ಗದ್ಯ ಸುರಿಯುವ ಮಲೆನಾಡಿನ ಮಳೆಯಾದರೆ ಕಾವ್ಯ ಆಗಾಗ ಮೂಡುವ ಕೋಲ್ಮಿಿಂಚು, ಗುಡುಗು, ಸಿಡಿಲು! ಕಾವ್ಯ ಅಂತರಂಗ ಬಹಿರಂಗಗಳ ಸಮಾಗಮದಿಂದ ಉಗಮಗೊಂಡು ಹರಿಯುವ ಝರಿ! ಕಾವ್ಯ ಅಕ್ಷರಗಳ ಕಲರವ! ನವಿಲ ನರ್ತನ! ಒಮ್ಮೊೊಮ್ಮೆೆ ಜಲಪಾತದ ಭೋರ್ಗರೆತ! ಅದು ಆಗಸದಲ್ಲಿ ಹಾರಾಡಿದರೂ ದಿಗಂತದಲ್ಲಿ ಮರೆಯಾದರೂ ರಾತ್ರಿಿ ಬಂದು ಮಲಗುವುದು ಸಹೃದಯಿ ಓದುಗನ ಮನಸ್ಸಿಿನಲ್ಲಿ!
ಕನ್ನಡ ಕಾವ್ಯ ಪರಂಪರೆ ಆದಿ ಕವಿ ಪಂಪನಿಂದ ಇಂದಿನವರೆಗೆ ಹಲವಾರು ಶತಮಾನಗಳ ಹಾದಿಯನ್ನು ಹಾಯ್ದು ಬಂದಿದೆ. ಜಗದ ಆಗು ಹೋಗುಗಳನ್ನು ಕುತೂಹಲದಿಂದ ಅವಲೋಕಿಸಿ ಸ್ಪಂದಿಸಿದೆ.
ಹಲವಾರು ಪ್ರಕಾರಗಳಲ್ಲಿ ಹಲವಾರು ರೂಪಗಳಲ್ಲಿ ಕಣ್ಣು ಮಿಟುಕಿಸದೆ! ಹೊಸ ಕನಸುಗಳನ್ನು ಬಿತ್ತುವ ಬೆಳೆಸುವ ನಿಟ್ಟಿಿನಲ್ಲಿ ಅನವರತ ಕಾರ್ಯ ಪ್ರವೃತ್ತವಾಗಿದೆ.
ನಮ್ಮ ಸುತ್ತಮುತ್ತಲಿನ ಸಮಕಾಲೀನ ಸಹೃದಯಿ ಕವಿಗಳಲ್ಲಿ ಡಾ.ರವಿ ರಾಜೇಶ್ವರ ಅವರು ಪ್ರಮುಖರು. ಕುಟುಂಬ ವೈದ್ಯರಾಗಿ ಹಲವಾರು ದಶಕಗಳ ಸುದೀರ್ಘ ಸೇವೆಯಲ್ಲಿ ಅವರ ಅನುಭವ ಪಕ್ವವಾಗಿ ಅವರ ಅಕ್ಷರಗಳು ಸಾಲುಗಳಾಗಿ, ಸಾಲುಗಳು ಕವನಗಳಾಗಿ ಅಮೂರ್ತ ಭಾವಗಳು ಮೂರ್ತವಾಗುವುದು ಕಾವ್ಯಾಾಸಕ್ತರಿಗೆ ರಸದೌತಣ. ತಮ್ಮ ಚೊಚ್ಚಲ ಕವನ ಸಂಕಲನ ೞಮಗಳಂಥ ಕವನಗಳೞ ಮೂಲಕ ತಮ್ಮ ಓದುಗ ಅಭಿಮಾನಿಗಳಿಗೆ ಆಪ್ತರಾದ ಡಾ. ರವಿ ರಾಜೇಶ್ವರ ಅವರು ತಮ್ಮ ದ್ವಿಿತೀಯ ಕವನ ಸಂಕಲನ ಒಲಿದಂತೆ ಹಾಡು ಮೂಲಕ ಮತ್ತಷ್ಟು ಆಪ್ತರಾಗುತ್ತಿಿದ್ದಾರೆ.
ಮುನ್ನುಡಿಯಲ್ಲಿ ಡಾ.ಶಿವಾನಂದ ಕುಬಸದ ಅವರು ಸಮಾಜಕ್ಕೆೆ ಕೇಡಿಲ್ಲದಂತೆ ಬರೆಯುವುದು ಮತ್ತು ಬದುಕುವುದು ಒಂದು ಕಲೆ ಮತ್ತು ಕವಿಯ ಬದ್ಧತೆ ಎಂದು ಉಲ್ಲೇಖಿಸುತ್ತಾಾ ಡಾ.ರವಿ ರಾಜೇಶ್ವರ ಅವರು ಅಷ್ಟೇ ಮುತುವರ್ಜಿಯಿಂದ ಪಾಲಿಸುತ್ತಾಾರೆ ಎಂದು ತಿಳಿಸುತ್ತಾಾರೆ. ವೈದ್ಯ ಸಾಹಿತಿಗಳ ಗುಂಪಿನಲ್ಲಿ ಮೃದು ಮನದ ಸವಿ ಮಾತಿನ ನಮ್ರತೆಯೇ ಮೈವೆತ್ತಂಥ ಹೃದಯಂಗಮ ಕವಿತೆಗಳನ್ನು ರಚಿಸುವ ಕವಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರವರು ಎನ್ನುವ ಕುಬಸದ ಅವರು ‘ ಕವಿಗೆ ಬರೆದ ಕವಿತೆ ತೃಪ್ತಿಿ ತಂದಂದು ಕವಿಯೊಳಗಿನ ಕವಿ ಇನ್ನಿಿಲ್ಲವಾಗುತ್ತಾಾನಂತೆ. ಆದುದರಿಂದ ಅವರ ಕವಿತೆ ಅವರಿಗೆ ತೃಪ್ತಿಿ ತರದಿರಲಿ. ಅದರಿಂದ, ಅವರಿಂದ ಇನ್ನಷ್ಟು ಕವನಗಳು ಹರಿದು ಬರಲಿ’ ಎಂದು ಬಯಸುತ್ತಾಾರೆ!
ತಮ್ಮ ಮೊದಲ ಮಾತುಗಳಲ್ಲಿ ಡಾ. ರವಿ ರಾಜೇಶ್ವರ ಅವರು ಸ್ಪಾಾನೀಶ್ ಕವಿ ಲೋರ್ಕಾ ಅವರ ಮಾತುಗಳನ್ನು ಪ್ರಸ್ತಾಾಪಿಸುತ್ತಾಾರೆ.
ಸಂಗೀತ, ಕವಿತೆ, ಚಿತ್ರ ಕಲೆ ಎಲ್ಲವೂ ಜನರ ಭಾವ ಕೊಳದಿಂದ ನೀವು ಎತ್ತಿಿಕೊಂಡ ನೀರು, ಸುಂದರ ಪಾತ್ರೆೆಗಳಲ್ಲಿ ತುಂಬಿ ಅವರಿಗೆ ಕುಡಿಸಿರಿಎನ್ನುವ ಲೋರ್ಕೆ ಅವರ ನುಡಿಗಳಿಗೆ ಅನ್ವರ್ಥಕವಾಗಿ ಅವರು ನಮಗೆ ತಮ್ಮ ಅರ್ಥಪೂರ್ಣ ಕಾವ್ಯದ ಸ್ವಾಾದ ಅನುಭವಿಸುವ ಆನಂದವನ್ನು ನೀಡುತ್ತಾಾರೆ.
ಕವನ ಸಂಕಲನದಲ್ಲಿನ ತೊಂಬತ್ತೊೊಂಬತ್ತು ಕವಿತೆಗಳು ವಿಶಿಷ್ಟ ಮತ್ತು ವಿಭಿನ್ನ ಹಾಗೂ ವೈವಿಧ್ಯಮಯ. ಇಲ್ಲಿ ಎಲ್ಲವೂ ಉತ್ತಮ! ಆದರೆ ಕವಿಗೆ ಇನ್ನೂ ಅತೃಪ್ತಿಿ! ತಾನು ಬರೆಯದಿರುವ ಕವಿತೆಯೆ ಉತ್ತಮ ಎನ್ನುತ್ತಾಾರೆ! ನನಗೆ ಒಲಿದಂತೆ ನನ್ನ ಹಾಡು, ಕ್ಷಮೆ ಇರಲಿ ಎನ್ನುತ್ತಲೇ ಇದ್ದರೂ ಇರದಂತೆ ಇಲ್ಲವಾಗುವುದಲ್ಲವೇ ಬದುಕಿನ ಸಾರ್ಥಕತೆ ಎನ್ನುತ್ತಾಾ ಮುನ್ನಡೆಯುತ್ತಾಾರೆ!
ಕರುನಾಡ ಜನ ಕಪ್ಪುು
ಹೊಲ ಕಪ್ಪುು
ಮಣ್ಣು ಕಪ್ಪುು
ಮನ ಕಪ್ಪುು?
ತಪ್ಪುು ತಪ್ಪುು!
ಒರೆದಷ್ಷೂ ಹೊಳೆವ
ಚೊಕ್ಕ ಚಿನ್ನದ ಒಪ್ಪುು ಎನ್ನುತ್ತಾಾರೆ. ಕನ್ನಡ, ಕನ್ನಡಿಗರ ಕುರಿತು ಅನೇಕ ಕವಿಗಳು ಲೇಖಕರು ಈಗಾಗಲೇ ಉದ್ಗರಿಸಿದ ವಾಕ್ಯಗಳಿಗೆ ತಮ್ಮದನ್ನೂ ಒಪ್ಪವಾಗಿ ಸೇರಿಸಿದ್ದಾರೆ!
ಕವನಗಳ ಸ್ಥಾಾಯಿ ಭಾವವನ್ನು ತಮ್ಮ ಬೆನ್ನುಡಿಯಲ್ಲಿ ಡಾ.ವಸುಂಧರಾ ಭೂಪತಿ ಅವರು ಗುರುತಿಸುತ್ತಾಾ ಒಲಿದಂತೆ ಹಾಡು ಕವನ ಸಂಕಲನದಲ್ಲಿ ೞವಿವೇಕೞಪ್ರಾಾಣ ಧಾರೆಯಾಗಿ ಹರಿದಿದೆ. ಕವಿ ಡಾ ರವಿ ರಾಜೇಶ್ವರ ಅವರ ಬರೆಹಗಳು ಸಾಂಸ್ಕೃತಿಕ ಲೋಕಕ್ಕೆೆ ಬಹು ದೊಡ್ಡ ಶಕ್ತಿಿ ಎಂದು ಅರ್ಥೈಸುತ್ತಾಾರೆ.
‘ಒಲಿದಂತೆಹಾಡು’ ಲೋಕಾರ್ಪಣೆಗೊಳ್ಳುತ್ತಿಿರುವ ಈ ಸುಸಂದರ್ಭದಲ್ಲಿ ಡಾ ರವಿ ರಾಜೇಶ್ವರ ಅವರಿಗೆ ಹಾರ್ದಿಕ ಅಭಿನಂದನೆಗಳು. ಸಹೃದಯಿ ಓದುಗರು ವಿಶ್ಲೇಷಿಸಿ ಪ್ರತಿಕ್ರಿಿಯಿಸಲಿ!
ವಿಶಿಷ್ಟ , ವಿಭಿನ್ನ , ವೈವಿಧ್ಯಮಯ…

