ಸುದ್ದಿಮೂಲ ವಾರ್ತೆ ರಾಯಚೂರು, ಡಿ.14
ತಾಲೂಕಿನ ಜೇಗರಕಲ್ ಶಾಲೆ ಆವರಣದಲ್ಲಿ ಶನಿವಾರ ತಡರಾತ್ರಿಿ ಆಕಾಶಕಾಯಗಳ ವೀಕ್ಷಣೆ ಮಾಡಿ ಗ್ರಾಾಮದ ಮಕ್ಕಳು, ಪಾಲಕರು ಮಾಹಿತಿ ಪಡೆದರು.
ರೋಟರಿ ರಾಯಚೂರು ಈಸ್ಟ್ಘಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಗುರುಕೃಪ ಟ್ರಸ್ಟ್ ಸಹಯೋಗದಲ್ಲಿ ಆಕಾಶಕಾಯಗಳ ಮಾಹಿತಿ ಹಾಗೂ ಉಲ್ಕಾಾಪಾತ ಉಲ್ಕೆೆಗಳನ್ನು ವೀಕ್ಷಿಸಿ ವಿದ್ಯಾಾರ್ಥಿಗಳು ಸಂಭ್ರಮಿಸಿದರು.
ಉಲ್ಕೆೆಗಳ ಹುಟ್ಟು ಸಾವು ಗ್ರಹಗಳ ಚಲನೆ ಸೂರ್ಯನ ಕುಟುಂಬ ಗ್ಯಾಾಲಕ್ಸಿಿ ಕುರಿತು ವಿದ್ಯಾಾರ್ಥಿಗಳಿಗೆ ಮಾಹಿತಿ ನೀಡಿ ನಂತರ ಉಲ್ಕೆೆಗಳನ್ನು ವೀಕ್ಷಿಸಿದ ವಿದ್ಯಾಾರ್ಥಿಗಳು ಉಲ್ಕೆೆ ಬೀಳುವುದನ್ನು ನೋಡಿ ಸಂಭ್ರಮಿಸಿದರು.
ಆಹೋರಾತ್ರಿಿ ನಡೆದ ಈ ವೀಕ್ಷಣೆಯಲ್ಲಿ ವಿದ್ಯಾಾರ್ಥಿಗಳಿಗೆ ನಿವೃತ್ತ ಉಪನ್ಯಾಾಸಕ ಶಂಸುದ್ದೀನ್ ಮಾಹಿತಿ ನೀಡಿ ಹಗಲಿನ ಸಮಯದಲ್ಲಿ ಆಕಾಶ ಯಾವ ರೀತಿಯಾಗಿ ನೋಡಬೇಕು ಮತ್ತು ಅದನ್ನು ಅಭ್ಯಾಾಸ ಮಾಡುವ ಕುರಿತು ಇತ್ತೀಚಿನ ದಿನಗಳಲ್ಲಿ ವಿವಿಧ ತಂತ್ರಾಾಂಶಗಳ ಮೂಲಕ ಅದರ ನಿಖರತೆ ಮತ್ತು ಮಾಹಿತಿ ಹೇಗೆ ಪಡೆಯಬೇಕೆಂದು ತಿಳಿಸಿದರು.
ನಮ್ಮ ಬದುಕಿನ ಜೊತೆಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಆಕಾಶದಲ್ಲಿ ಆಗುತ್ತಿಿರುವ ಘಟನೆ ವೀಕ್ಷಿಸುವ ಮೂಲಕ ಅದಕ್ಕೆೆ ಸಂಶೋಧನೆ ಕೈಗೊಳ್ಳುವ ಜೊತೆಯಲ್ಲಿ ಮಾನವ ಜೀವನ ಇನ್ನೂ ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಈ ಹಿನ್ನೆೆಲೆಯಲ್ಲಿ ಗ್ರಾಾಮೀಣ ಪ್ರದೇಶದ ವಿದ್ಯಾಾರ್ಥಿಗಳು ಹೆಚ್ಚು ವೈಜ್ಞಾನಿಕ ಚಿಂತನೆಗಳು ಮತ್ತು ಸಂಶೋಧನೆಗಳ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ರಾಯಚೂರು ಈಸ್ಟ್ ಅಧ್ಯಕ್ಷ ರವಿಂದ್ರ ಕುರಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ಸೈಯದ್ ಹಫೀಜುಲ್ಲಾ, ಶಾಲೆಯ ಮುಖ್ಯಸ್ಥರಾದ ಉಮೇಶ್, ಜನಾರ್ದನ್, ವೆಂಕಟೇಶ, ರಿದಾ ಬೇಗಂ, ಮೋನಿಕಾ, ಮಲ್ಲಮ್ಮ, ಸದಸ್ಯರಾದ ಎಸ್ ಚೇತನ್ ಕುಮಾರ ,ಅಮರೇಶ್ ವಿದ್ಯಾಾರ್ಥಿಗಳು ಉಪಸ್ಥಿಿತರಿದ್ದರು.
ಜೇಗರಕಲ್ : ಮಧ್ಯರಾತ್ರಿ ಆಕಾಶ ಕಾಯಗಳ ವೀಕ್ಷಣೆ, ವಿದ್ಯಾರ್ಥಿಗಳ ಸಂಭ್ರಮ

