ಸುದ್ದಿಮೂಲ ವಾರ್ತೆ ರಾಯಚೂರು , ಡಿ.13:
ಜಿಲ್ಲೆೆಯ ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮಹದೇವಯ್ಯ ಅವರನ್ನು ಮಾತೃ ಇಲಾಖೆಗೆ ದಿಢೀರ್ ಮರಳಿ ನಿಯುಕ್ತಿಿಗೊಳಿಸಲಾಗಿದೆ.
ಇದೇ ವರ್ಷದ ೆಬ್ರವರಿಯಲ್ಲಿ ದೇವದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ವರ್ಗವಾಗಿ ಬಂದಿದ್ದ ಮಹದೇವಯ್ಯ ಅವರನ್ನು ಜವಾಬ್ದಾಾರಿ ನಿರ್ಲಕ್ಷದ ಆಧಾರದ ಮೇಲೆ ಶುಕ್ರವಾರ ಕಲಬುರ್ಗಿ ಅಪರ ಆಯುಕ್ತರ ಕಚೇರಿಗೆ ವರದಿ ಮಾಡಿಕೊಳ್ಳಲು ಆದೇಶಿಸಲಾಗಿದೆ.
ತಾಲೂಕಿನಲ್ಲಿ ಇತ್ತೀಚೆಗೆ ಸಿಇಓ ಈಶ್ವರಕುಮಾರ ಕಾಂದೂ ಅವರು ವಿವಿಧ ಶಾಲೆಗಳ ಭೇಟಿ ಮಾಡಿದ್ದರು. ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಳದಲ್ಲಿ ನಿರ್ಲಕ್ಷ , ಸೌಕರ್ಯಗಳ ಕಡೆಗಣನೆ, ಶಾಲಾ ಭೇಟಿ, ಎಸ್ಎಸ್ಎಲ್ಸಿ ಲಿತಾಂಶ ಸುಧಾರಣೆ ಕಾರ್ಯಕ್ರಮಗಳಲ್ಲಿ ಲೋಪದ ಕಾರಣದಿಂದ ಬಿಇಓ ಸ್ಥಾಾನ ತೊರೆದು ಮೂಲ ಕಚೇರಿಗೆ ವರದಿ ಮಾಡಿಕೊಳ್ಳಲು ಸೂಚಿಸಿದ್ದಾಾಗಿ ಮೂಲಗಳು ತಿಳಿಸಿವೆ.
ಬಿಇಓ ಆದ ಮೇಲೆ ಮಹದೇವಯ್ಯ ಅವರು ಮಕ್ಕಳ ಶೂ ಸಾಕ್ಸ್ ಖರೀದಿ, ವಿತರಣೆಯ ಜವಾಬ್ದಾಾರಿ ಮುಖ್ಯ ಗುರುಗಳಿಗೆ ವಹಿಸಿ ಆದೇಶಿಸಿ ಮೆಚ್ಚುಗೆ ಗಳಿಸಿದ್ದರು.
ದೇವದುರ್ಗ ಬಿಇಓ ದಿಢೀರ್ ಎತ್ತಂಗಡಿ

