ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಡಿ.15:
ರಾಜ್ಯದ ಬಡಜನರ ಸಮಸ್ಯೆೆ ಬಗೆ ಹರಿಸುವುದು ಬಿಟ್ಟು ಕುರ್ಚಿ ಕದನ ನಡೆಸಿದ್ದು ಇದನ್ನು ಬಿಡಬೇಕು ಎಂದು ಸಿಪಿಎಂ ಮುಖಂಡರಾದ ಹನುಮಂತ ಅಗಳದಾಳ ಹೇಳಿದರು.
ಅವರು ಇಂದು ಇಲ್ಲಿಗೆ ಹತ್ತಿಿರದ ಬುಂಕಲದೊಡ್ಡಿಿಯಲ್ಲಿ ಸಿಪಿಎಂ ಪಕ್ಷದ ಪ್ರಚಾರ ಆಂದೋಲನ ಕುರಿತು ಮಾತನಾಡುತ್ತಾಾ ರಾಜ್ಯದಲ್ಲಿ ಬಹಳಷ್ಟು ರೈತರ,ಕಾರ್ಮಿಕರ ಜೊತೆಗೆ ನಿರುದ್ಯೋೋಗ ಸಮಸ್ಯೆ ಇರುವಾಗ ಅಧಿಕಾರದಲ್ಲಿ ಇರುವ ಕಾಂಗ್ರೆೆಸ್ ಸರಕಾರ ಕುರ್ಚಿ ಕದನ ಮಾಡುತ್ತಾಾ ಜನ ಸಾಮನ್ಯರ ಸಮಸ್ಯೆೆಗಳನ್ನು ಬಗೆ ಹರಿಸುತ್ತಿಿಲ್ಲ.
ರಾಜ್ಯದಲ್ಲಿ ಈ ವರ್ಷ ಮಳೆ ಜಾಸ್ತಿಿಯಾಗಿ ಬೆಳೆಗಳು ನಾಶವಾಗಿವೆ,ಜೊತೆಗೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲಿತ ಬೆಲೆ ಕೊಡಬೇಕು ಎಂದು ಆಗ್ರಹಿಸಿದರು,
ತಿಂಗಳ 21 ರಂದು ಬೆಂಗಳೂರಿನ ಫ್ರಿಿಡಮ್ ಪಾರ್ಕ್ನಲ್ಲಿ ರಾಜ್ಯದಲ್ಲಿ ಖಾಲಿ ಇರುವ ಸರ್ಕಾರದ ಹುದ್ದೆಗಳನ್ನು ಭರ್ತಿ ಮಾಡಬೇಕು, ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು,
ಕಾರ್ಮಿಕರ ವಿರೋಧಿಯಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಬಾರದು ಎಂದು ಇತರೆ ಬೇಡಿಕೆಗಳಿಗಾಗಿ ಪ್ರತಿಭಟನೆ ಹಮ್ಮಿಿಕೊಳ್ಳಲಾಗಿದೆ ಎಂದು ಪ್ರಚಾರ ಆಂದೋಲನ ಕುರಿತು ಮಾತನಾಡಿದರು,
ರಾಜ್ಯ ಮಟ್ಟದ ಬೇಡಿಕೆಗಳ ಜೊತೆಗೆ ತಾಲೂಕಿನಲ್ಲಿ ಕೊನೆ ಭಾಗದ ರೈತರಿಗೆ ನೀರು ಕೊಡಬೇಕು, ಎಲ್ಲಾ ಹಳ್ಳಿಿಗಳಿಗೆ ಬಸ್ ಸೌಲಭ್ಯ ಮಾಡಬೇಕು, ತಾಲ್ಲೂಕಿನ ಎಲ್ಲಾ ಗ್ರಾಾಮ ಪಂಚಾಯತಿಗಳಲ್ಲಿ ಸರಕಾರಿ ಆಸ್ಪತ್ರೆೆ ಮಂಜೂರು ಮಾಡಬೇಕು ಅಲ್ಲದೇ ತಾಲ್ಲೂಕಿನ ಸರಕಾರಿ ಪ್ರಾಾಥಮಿಕ ಮತ್ತು ಪ್ರೌೌಢಶಾಲೆ ಶಾಲೆಗಳ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಬೇಕು ಎಂಬ ಸ್ಥಳೀಯ ಬೇಡಿಕೆಗಳಿವೆ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಗಿರಿಯಪ್ಪ ಪೂಜಾರಿ, ದುರುಗಪ್ಪ, ಬಸವರಾಜ ಬಿರದಾರ ಸೇರಿದಂತೆ ಅನೇಕರು ಇದ್ದರು.
ಬುಂಕಲದೊಡ್ಡಿಯಲ್ಲಿ ಸಿಪಿಎಂ ಪ್ರಚಾರ ಆಂದೋಲನ ! ಕುರ್ಚಿ ಕದನ ಬಿಟ್ಟು ಜನರ ಸಮಸ್ಯೆ ಬಗೆಹರಿಸಿ : ಅಗಳದಾಳ ಎಚ್ಚರಿಕೆ

