ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.16:
ಶಾಲಾ ಕಾಲೇಜಿಗೆ ಬರುವ ಹೆಣ್ಮಕ್ಕಳು ತಿಂಗಳಿನ ಮುಟ್ಟು ಆದಾಗ ಮುಜಗರಕ್ಕೊೊಳಗಾಗುತ್ತಿಿದ್ದಾಾರೆ. ಶಾಲೆಯಲ್ಲಿ ಈ ಹಿಂದೆ ಮುಟ್ಟಿಿನ ಸಂದರ್ಭದಲ್ಲಿ ಪ್ಯಾಾಡ್ ನೀಡಲಾಗುತ್ತಿಿತ್ತು. ಕೊವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡ ಶುಚಿ ಪ್ಯಾಾಡ್ ಮತ್ತೆೆ ವಿತರಿಸುತ್ತಿಿಲ್ಲ. ಇದರಿಂದ ವಿದ್ಯಾಾರ್ಥಿನಿಯರು ಶಾಲಾ ಕಾಲೇಜಿನಲ್ಲಿ ಮುಜುಗರಕ್ಕೊೊಳಗಾಗುತ್ತಿಿದ್ದಾಾರೆ.
ಹದಿಹರೆಯದ ಹೆಣ್ಮಕ್ಕಳಿಗೆ ಪ್ರಾಾಕೃತಿಕವಾಗಿ ತಿಂಗಳಿನಲ್ಲಿ ಋತುಚಕ್ರವಾಗುವುದು ವಾಡಿಕೆ. ಸಾಮಾನ್ಯವಾಗಿ 13 ವಯಸ್ಸಿಿನಿಂದ 45 ವಯಸ್ಸಿಿನವರೆಗೆ ಹೆಣ್ಮಕ್ಕಳು ಮುಟ್ಟು ಆಗುತ್ತಾಾರೆ. ಈ ಸಂದರ್ಭದಲ್ಲಿ ಸ್ಯಾಾನಿಟರಿ ಪ್ಯಾಾಡ್ ಬಳಸುವುದು ವಾಡಿಕೆ. ಇನ್ನೂ ಶಾಲಾ ಕಾಲೇಜಿಗೆ ಬರುವ ವಿದ್ಯಾಾರ್ಥಿನಿಯರಲ್ಲಿ ಕೆಲವರಿಗೆ ಸ್ಯಾಾನಿಟರ್ ಪ್ಯಾಾಡ್ ಖರೀದಿಸಲು ಕಷ್ಟ. ಶಾಲೆಗೆ ಬಂದಾಗ ಮುಟ್ಟು ಆದರೆ ಈ ಸಂದರ್ಭದಲ್ಲಿ ಅಂಗಡಿಗೆ ಹೋಗಿ ಪ್ಯಾಾಡ್ ಖರೀದಿಸಲು ಹಣ ಹಾಗು ಮುಜಗರವಿರುತ್ತದೆ. ಈ ಕಾರಣಕ್ಕಾಾಗಿ ಶುಚಿತ್ವಕ್ಕಾಾಗಿ ಶುಚಿ ಎಂಬ ಹೆಸರಿನಲ್ಲಿ ಶಿಕ್ಷಣ ಇಲಾಖೆಯು ಪ್ಯಾಾಡ್ ಗಳನ್ನು ವಿತರಿಸುತ್ತಿಿತ್ತು. ಈ ಪ್ಯಾಾಡ್ ಗಳನ್ನು ವಿದ್ಯಾಾರ್ಥಿನಿಯರು ಬಳಸಲು ಶೌಚಾಲಯದಲ್ಲಿ ವ್ಯವಸ್ಥೆೆ ಮಾಡಲಾಗಿತ್ತು. ಅಲ್ಲದೆ ಪ್ಯಾಾಡ್ ಗಳ ನಾಶಕ್ಕಾಾಗಿ ವೈಜ್ಞಾಾನಿಕವಾದ ಯಂತ್ರವನ್ನು ಅಲ್ಲಲ್ಲಿ ಅಳವಡಿಸಿದ್ದರು. ಆದರೆ ಈಗ ಶುಚಿ ಪ್ಯಾಾಡ್ ಗಳ ಸರಬರಾಜು ನಿಲ್ಲಿಸಲಾಗಿದೆ.
ಮುಟ್ಟಿಿನ ಸಂದರ್ಭದಲ್ಲಿ ಹೆಣ್ಮುಕ್ಕಳು ಅನೇಕ ಸಮಸ್ಯೆೆ. ಸಮಾಜಿಕವಾಗಿ ಮುಜಗರಕ್ಕೊೊಳಗಾಗುತ್ತಾಾರೆ. ನೈಸರ್ಗಿಕವಾಗಿರುವ ಈ ಕ್ರೀೆಯೆಯ ಸಂದರ್ಭದಲ್ಲಿ ಶಾಲಾ ವಿದ್ಯಾಾರ್ಥಿನಿಯರಿಗೆ ಶುಚಿ ಪ್ಯಾಾಡ್ ಮುಂದುವರಿಸಬೇಕೆಂದು ವಿದ್ಯಾಾರ್ಥಿನಿಯರು ಆಗ್ರಹಿಸಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ಒಟ್ಟು 27162 ಮಕ್ಕಳಿಗೆ ಶುಚಿ ಪ್ಯಾಾಡ್ ಪ್ರತಿ ತಿಂಗಳು ನೀಡಬೇಕು. ಆದರೆ ಈಗ ಸರಕಾರದಿಂದ ಶುಚಿ ಪ್ಯಾಾಡ್ ಸರಬರಾಜು ಇಲ್ಲ. ಈ ಕುರಿತು ಇಲಾಖೆಯವರ ಗಮನಕ್ಕೆೆ ತಂದಿದ್ದೇವೆ ಎನ್ನುತ್ತಾಾರೆ ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ.
ವಿದ್ಯಾಾರ್ಥಿನಿಯರಲ್ಲಿ ಹಾಜರಾತಿ ಹೆಚ್ಚಳ. ಶುಚಿತ್ವಕ್ಕೆೆ ಮಹತ್ವ ನೀಡುವ ಸ್ಯಾಾನಿಟರ್ ಪ್ಯಾಾಡ್ ಬಳಕೆಗಾಗಿ ಶುಚಿ ಪ್ಯಾಾಡ್ ಗಳನ್ನು ಮತ್ತೆೆ ನೀಡಬೇಕಾಗಿರುವುದು ಅವಶ್ಯವಿದೆ. ಈ ಹಿಂದೆ ಇದ್ದ ಯೋಜನೆ ಮುಂದುವರಿಸಿ ಎನ್ನುವುದು ವಿದ್ಯಾಾರ್ಥಿನಿಯರ ಬೇಡಿಕೆಯಾಗಿದೆ.

