ಸುದ್ದಿಮೂಲ ವಾರ್ತೆ ರಾಯಚೂರು, ಡಿ.15:
ರಾಯಚೂರು ತಾಲ್ಲೂಕಿನ ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ ನೀಡಿ, ಮಕ್ಕಳಿಗೆ ಪೌಷ್ಟಿಿಕ ತೋಟದ ಮಹತ್ವದ ಕುರಿತು ಬೇಸಾಯಿ ಶಾಸ್ತ ವಿಭಾಗದ ವಿಜ್ಞಾನಿ ಡಾ.ಮಲ್ಲರೆಡ್ಡಿಿ ಅವರು ತಿಳಿಸಿದರು.
ಮನುಷ್ಯನ ಜೀವನಕ್ಕೆೆ ಬಹಳ ಮುಖ್ಯವಾದುದ್ದು, ಆರೋಗ್ಯ ಇದರ ರಕ್ಷಣೆ ಪೌಷ್ಟಿಿಕ ಆಹಾರದಿಂದ ಸಾಧ್ಯ ಹಾಗಾಗಿ ಪೌಷ್ಟಿಿಕ ತೋಟ ಬೆಳಸುವುದು ಬಹಳ ಪ್ರಮುಖವಾಗಿದೆ.
ಈ ವೇಳೆ ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ಹೇಮಲತಾ ಅವರು ಮಕ್ಕಳಿಗೆ ತೋಟದ ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂದು ಪ್ರಾಾತ್ಯಕ್ಷೆ ಮಾಡಿ ಮಾರ್ಗದರ್ಶನ ನೀಡಿದರು.
ಈ ವೇಳೆ ಕೀಟಶಾಸದ ವಿಜ್ಞಾನಿಗಳಾದ ಡಾ.ಶ್ರೀವಾಣಿ ಅವರು ಕೀಟಗಳ ಕುರಿತು ಅದರಲ್ಲಿ ವಿಶೇಷವಾಗಿ ಜೇನಿನ ಹುಳುಗಳ ಮಾಹಿತಿಯನ್ನು ನೀಡಿ ಮಕ್ಕಳಿಗೆ, ಮಕರಂದ ಎಲ್ಲಿ ಇರುತ್ತೆೆ, ಜೇನು ನೊಣ ಮಕರಂದವನ್ನು ಯಾವ ವಿಧದಲ್ಲಿ ಹುಡುಕುತ್ತವೆ ಎಂದು ಚಟುವಟಿಕೆ ಮೂಲಕ ವಿವರಿಸಿದರು.
ಈ ವೇಳೆ ಆಹಾರ ಸಂಸ್ಕರಣೆ ವಿಭಾಗದ ವಿಜ್ಞಾನಿಗಳಾದ ಡಾ.ವೀಣಾ ಅವರು ಶುದ್ಧ ಮತ್ತು ಸಂಸ್ಕರಣೆಯ ಆಹಾರ ನಿತ್ಯ ಜೀವನಕ್ಕೆೆ ಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯಗುರುಗಳಾದ ಗೂರ್, ಸಹಶಿಕ್ಷಕರಾದ ಚಂದ್ರಶೇಖರ್ ನಾಯ್ಕ್. ಸಂಪತರಾಜ್,ಪುಲಿ ಅಂಜಿನೇಯ್ಯ, ಮಲ್ಲೇಶ, ನರೇಶ ಕುಮಾರ್, ನವೀನ್ ಕುಮಾತ್, ಮಹೇಶ ಕುಮಾರ್ ಸೇರಿದಂತೆ ಇತರರು ಇದ್ದರು.
ದುಗನೂರಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಕೃಷಿ ವಿಜ್ಞಾನಿಗಳ ತಂಡ ಭೇಟಿ

