ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.14
ಭಾರತೀಯರಲ್ಲಿ ಸಮಾನತೆ, ಪ್ರಜಾಸತ್ತಾಾತ್ಮಕ, ಭ್ರಾಾತೃತ್ವ ಭಾವನೆ, ಸೌಹಾರ್ದತೆ ಮತ್ತು ರಾಷ್ಟ್ರಪ್ರೇೇಮ ಅಳವಡಿಸಿಕೊಂಡರೆ ಸಮೃದ್ಧ ದೇಶ ನಿರ್ಮಾಣವಾಗುತ್ತದೆ. ಕೋಮು ಸಂಘರ್ಷದ ಭಾವನೆ ಪ್ರಜಾಪ್ರಭುತ್ವ ವ್ಯವಸ್ಥೆೆಗೆ ಮಾರಕವಾಗಿದೆ ಎಂದು ಉಪನ್ಯಾಾಸಕ ಮಮ್ಮದ್ ಅಲಿ ಮುರ್ತುಜಾ ಹೇಳಿದರು.
ಮೆಟ್ರಿಿಕ್ ಪೂರ್ವ ಬಾಲಕಿಯರ ಅಂಬೇಡ್ಕರ್ ವಸತಿ ನಿಲಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಾ ಹಾಗೂ ತಾಲೂಕಾ ಘಟಕಗಳಿಂದ ಹಮ್ಮಿಿಕೊಂಡಿದ್ದ ದಿ.ಬಸಪ್ಪ ಪಿ, ದಿ.ಚನ್ನನಗೌಡ ಪಾಟೀಲ್ ದತ್ತಿಿ ಉಪನ್ಯಾಾಸ ಮಾಲಿಕೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಾಸ ನೀಡಿದರು. ಸಮಾಜದಲ್ಲಿ ಏಕತೆ, ಸೌಹಾರ್ದತೆ ಮರೆಯಾಗುತ್ತಿಿದೆ. ಅಸಹಿಷ್ಣುತೆ, ಪೂರ್ವಗ್ರಹ, ಹಿಂಸೆಗಳು ತಾಂಡವವಾಡುತ್ತಿಿವೆ. ಶಾಂತಿ, ನೆಮ್ಮದಿ ಇಲ್ಲದ ಸಮಾಜ ಎಂದಿಗೂ ಆರ್ಥಿಕವಾಗಿ ಪ್ರಗತಿ ಸಾಧಿಸಲಾರದು. ಭಾರತದಲ್ಲಿ ಧಾರ್ಮಿಕ ಸಾಮರಸ್ಯದ ಸುಂದರ ಉದಾಹರಣೆಗಳನ್ನು ಹುಡುಕಲು ನಾವು ಸುತ್ತಲೂ ನೋಡಬೇಕಾಗಿತ್ತು. ಅಲ್ಲಿ ವಿವಿಧ ಧರ್ಮಗಳ ಜನರು ಮಾನವೀಯತೆಯ ಮನೋಭಾವದಿಂದ ಒಟ್ಟುಗೂಡುತ್ತಾಾರೆ. ಭಾರತದ ವೈವಿಧ್ಯತೆ ಮತ್ತು ಸಹಿಷ್ಣುತೆಯ ಶ್ರೀಮಂತ ಪರಂಪರೆ ಹೊಂದಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷೆ ಮಂಜುಳಾ ಪಾಟೀಲ್ ಮಾತನಾಡಿ, ಕಲಿಕೆಯೆ ಸಾಧನೆಯ ಮೂಲ ಭದ್ರ ಬುನಾದಿಯಾಗಿದೆ. ಮಕ್ಕಳು ಚೆನ್ನಾಾಗಿ ವಿದ್ಯಾಾಭ್ಯಾಾಸ ಮಾಡಿ ಸಾಧಕರ ಸಾಲಿಗೆ ಯುವ ಜನಾಂಗ ಮುಂದೆ ಬರಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮವನ್ನು ವೆಂಕಟೇಶ ಉದ್ಘಾಾಟಿಸಿದರು. ಕಸಾಪ ಅಧ್ಯಕ್ಷ ಹೆಚ್.ಎ್.ಮಸ್ಕಿಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನ್ವಿಿತಾ ಕಾಲೇಜಿನ ಆಡಳಿತ ಅಧಿಕಾರಿ ಗಂಗನಗೌಡ ಪೊಲೀಸ್ ಪಾಟೀಲ್, ವರ್ತಕ ಅಮರೇಶ ಮಾಡಸಿರವಾರ, ಉದಯವಾಣಿ ವರದಿಗಾರ ಯಮನಪ್ಪ ಪವಾರ, ಮುಖಂಡ ವೆಂಕಟೇಶ ನಂಜಲದಿನ್ನಿಿ, ನಿವೃತ್ತ ಶಿಕ್ಷಕರಾದ ಚಂದ್ರಶೇಖರ ಕಗ್ಗೋೋಡ, ಬೀರಪ್ಪ ಸಂಭೋಜಿ, ಉಪನ್ಯಾಾಸಕ ಡಾ.ಬಸವರಾಜ ಪಿ.ನಾಯಕ ಇದ್ದರು.
ವೀರೇಶ ನಾಯಕ ಕನ್ನಾಾರಿ ಸ್ವಾಾಗತಿಸಿದರು. ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ಅರಳಿಮರದ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಹೆಚ್.ಎಂ.ಶ್ರೀಶೈಲ ವಂದಿಸಿದರು.
ಕಸಾಪ ದತ್ತಿ ಉಪನ್ಯಾಸ ಮಾಲಿಕೆ, ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ ಕೋಮು ಸಂಘರ್ಷ ಪ್ರಜಾಪ್ರಭುತ್ವಕ್ಕೆ ಮಾರಕ – ಮುರ್ತುಜಾ

