ಸುದ್ದಿಮೂಲ ವಾರ್ತೆ ಕವಿತಾಳ, ಡಿ.15
ವಿದ್ಯಾಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಸರಕಾರ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಎಂದು ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಆರ್ಿ ಮಿಯಾ ಹೇಳಿದರು.
ಪಟ್ಟಣದ ಸಮೂಹ ಸಂಪನ್ಮೂಲ ಕೇಂದ್ರ ಕವಿತಾಳ ಮತ್ತು ನವಚೇತನ ಅನುದಾನಿತ ಹಿರಿಯ ಪ್ರಾಾಥಮಿಕ ಶಾಲೆ ಹಾಗೂ ಪ್ರೌೌಢ ಶಾಲೆ ಇವರ ಸಂಯುಕ್ತಾಾಶ್ರಯದಲ್ಲಿ ಸೋಮವಾರ ಹಮ್ಮಿಿಕೊಂಡಿದ್ದ 2025-26 ನೆ ಸಾಲಿನ ವಲಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾಾರ್ಥಿಗಳು ಸಕ್ರಿಿಯವಾಗಿ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿಿದ್ದು ನಿರ್ಣಾಯಕರು ಯಾವುದೆ ಲೋಪ ದೋಷ ಮಾಡದೆ ಅವರ ಪ್ರತಿಭೆ ಗುರುತಿಸಿ ನಿರ್ಣಯ ಮಾಡಿ ಪ್ರಶಸ್ತಿಿ ನೀಡಬೇಕು ಎಂದರು.
ನವಚೇತನ ಪ್ರೌೌಢ ಶಾಲೆಯ ಮುಖ್ಯ ಗುರು ಅರೋಗ್ಯದಾನಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ ಸೋಲು ಗೆಲವು ಲೆಕ್ಕಿಿಸದೆ ಸಕ್ರಿಿಯವಾಗಿ ಭಾಗವಹಿಸಿ ಉತ್ತಮವಾಗಿ ಪ್ರದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆೆ ಆಯ್ಕೆೆಯಾಗಿ ಎಂದು ಹಾರೈಸಿದರು.
ಸಿಆರ್ಪಿ ಸೌಮ್ಯ ಅವರು ಪ್ರಾಾಸ್ತವಿಕ ಮಾತನಾಡಿ ಪ್ರತಿಭಾಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ 2002 ರಲ್ಲಿ ಸರ್ಕಾರ ಜಾರಿಗೆ ತಂದಿದೆ ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಾಥಮಿಕ ಶಾಲೆ, ಅನುದಾನಿತ ಶಾಲೆ, ಪ್ರೌೌಢ ಶಾಲೆಯ ಒಟ್ಟು 28 ಶಾಲೆಯ ಮಕ್ಕಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಾವಿದ್ ಪಾಷ, ಮೌನೇಶ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ನವಚೇತನ ಪ್ರಾಾಥಮಿಕ ಶಾಲೆ ಮುಖ್ಯ ಗುರುಗಳು ಸುಶೀಲ್, ಯೋಸು ಮಿತ್ರ, ಮಲ್ಲಿಕಾರ್ಜುನ, ರಾಘವೇಂದ್ರ ಮುತ್ತಲಿಕ, ಗುರುಬಸವ, ಅಯ್ಯನಗೌಡ, ಸುಧಾಕರ ಸೇರಿದಂತೆ ಯಲ್ಲ ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ಹುಲ್ಲಪ್ಪ ಗಂಟಿ ಅವರು ನಿರೂಪಣೆ ಮಾಡಿದರು, ಶಿಕ್ಷಕ ಅಮರೇಶ ಸ್ವಾಾಗತ ಭಾಷಣ ಮಾಡಿದರು, ಶಿಕ್ಷಕ ಮಹಾಂತೇಶ ಕರ್ಲಟ್ಟಿಿ ವಂದರ್ಪಣೆ ಮಾಡಿದರು.
ಪ್ರತಿಭೆ ಅನಾವರಣಕ್ಕೆ ಕಲೋತ್ಸವ ವೇದಿಕೆ – ಆರ್ಿ

