ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.13
ನಗರದ ಶ್ರೀ ದಾಸಾನುಗ್ರಹ ಪ್ರತಿಷ್ಠಾಾನದ ಪ್ರಥಮ ವಾರ್ಷಿಕೋತ್ಸವ ಇತ್ತೀಚೆಗೆ ಸುಕ್ಷೇತ್ರ ಮಳಖೇಡದ ಶ್ರೀ ಜಯತೀರ್ಥರ ಮೂಲವೃಂದಾವನ ಸನ್ನಿಿಧಾನದಲ್ಲಿ ಆಚರಿಸಲಾಯಿತು.
ಕಳೆದ ವರ್ಷ ಪ್ರತಿಷ್ಠಾಾನವನ್ನು ಉದ್ಘಾಾಟಿಸಿ ಹರಸಿದ್ದ ಶ್ರೀಮದುತ್ತರಾದಿ ಮಠದ ಪೀಠಾಧಿಪತಿಗಳಾದ ಶ್ರೀ ಸತ್ಯಾಾತ್ಮತೀರ್ಥ ಶ್ರೀಪಾದಂಗಳವರು ಪ್ರಥಮ ವಾರ್ಷಿಕೋತ್ಸವ ಸಂದರ್ಭದಲ್ಲೂ ಸಾನ್ನಿಿಧ್ಯ ವಹಿಸಿ ಪ್ರತಿಷ್ಠಾಾನದ ಕಾರ್ಯ ಚಟುವಟಿಕೆಗಳ ಬಗ್ಗೆೆ ತಿಳಿದುಕೊಂಡು ಹರ್ಷ ವ್ಯಕ್ತಪಡಿಸಿದರು. ಪ್ರತಿಷ್ಠಾಾನವು ಇದೇ ರೀತಿ ಮುಂದೆಯೂ ಜ್ಞಾನಕಾರ್ಯ ಮುಂದುವರಿಸಲಿ ಎಂದು ಹಾರೈಸಿದರು.
ಶ್ರೀ ಅಕ್ಷೆನಥಭ್ಯತೀರ್ಥರ ಆರಾಧನೆ ಪ್ರಯುಕ್ತ ಪ್ರತಿಷ್ಠಾಾನ ಮುದ್ರಿಿಸಿದ ಅವರ ಜೀವನ ಚರಿತ್ರೆೆ ಮತ್ತು ಹಿತೋಕ್ತಿಿಯ ಕರಪತ್ರಗಳನ್ನು ಶ್ರೀ ಸತ್ಯಾಾತ್ಮತೀರ್ಥರು ಬಿಡುಗಡೆಗೊಳಿಸಿದರು.
ದಾಸಾನುಗ್ರಹ ಪ್ರತಿಷ್ಠಾನ ಪ್ರಥಮ ವಾರ್ಷಿಕೋತ್ಸವ ಆಚರಣೆ

