ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.14
ತಾಲೂಕಿನಲ್ಲಿ ಇಸ್ಪೀಟ್, ಗಾಂಜಾ, ಅಕ್ರಮ ಮರಳು ದಂಧೆ, ಓಸಿ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಅಧಿಕವಾಗಿದ್ದು, ತಾಲೂಕಿನಲ್ಲಿ ಪೋಲೀಸ್ ವ್ಯವಸ್ಥೆೆ ಇದೆಯಾ ಎನ್ನುವ ಅನುಮಾನ ಮೂಡುತ್ತಿಿದೆ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಪೊಲೀಸ್ ಇಲಾಖೆಯಿಂದ ಹಮ್ಮಿಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಪೊಲೀಸ್ ಇಲಾಖೆ ಬಗ್ಗೆೆ ಅಕ್ರಮ ಚಟುವಟಿಕೆಗಳನ್ನು ಮಾಡುವವರಿಗೆ ಭಯ ಇಲ್ಲವಾಗಿದೆ. ನಮ್ಮ ಮನೆ ಸುತ್ತಮುತ್ತ ಗಾಂಜಾ ಮಾರಾಟ, ಸೇವನೆ ನಡೆಯುತ್ತಿಿದೆ. ಈ ಬಗ್ಗೆೆ ಕ್ರಮ ಕೈಗೊಳ್ಳಿಿ ಎಂದು ಹಿಂದಿನ ಡಿವೈಎಸ್ಪಿಗೆ ಮಾಹಿತಿ ನೀಡಿದರೂ ಏನೂ ಕ್ರಮ ಕೈಗೊಳ್ಳಲಿಲ್ಲ. ಆನ್ಲೈನ್ ಬೆಟ್ಟಿಿಂಗ್ನಿಂದ ಯುವ ಪೀಳಿಗೆ ವಂಚನೆಗೆ ಒಳಗಾಗುತ್ತಿಿದೆ. ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ನಾನು ಸೇರಿದಂತೆ ಯಾವ ರಾಜಕಾರಣಿಗಳು ಅಡ್ಡ ಬರಬಾರದು. ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಾಯಪಟ್ಟರು.
ಮಾಜಿ ಸಚಿವ, ಕೆಓಎ್ ಅಧ್ಯಕ್ಷ ವೆಂಕಟರಾವ್ ನಾಡಗೌಡ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿಿರುವ ಅಕ್ರಮ ಚಟುವಟಿಕೆಗಳ ಬಗ್ಗೆೆ ಅಧಿವೇಶನದಲ್ಲಿ ಚರ್ಚೆಯಾಗಿದೆ. ಗೃಹಮಂತ್ರಿಿಗಳು ಒಪ್ಪಿಿಕೊಂಡಿದ್ದಾಾರೆ. ಸಿಂಧನೂರು ನಗರ ಸೇರಿದಂತೆ ತಾಲೂಕಿನಾದ್ಯಂತ ರಾತ್ರಿಿ 10.30ರ ನಂತರ ಎಲ್ಲಾಾ ವ್ಯಾಾಪಾರ ವಹಿವಾಟು ಬಂದ್ ಮಾಡಬೇಕು. ಅಪರಾಧ ಚಟುವಟಿಕೆಗಳು ಅಧಿಕವಾಗುತ್ತಿಿರುದವರಿಂದ ಸಾರ್ವಜನಿಕರು ಭಯಭೀತರಾಗಿದ್ದಾಾರೆ. ಜವಳಗೇರಾ ಗ್ರಾಾಮದಲ್ಲಿ ಅತೀ ಹೆಚ್ಚು ಡ್ರಗ್ಸ್ ಬಳಕೆಯಾಗುತ್ತಿಿದೆ. ನನ್ನ ಕಾರು ಚಾಲಕ ಮನೆಗೆ ಹೋಗುವಾಗ ಕೆಲವರು ಅವನನ್ನು ಹಿಡಿದು ಆತನ ಮೊಬೈಲ್ ಕಸಿದುಕೊಂಡಿದ್ದಾಾರೆ. ಆಗ ಅವನು ನಾನು ನಾಡಗೌಡರ ಡ್ರೈವರ್ ಎಂದಾಗ ಮೊಬೈಲ್ ವಾಪಸ್ಸು ಕೊಟ್ಟಿಿದ್ದಾಾರೆ. ರಾತ್ರಿಿ 11 ನಂತರ ಜವಳಗೇರಾದಲ್ಲಿ ಓಡಾಡುವದೇ ಕಷ್ಟವಾಗಿದೆ. ಮನೆಯ ಹೊರಗಡೆ ಇಟ್ಟಿಿರುವ ವಸ್ತುಗಳು ಮಾಯವಾಗುತ್ತಿಿದೆ. ಕದಿಯುವವರನ್ನು ಪ್ರಶ್ನೆೆ ಮಾಡಿದರೆ ಹೊಡೆಯಲು ಬರುತ್ತಾಾರೆ ಎನ್ನುವ ದೂರುಗಳಿವೆ. ಕುಡುಕರ ಹಾವಳಿ ಹೆಚ್ಚಾಾಗಿದೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿಿರುವ ಅಕ್ರಮ ಚಟುವಟಿಕೆಗಳಿಗೆ ಯುವಕರು ಬಲಿಯಾಗುತ್ತಿಿದ್ದಾಾರೆ. ಈ ಬಗ್ಗೆೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಸದನದಲ್ಲಿ ಧ್ವನಿ ಎತ್ತಿಿದ್ದಾಾರೆ. ಈಗಲಾದರೂ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಡಿವೈಎಸ್ಪಿ ಚಂದ್ರಶೇಖರ ನಾಯಕ ಆರಂಭದಲ್ಲಿ ಪ್ರಾಾಸ್ತಾಾವಿಕವಾಗಿ ಮಾತನಾಡಿ, ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿಿದ್ದು, ಈ ಬಗ್ಗೆೆ ಸದನದಲ್ಲಿ ಚರ್ಚೆಯಾಗಿದೆ. ಇವುಗಳಿಗೆ ಕಡಿವಾಣ ಹಾಕುವ ನಿಟ್ಟಿಿನಲ್ಲಿ ಕಟ್ಟುನಿಟ್ಟಿಿನ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಜನಪ್ರತಿನಿಧಿಗಳು, ಪ್ರಗತಿಪರ ಸಂಘಟನೆಗಳ ಮುಖಂಡರು, ವರ್ತಕರು, ವ್ಯಾಾಪಾರಿಗಳು, ಸಂಘ-ಸಂಸ್ಥೆೆಗಳ ಮುಖಂಡರು, ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಆರ್ಡಿಸಿಸಿ ಬ್ಯಾಾಂಕ್ ನಿರ್ದೇಶಕ ಪಂಪನಗೌಡ ಬಾದರ್ಲಿ, ತಾಲೂಕಾ ನ್ಯಾಾಯವಾದಿಗಳ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ನಗರ ಪೊಲೀಸ್ ಠಾಣೆಯ ಪಿಐ ವೀರಾರಡ್ಡಿಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸಭೆ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮವಾಗಲಿ

