ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.13:
ಈಡಿಗ ಬಿಲ್ಲವ, ನಾಮಧಾರಿ, ಧೀವರ, ತೀಯ ಸೇರಿದಂತೆ 26 ಪಂಗಡಗಳನ್ನು ಹೊಂದಿದ ಸಮಾಜದ ಬೇಡಿಕೆ ಈಡೇರಿಕೆಗಾಗಿ ಜ.6 ರಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಿಪೀಠ ಕರದಾಳದಿಂದ ಬೆಂಗಳೂರುವರೆಗೆ 41 ದಿನದ 700 ಕಿಮೀ ಐತಿಹಾಸಿಕ ಪಾದಯಾತ್ರೆೆ ನಡೆಯಲಿದೆ ಎಂದು ಚಿತ್ತಾಾಪುರ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಿಪೀಠದ ಪೀಠಾಧಿಪತಿ ಡಾ.ಶ್ರೀ ಪ್ರಣವಾನಂದ ಸ್ವಾಾಮೀಜಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆೆ ಹೊಂದಿರುವ ಈಡಿಗ ಸಮುದಾಯಕ್ಕೆೆ ಪ್ರಾಾತಿನಿಧ್ಯ ಸಿಕ್ಕಿಿಲ್ಲ. ಕಾರವಾರ, ಮಂಗಳೂರು, ಶಿವಮೊಗ್ಗ ಕಡೆಗಳಲ್ಲಿ ಸಮುದಾಯ ಹೆಚ್ಚಿಿದೆ. ಹಿಂದೆ ಸೇಂಧಿ ಇಳಿಸಿ ಮಾರಾಟ ಮಾಡಿ ಜೀವನ ಸಾಗಿಸುತ್ತಿಿದ್ದರು. ಈ ವೃತ್ತಿಿಗೂ ಕುತ್ತು ಬಂದಿದೆ.
ಲಿಕ್ಕರ್, ಗುಟ್ಕಾಾ, ಪಬ್, ಬಾರ್ ಬಂದ್ ಮಾಡದೆ, ಸೇಂಧಿ ಮಾರಾಟಕ್ಕೆೆ ನಿಷೇದ ಏರಲಾಗಿದೆ. ಈ ಹಿನ್ನೆೆಲೆಯಲ್ಲಿ ಜ.6 ರಿಂದ ಚಿತ್ತಾಾಪುರ ಹತ್ತಿಿರದ ಕರದಾಳದಿಂದ ಆರಂಭಗೊಳ್ಳುವ ಐತಿಹಾಸಿಕ ಪಾದಯಾತ್ರೆೆಯು ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ, ಚಿತ್ರದುರ್ಗ ಜಿಲ್ಲೆೆಗಳ ಮೂಲಕ ಬೆಂಗಳೂರು ತಲುಪಲಿದೆ. ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿಿ ನಿಗಮಕ್ಕೆೆ ಕೂಡಲೇ 500 ಕೋಟಿ ರೂ. ಬಿಡುಗಡೆ ಮಾಡಬೇಕು ಸೇರಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆೆ ನಡೆಸಲಾಗುತ್ತಿಿದೆ ಎಂದರು.
ಸಮುದಾಯದ ತಾಲೂಕು ಅಧ್ಯಕ್ಷ ಎ.ಎಸ್.ಗೌಡ, ಪ್ರಮುಖರಾದ ಆರ್.ಪದ್ಮನಾಭ, ಪವನಕುಮಾರ, ಎಂ.ಎ.ರಾಜು, ಶೇಖರ, ರಾಮಕೃಷ್ಣ, ಸುರೇಂದ್ರ ಇದ್ದರು.

