ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ವಿದ್ಯಾಾರ್ಥಿಗಳಿಗೆ ಶೈಕ್ಷಣಿಕ ಪಠ್ಯದ ಜೊತೆಗೆ ಕೌಶಲ್ಯ ತರಬೇತಿ ನೀಡುತ್ತಿಿರುವ ನಾಂದಿ ೌಂಡೇಶನ್ ಕಾರ್ಯ ಶ್ಲಾಾಘನೀಯ ಎಂದು ತಾಲೂಕಿನ ಸಗಮಕುಂಟಾ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆ ಪ್ರಭಾರಿ ಮುಖ್ಯೋೋಪಾಧ್ಯಾಾಯ ಶಿವರಾಜ್ ಹೇಳಿದರು.
ಗ್ರಾಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಕೆ ಸಿ ಮಹೇಂದ್ರ ಶಿಕ್ಷಣ ಸಂಸ್ಥೆೆ ಮತ್ತು ನಾಂದಿ ೌಂಡೇಶನ್ ನಿಂದ 6 ಮತ್ತು 7ನೇ ತರಗತಿ ವಿದ್ಯಾಾರ್ಥಿಗಳಿಗೆ 40 ಗಂಟೆಗಳ ಕಾಲ ಕೌಶಲ್ಯ ತರಬೇತಿ ಕಾರ್ಯಕ್ರಮದ ಕೊನೆಯ ದಿನ ವಿದ್ಯಾಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು. ಕೌಶಲ್ಯ ತರಬೇತಿ ಪಡೆಯುವ ವಿದ್ಯಾಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಸಾಕಷ್ಟು ಉಪಯುಕ್ತವಾಗಲಿದೆ ಎಂದರು.
ವಿದ್ಯಾಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಕೌಶಲ್ಯ ತರಬೇತಿ ಮಾಡಿರುವ ವಿಷಯಗಳು ನಿಜಕ್ಕೂ ಉತ್ತಮವಾಗಿದೆ. ಎಲ್ಲ ವಿಷಯಗಳು ವಿದ್ಯಾಾರ್ಥಿಗಳ ಜೀವನ ರೂಪಿಸಿಕೊಳ್ಳುವಲ್ಲಿ ಸಾಕಷ್ಟು ಅನುಕೂಲವಾಗುವಂತಹ ವಿಷಯಗಳಾಗಿದ್ದು, ವಿದ್ಯಾಾರ್ಥಿಗಳು ಇದನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಂದಿ ೌಂಡೇಶನ್ ಕೌಶಲ್ಯ ತರಬೇತುದಾರರಾದ ನೀಲಕಂಠ ಸ್ವಾಾಮಿ, ಕುಪ್ಪಮ್ಮ ತಲ್ಲಿ, ನಂದಿನಿ ಮತ್ತು ಸಹ ಶಿಕ್ಷಕರು ಉಪಸ್ಥಿಿತರಿದ್ದರು.
ಸಗಮಕುಂಟಾ : ಪಠ್ಯದ ಜೊತೆ ಕೌಶಲ್ಯ ತರಬೇತಿ ಸದ್ಬಳಕೆ ಮಾಡಿಕೊಳ್ಳಿ- ಶಿವರಾಜ್

