ಸುದ್ದಿಮೂಲ ವಾರ್ತೆ ಮಸ್ಕಿ, ಡಿ.13:
ನಾಯಕತ್ವ ಬದಲಾವಣೆ ನಡುವೆಯೇ ದಲಿತ ಹೋರಾಟಗಾರರ ಗಟ್ಟಿಿಯಾದ ಆಗ್ರಹ ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿಿ ಬದಲಾವಣೆಯ ಚರ್ಚೆಗಳು ಸದ್ದಿಲ್ಲದೆ ಮುಂದುವರಿದಿರುವ ಸಂದರ್ಭದಲ್ಲಿ, ದಲಿತ ಸಮುದಾಯದ ನಾಯಕರು ಮತ್ತು ಹೋರಾಟಗಾರರು ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದೆರಡು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆೆ ಪ್ರಚಾರ ಹೆಚ್ಚಾಾಗಿದ್ದರೂ, ಕಾಂಗ್ರೆೆಸ್ ಪಕ್ಷವು ದಲಿತ ಸಮುದಾಯಕ್ಕೆೆ ನ್ಯಾಾಯ ಕೊಡುತ್ತಿಿಲ್ಲ ಎನ್ನುವ ಆರೋಪವನ್ನು ಕಾಸಿಮಪ್ಪ ಡಿ ಮುರಾರಿ ಮಾಡಿದ್ದಾರೆ.
ಪಟ್ಟಣದ ಪತ್ರಿಿಕಾ ಭವನದಲ್ಲಿ ಶುಕ್ರವಾರದಂದು ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಿ ಸ್ಥಾಾನ ಬದಲಾವಣೆ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿಿ ಸ್ಥಾಾನ ನೀಡುವ ಮೂಲಕ ದಲಿತರ ಋಣ ತೀರಿಸಬೇಕು.
ದಲಿತರು, ಆರಂಭದಿಂದಲೂ ಕಾಂಗ್ರೆೆಸ್ ಪಕ್ಷಕ್ಕೆೆ ಬಹುದೊಡ್ಡ ಆಸ್ತಿಿಯಾಗಿ, ಪಕ್ಷದ ಬೆನ್ನೆೆಲುಬಾಗಿ ನಿಂತಿವೆ. ಅದರಲ್ಲಿಯೂ ಬಲಗೈ ಸಂಬಂಧಿತ ಛಲವಾದಿ ಸಮುದಾಯ ಕಾಂಗ್ರೆೆಸ್ ಪಕ್ಷಕ್ಕೆೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಕೊಡುಗೆಯಾಗಿ ನೀಡಿದೆ.
ಕಳೆದ 50 ವರ್ಷಗಳಿಂದಲೂ ಕಾಂಗ್ರೆೆಸ್ ಪಕ್ಷಕ್ಕೆೆ ಹಗಲಿರುಳು ದುಡಿಯುತ್ತಿಿರುವ ರಾಜಕೀಯ ಭೀಷ್ಮ ಮಲ್ಲಿಕಾರ್ಜುನ ಖರ್ಗೆ, ಗೃಹಮಂತ್ರಿಿ ಡಾ. ಜಿ ಪರಮೇಶ್ವರ, ಡಾ. ಎಚ್. ಸಿ ಮಹದೇವಪ್ಪ, ಕೆ. ಎಚ್. ಮುನಿಯಪ್ಪ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಸೇರಿದಂತೆ ಇವರೆಲ್ಲರೂ ಮುಖ್ಯಮಂತ್ರಿಿ ಸ್ಥಾಾನವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ.
ಇವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿಿ ಸ್ಥಾಾನ ನೀಡಿ ದಲಿತರ ಋಣ ತೀರಿಸಬೇಕು ಎಂದರು.
ದಲಿತರಿಗೆ ಒಂದು ಅವಧಿ ಸಿಎಂ ಸ್ಥಾಾನ ನೀಡಬೇಕು ಎಂದ ಅವರು, ಅದೂ ಇಲ್ಲ, ಇದೂ ಇಲ್ಲ ಅಂದರೆ ರಾಜ್ಯದಾದ್ಯಂತ ದಲಿತ ಪರ ಹೋರಾಟಗಾರರು ಒಗ್ಗೂಡಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುತ್ತೇವೆ ಎಂಬ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದುರುಗಪ್ಪ ಮುರಾರಿ, ಮಲ್ಲಪ್ಪ ಗೋನಾಳ, ಕಿರಣ್ ಮುರಾರಿ, ಚಿದಾನಂದ ಚಲುವಾದಿ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.
ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತರ ಋಣ ತೀರಿಸಿ – ಕಾಸಿಮಪ್ಪ ಡಿ ಮುರಾರಿ

