ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.16:
ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಸೂಕ್ತ ವೇದಿಕೆ ಕಲ್ಪಿಿಸುವ ಮೂ ಲಕ ಅನಾವರಣಗೊಳಿಸಲು ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿ ಹಾಗೂ ಕಲೋ ತ್ಸವ ಕಾರ್ಯಕ್ರಮ ಪ್ರಮುಖ ಪಾತ್ರ ವಹಿಸಿದೆ ಎಂದು ಹೊಸಪೇಟೆ ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಹೆಚ್.ಎನ್.ಎ್.ಇಮಾಮ್ ನಿಯಾಜಿ ಹೇಳಿದರು.
ನಗರದ ಶ್ರೀಮಾರ್ಕಂಡೇಶ್ವರ ಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾ ಗೂ ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆಯಿಂದ ಏರ್ಪಡಿಸಿದ್ದ 2025-26 ನೇ ಸಾಲಿನ ವಿಜಯನಗರ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಾಟಿಸಿ ಮಾತನಾಡಿದ ಅವರು ವಿದ್ಯಾಾರ್ಥಿಗಳಿಗೆ ಶಾಲೆಗ ಳಲ್ಲಿ ಕೇವಲ ಪಠ್ಯಪುಸ್ತಕದ ಶಿಕ್ಷಣ ನೀಡುವುದರ ಜತೆಗೆ ಕ್ರೀೆಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ಇಂತಹ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳ ನ್ನು ಆಯೋಜಿಸುವುದು ಅಗತ್ಯವಾಗಿದೆ. ಇದರಿಂದ ಮಕ್ಕಳಲ್ಲಿ ಅನೇಕ ಪ್ರತಿಭಾ ವಂತರು ಒಂದೊಂದು ಕ್ಷೇತ್ರದಲ್ಲಿ ತಮ್ಮದೇ ಆದ ಕೌಶಲ್ಯವನ್ನು ಹೊಂದಿರುತ್ತಾಾರೆ. ಕೆಲವರು ಓದಿನಲ್ಲಿ ಮುಂದಿದ್ದರೇ, ಕೆಲವು ವಿದ್ಯಾಾರ್ಥಿಗಳು ಕ್ರೀೆಡೆಗಳಲ್ಲಿ ಸಾಧನೆ ಸಾಧಿಸುತ್ತಾಾರೆ. ಇನ್ನೂ ಕೆಲವರು ಗಾಯನ, ನಟನೆ, ಸಂಗೀತ ಸೇರಿದಂತೆ ವಿವಿಧ ಮನೋರಂಜನಾತ್ಮಕವಾದ ನೈಪುಣ್ಯಗಳನ್ನು ಹೊಂದಿರುತ್ತಾಾರೆ. ಅವರಲ್ಲಿನ ಪ್ರತಿಭೆಗಳನ್ನು ಅನಾವರಣಗೊಳಿಸಲು ಶಾಲಾ ಹಂತದಲ್ಲಿ ಭವಿಷ್ಯ ರೂಪಿಸಿದಂತಾಗಲಿದೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ವಿಶೇಷ ಗುಣಗಳನ್ನು ಗ್ರಹಿಸಿ ಅವರ ನ್ನು ಪ್ರೋೋತ್ಸಾಾಹಿಸಬೇಕಿದೆ. ಮಕ್ಕಳಲ್ಲಿ ಅತ್ಮವಿಶ್ವಾಾಸ ಹೆಚ್ಚುವ ಮೂಲಕ ಇನ್ನಷ್ಟು ಆಸಕ್ತಿಿ ವಹಿಸಲಿದ್ದಾರೆ ಎಂದರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಾಧಿಕಾರಿ ಮಂಜುನಾಥ ಮಾತನಾಡಿ, ಬಾಲ್ಯದ ಲ್ಲಿ ಮಕ್ಕಳು ಅನೇಕ ಕಲಾತ್ಮಕ ವಿಷಯಗಳಲ್ಲಿ ಆಸಕ್ತಿಿ ಉಳ್ಳವರಾಗಿರುತ್ತಾಾರೆ. ಮಕ್ಕಳು ತಮ್ಮ ಸ್ವಂತ ಪ್ರತಿಭೆಯನ್ನು ಪ್ರದರ್ಶಿಸಲು ಸೂಕ್ತ ವೇದಿಕೆಗಳನ್ನು ನೀಡುವುದು ಅಗತ್ಯವಿದೆ. ಶಾಲಾ ಪರಿಸರದಿಂದಲೇ ಮಕ್ಕಳಿಗೆ ಕಲಾತ್ಮಕ ಚಟುವಟಿಕೆಗಳಿಗೆ ಉತ್ತೇಜನ ನೀಡಿದರೇ ಉತ್ತಮ ಕಲಾವಿದರಾಗಿ ಕಲಾ ಕ್ಷೇತ್ರಕ್ಕೆೆ ಕೊಡುಗೆ ನೀಡಲಿದ್ದಾರೆ ಎಂದರು.
ಜಿಲ್ಲೆಯ ವಿವಿಧ ತಾಲೂಕಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾಾನ ಗಳಿಸಿದ 178 ಸ್ಪರ್ಧಾಳುಗಳು ಜಿಲ್ಲಾಮಟ್ಟದ ವೇದಿಕೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ಕ್ಷೇತ್ರಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆ, ಜಿಲ್ಲಾ ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಬಿ.ಶಿವಾನಂದ, ವೃತ್ತ ನಿರೀಕ್ಷಕ ಗುರುರಾಜ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಅಯ್ಯಪ್ಪ, ಮಾರ್ಕಂಡೇಶ್ವರ ಶಾಲೆಯ ಅಧ್ಯಕ್ಷರಾದ ಬಿ.ಜಯರಾಮ್, ನಿವೃತ್ತ ಎನ್ಸಿಿಸಿ ವಿ ಭಾಗಾಧಿಕಾರಿ ಗಿರೀಶ್, ಜಿಲ್ಲಾ ಪ್ರೌೌಢಶಾಲಾ ಮುಖ್ಯಗುರುಗಳ ಸಂಘದ ಅಧ್ಯಕ್ಷೆ ಅ ಕ್ಕಮಹಾದೇವಿ, ಪ್ರೌೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮಪ್ಪ, ಗ್ರೇೇಡ್-2 ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿ ಕಾರಿಗಳು ಉಪಸ್ಥಿಿತರಿದ್ದರು.
ಶಿಕ್ಷಣಾಧಿಕಾರಿ ಪರುಷಪ್ಪ ಭಜಂತ್ರಿಿ ಸ್ವಾಾಗತಿಸಿದರು. ಜಿಲ್ಲಾ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದ ನೋಡಲ್ ಅಧಿಕಾರಿ ಹಾಗೂ ವಿಷಯ ಪರಿವೀ ಕ್ಷಕ ಕೆ.ಎಚ್.ಎಮ್.ವಿಶ್ವನಾಥ ಪ್ರಾಾಸ್ತಾಾವಿಕವಾಗಿ ಮಾತನಾಡಿದರು ಪರಿವೀಕ್ಷಕ ವಿಷಯ ಪರಿವೀಕ್ಷಕ ಬಸಂತಯ್ಯ ಹಿರೇಮಠ ವಂದಿಸಿದರು. ಶಿಕ್ಷಕ ಜಿ.ಎಂ.ಪ್ರದೀಪ್ ಕುಮಾರ್ ಹಾಗೂ ನಾಗರಾಜ್ ನಿರ್ವಹಿಸಿದರು. ಹಾಗೂ ಸ್ಪರ್ಧೆಯ ನಿರ್ಣಾ ಯಕರಾಗಿ ಜಿಲ್ಲೆಯ ವಿವಿಧ ತಾಲೂಕಿನ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.
‘ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ’

