ಸುದ್ದಿಮೂಲ ವಾರ್ತೆ ಸಂಡೂರು, ಡಿ.13:
ರಕ್ತದ ಅಗತ್ಯ ದಿನೇ ದಿನೇ ಹೆಚ್ಚುತ್ತಿಿದ್ದು ರಕ್ತದಾನದ ಮಹತ್ವ ಮತ್ತು ಅನಿವಾರ್ಯತೆಗಳ ಕುರಿತು ಜಾಗೃತಿ ಮೂಡಿಸಲು ಶ್ರೀಶೈಲೇಶ್ವರ ವಿದ್ಯಾಾಕೇಂದ್ರವು ವಿಶೇಷ ಪ್ರಯತ್ನ ನಡೆಸುತ್ತಿಿದೆ ಎಂದು ಸಂಸ್ಥೆೆಯ ಆಡಳಿತಾಧಿಕಾರಿಗಳಾದ ಕುಮಾರ್ ಎಸ್. ನಾನಾವಟೆ ಅವರು ತಿಳಿಸಿದ್ಧಾಾರೆ.
ಶ್ರೀಶೈಲೇಶ್ವರ ವಿದ್ಯಾಾಕೇಂದ್ರ ಮತ್ತು ಭಾರತೀಯ ಸುರಾಜ್ಯ ಸಂಸ್ಥೆೆ ಹಾಗೂ ಹೆಚ್.ಡಿ.ಎ್.ಸಿ. ಬ್ಯಾಾಂಕ್ ಇವರುಗಳ ಜಂಟಿ ಸಹಯೋಗದಲ್ಲಿ ನಡೆದ ‘ಸ್ವಯಂ ಪ್ರೇೇರಿತ ರಕ್ತದಾನ ಶಿಬಿರ’ವನ್ನು ಉದ್ಘಾಾಟಿಸಿ ಅವರು ಮಾತನಾಡಿದರು.
ರಕ್ತದಾನ ಶಿಬಿರಗಳು ಮಾನವೀಯತೆ ಮತ್ತು ಸೇವೆಯ ಗುಣಗಳನ್ನು ಬೆಳೆಸುವ ಉತ್ತಮ ಮಾರ್ಗವಾಗಿವೆ. ಸಮಾಜದಲ್ಲಿ ರಕ್ತದಾನದ ಕುರಿತು ಜಾಗೃತಿ ಮೂಡಿಸಿ ಅನೇಕ ಜೀವಗಳನ್ನು ರಕ್ಷಿಸಲು ಸಹಕಾರಿಯಾಗುತ್ತವೆ. ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ರಕ್ತದ ಅಗತ್ಯ ಇರುವವರಿಗೆ ಜೀವದಾನ ಮಾಡಬಹುದು ಎಂದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಭರತ್ ಕುಮಾರ್, ಬಳ್ಳಾಾರಿಯ ಸ್ವಾಾಮಿ ವಿವೇಕಾನಂದ ರಕ್ತ ಬಂಡಾರದ ಮಂಜುನಾಥ, ಎಚ್ಡಿಎ್ಸಿ ಬ್ಯಾಾಂಕ್ನ ತೋರಣಗಲ್ಲು ಶಾಖೆಯ ವ್ಯವಸ್ಥಾಾಪಕ ಸಾಗರ್ ಅವರು ವೇದಿಕೆಯಲ್ಲಿದ್ದರು.
ಶಿಕ್ಷಣ ಸಂಸ್ಥೆೆಯ ಬಿಇಡಿ ಮತ್ತು ಡಿಗ್ರಿಿ ಕಾಲೇಜ್ ಹಾಗೂ ಸಿಬಿಎಸ್ಇ ಪ್ರಾಾಂಶುಪಾಲರು, ಸಂಯೋಜಕರು, ಆರೋಗ್ಯ ಸಿಬ್ಬಂದಿಗಳು, ಬಿಇಡಿ ಪ್ರಶಿಕ್ಷಣಾರ್ಥಿಗಳು, ಡಿಗ್ರಿಿ ವಿದ್ಯಾಾರ್ಥಿಗಳು, ಪೋಷಕರು, ಶಾಲಾ ಸಿಬ್ಬಂದಿಗಳು ಉಪಸ್ಥಿಿತರಿದ್ದು ಸ್ವಯಂ ಪ್ರೇೇರಿತರಾಗಿ ರಕ್ತದಾನ ಮಾಡಿದರು.
ಸ್ವಯಂ ಪ್ರೇೇರಿತ ರಕ್ತದಾನ ಶಿಬಿರದಲ್ಲಿ 120 ಮಂದಿ ಸ್ವಯಂ ಪ್ರೇೇರಿತರಾಗಿ ರಕ್ತದಾನ ಮಾಡಿದರು.
ಸಂಡೂರು : ಶ್ರೀಶೈಲೇಶ್ವರ ವಿದ್ಯಾಕೇಂದ್ರದಲ್ಲಿ ಉಚಿತ ರಕ್ತದಾನ ಶಿಬಿರ

