನ ಪ್ರಮಾಣದಲ್ಲಿ – ಗುಣಮಟ್ಟದ ಉತ್ಪಾಾದನೆ ಮಾಡುವುದು. ಈ ನಿಟ್ಟಿಿನಲ್ಲಿ ಯಂತ್ರೋೋಪಕರಣಗಳ ವೇಗ ಮತ್ತು ನಿರ್ವಹಣೆ – ಸುರಕ್ಷತೆ, ಆಧುನಿಕ ತಂತ್ರಜ್ಞಾಾನದ ಬಳಕೆ, ಡೇಟಾ ವಿಶ್ಲೇಷಣೆ ಇನ್ನಿಿತರೆಗಳ ಕುರಿತು ವಿಶೇಷ ಗಮನ ನೀಡಬೇಕು ಎಂದರು.
ಇಂಟರ್ ನ್ಯಾಾಷನಲ್ ಕಾಪರ್ ಅಸೋಸಿಯೇಶನ್ ಆ್ ಇಂಡಿಯಾದ ಯೋಜನಾ ವ್ಯವಸ್ಥಾಾಪಕ ಮೋಹಿತ್ ಗುಪ್ತ ಅವರು ಸ್ವಾಾಗತ ಕೋರಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಸಲ್ಲಿಸದರು. ಎನರ್ಜಿ ಎಫಿಶಿಯನ್ಸಿಿ ಸರ್ವಿಸಸ್ ಲಿಮಿಟೆಡ್ನ ಅಭಿಶೇಕ್ ಗುಪ್ತ ಮತ್ತು ಶಂತನು ದೇಬ್ನಾಥ್ ಅವರು ಸಂಪನ್ಮೂಲ ವ್ಯಕ್ತಿಿಗಳಾಗಿ ಉಪನ್ಯಾಾಸ ನೀಡಿದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಹಿರಿಯ ಉಪಾಧ್ಯಕ್ಷ ಎಸ್. ದೊಡ್ಡನಗೌಡ, ಸ್ಪಾಾಂಜ್ ಐರನ್ ಅಸೋಸಿಯೇಷನ್ನ ಕಾರ್ಯದರ್ಶಿ ಎಸ್.ಪಿ. ವೆಂಕಟೇಶ್, ಕೋಲ್ಡ್ ಸ್ಟೋೋರೇಜ್ ಅಸೋಸಿಯೇಷನ್ ಅಧ್ಯಕ್ಷ ಬಿ. ಸತ್ಯಬಾಬು, ಕಾಟನ್ ಅಸೋಸಿಯೇಷನ್ನ ಅಧ್ಯಕ್ಷರಾದ ಡಿ. ತಿಪ್ಪೇಸ್ವಾಾಮಿ ಅವರು ವೇದಿಕೆಯಲ್ಲಿ ಉಪಸ್ಥಿಿತರಿದ್ದರು.
ಬಳ್ಳಾಾರಿ ಜಿಲ್ಲಾಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾಾನಿತರು, ವಿಶೇಷ ಸಮನ್ವಯ ಸಮಿತಿ ಸದಸ್ಯರು, ವಿವಿಧ ಸಂಘ – ಸಂಸ್ಥೆೆಗಳ ಪದಾಧಿಕಾರಿಗಳು ಉಪಸ್ಥಿಿತರಿದ್ದರು.
ಕಡಿಮೆ ಸಂಪನ್ಮೂಲಗಳನ್ನು ಬಳಸಿ ಉತ್ತಮ ಮತ್ತು ಗುಣಮಟ್ಟದ ಉತ್ಪಾಾದನೆಯ ಗುರಿ : ಅವ್ವಾರು ಮಂಜುನಾಥ್

