ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ವಾದ)ದಿಂದ ಬೆಂಗಳೂರಿನಲ್ಲಿ ಡಿ.21ರಂದು ಪರ್ಯಾಯ ರಾಜಕಾರಣಕ್ಕಾಾಗಿ ಜನದನಿ ರ್ಯಾಾಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ಹಮ್ಮಿಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾಾ ಕಾರ್ಯದರ್ಶಿ ಕೆ.ಜಿ.ವೀರೇಶ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, ರಾಯಚೂರು ಸೇರಿ ರಾಜ್ಯದ ಎಲ್ಲ ಜಿಲ್ಲೆೆಗಳಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಮನೆಗಳಿಗೆ ತೆರಳಿ ಸರ್ಕಾರಗಳ ಜನ ವಿರೋಧಿ ಧೋರಣೆ ಬಗ್ಗೆೆ ಮಾಹಿತಿ ನೀಡಲಾಗಿದೆ. ಕರಪತ್ರ ಹಂಚಿದ್ದೇವೆ ಕಿರು ಪುಸ್ತಕ ಕೊಟ್ಟಿಿದ್ದೇವೆ. ಇದೀಗ ಅಂತಿಮವಾಗಿ ಬೃಹತ್ ಪ್ರತಿಭಟನಾ ಸಭೆ ಹಮ್ಮಿಿಕೊಂಡಿದ್ದಾಾಗಿ ಹೇಳಿದರು.
ಈ ಸಭೆಯಲ್ಲಿ ಪಕ್ಷದ ಪಾಲಿಟ್ ಬ್ಯೂರೊ ಸಮಿತಿ ಸದಸ್ಯ ಯು.ವಾಸುಕಿ, ರಾಜ್ಯದ ನಾಯಕರು ಭಾಷಣ ಮಾಡಲಿದ್ದಾಾರೆ. ಬಗರಹುಕುಂ ಸಾಗುವಳಿದಾರರ ಸಮಸ್ಯೆೆಘಿ, ಭೂಸ್ವಾಾಧೀನ ಚಟುವಟಿಕೆ ನಿರಂತರವಾಗಿ ನಡೆಯುತ್ತಿಿದೆ ಎಲ್ಲ ಕಡೆಗೂ ಕೃಷಿ ಬಿಕ್ಕಟ್ಟು ಎದುರಾಗಿದ್ದು ಕನಿಷ್ಟ ಬೆಂಬಲ ಬೆಲೆ ನೀಡುತ್ತಿಿಲ್ಲಘಿ, ಕಾರ್ಮಿಕ ಕಾಯಿದೆಗಳ ರದ್ದು ಪಡಿಸಿ ಮೂರು ಸಂಹಿತೆ ಮಾಡಿ ಬಂಡವಾಳ ಶಾಹಿಗಳ ಪರ ಒಲವು, ಗುತ್ತಿಿಗೆ ಪದ್ಧತಿ ಹೆಚ್ಚಳ, ಕಾರ್ಮಿಕರಿಗೆ ಸೌಲಭ್ಯ ವಿಸ್ತರಣೆಗೂ ಒತ್ತಾಾಯಿಸಲಾಗುವುದು ಎಂದ ಅವರು, ನಿರುದ್ಯೋೋಗಿಗಳಿಗೆ ಮಾಸಿಕ 5 ಸಾವಿರ ಭತ್ಯೆೆ ಎಲ್ಲರಿಗೂ ವಿಸ್ತರಿಸಬೇಕು, ತಳಮಟ್ಟದಿಂದ ಭ್ರಷ್ಟಾಾಚಾರ ನಿರ್ಮೂಲನೆ ಮಾಡಬೇಕು, ವಸತಿ ರಹಿತರಿಗೆ ನಿವೇಶನ ಹಂಚಲು ಸೇರಿ ಸುಮಾರು 19 ಬೇಡಿಕೆಗಳ ಕುರಿತು ವಿಚಾರ ಮಂಡಿಸಿ ಸರ್ಕಾರಗಳಿಗೆ ಈಡೇರಿಸಲು ಒತ್ತಾಾಯಿಸುವುದಾಗಿ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಿಯಲ್ಲಿ ಪಕ್ಷದ ಸದಸ್ಯ ಡಿ.ಎಸ್.ಶರಣಬಸವ, ನಾಗೇಂದ್ರ ಇದ್ದರು.

