ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ಕಲ್ಯಾಾಣ ಕರ್ನಾಟಕಕ್ಕೆೆ ಹೆಚ್ಚಿಿನ ಅನುದಾನ ಮತ್ತು ಕೈಗಾರಿಕೆಗಳನ್ನು ನೀಡುವ ಮೂಲಕ ಈ ಭಾಗವನ್ನು ಆರ್ಥಿಕವಾಗಿ ಸಬಲೀಕರಣ ಮಾಡಬೇಕು ಎಂದು ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಸರ್ಕಾರಕ್ಕೆೆ ಮನವಿ ಮಾಡಿದರು.
ಉತ್ತರ ಕರ್ನಟಕದ ಅಭಿವೃದ್ಧಿಿ ಕುರಿತು ವಿಶೇಷ ಚರ್ಚೆಯಲ್ಲಿ ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಿಣ ಕರ್ನಾಟಕ ಭಾಗದವರು ಎಂದರೆ ಅಧಿಕಾರಿಗಳು, ಉನ್ನತ ಹುದ್ದೆಯಲ್ಲಿ ಇರುವವರು, ಅದೇ ಉತ್ತರ ಕರ್ನಾಟಕದವರು ಎಂದರೆ ಕೂಲಿ ಕೆಲಸ ಮಾಡುವವರು, ಗಾರೆ ಕೆಲಸಗಾರರು, ಆಟೋ ಚಾಲಕರು ಎಂಬ ಭಾವನೆ ಇದೆ. ಇಂತಹ ತಾರತಮ್ಯ ಬದಲಾಗಬೇಕಾದರೆ ಈ ಭಾಗದ ಸಮಗ್ರ ಅಭಿವೃದ್ದಿ ಮತ್ತು ಜನಸಾಮಾನ್ಯರ ಆದಾಯ ವೃದ್ಧಿಿಗೆ ಸರ್ಕಾರ ಒತ್ತು ಕೊಡಬೇಕು ಎಂದು ಹೇಳಿದರು.
ದೇವದುರ್ಗ ಸೇರಿ ನಮ್ಮ ಭಾಗದಲ್ಲಿ ಈಗ ಕ್ಯಾಾನ್ಸರ್ ರೋಗ ಹೆಚ್ಚಾಾಗುತ್ತಿಿದೆ. ಕ್ಯಾಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆೆ ದೊರೆಯುವುದು ಅನಿವಾರ್ಯವಾಗುತ್ತಿಿದೆ. ಗ್ರಾಾಮೀಣ ಭಾಗದಲ್ಲಿಯೂ ಸಹ ಉತ್ತಮ ಆರೋಗ್ಯ ಸಿಗುವಂತಾಗಬೇಕು ಎಂದು ಶಾಸಕಿ ಕರೆಮ್ಮ ಹೇಳಿದರು.
ಮೊರಾರ್ಜಿ ಶಾಲೆಗಳಿಗಾಗಿ ಸಾಕಷ್ಟು ವಿದ್ಯಾಾರ್ಥಿಗಳು ಪರೀಕ್ಷೆ ಬರೆಯುತ್ತಾಾರೆ. ಅದಲ್ಲಿ ಹೆಚ್ಚಿಿನ ವಿದ್ಯಾಾರ್ಥಿಗಳು ಉತ್ತೀರ್ಣ ಆಗುತ್ತಿಿದ್ದಾರೆ. ಆದರೆ, ಶಾಲೆಗಳ ಕೊರತೆ ಕಾಡುತ್ತಿಿದೆ. ಶಾಸಕರಾದವರು ಪತ್ರ ನೀಡಿದರೂ ಸಹ ಸೀಟು ಸಿಗದ ಪರಿಸ್ಥಿಿತಿ ಇದೆ. ಹೆಚ್ಚಿಿನ ಮೊರಾರ್ಜಿ ಶಾಲೆಗಳನ್ನು ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆೆ ಆಗ್ರಹಿಸಿದ ಅವರು, ಮಹಿಳಾ ಕಾಲೇಜು ಮತ್ತು ವಸತಿನಿಲಯಗಳನ್ನು ಮಂಜೂರು ಮಾಡುವಂತೆ ಮನವಿ ಮಾಡಿದರು.
ಶಕ್ತಿಿ ಯೋಜನೆಯಿಂದ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡುತ್ತಿಿದ್ದಾರೆ ನಿಜ. ಆದರೆ, ಬಸ್ಗಳ ಕೊರತೆ ನಮ್ಮ ಭಾಗದಲ್ಲಿ ಹೆಚ್ಚಾಾಗಿದೆ. ಶಾಲಾ ಕಾಲೇಜು ಮಕ್ಕಳು ಬಸ್ಳಿಲ್ಲದೆ ತೊಂದರೆ ಅನುಭವಿಸುತ್ತಿಿದ್ದಾರೆ. ಇದಲ್ಲದೆ, ಈಗಾಗಲೇ ಸಾಕಷ್ಟು ಓಡಾಟ ನಡೆಸಿ ಹಳೆಯದಾದ ಬಸ್ಗಳನ್ನು ನಮ್ಮಲ್ಲಿಗೆ ಕಳುಹಿಸಲಾಗುತ್ತದೆ. ಬಸ್ನ ಸ್ಟಿಿಯರಿಂಗ್ ಕಿತ್ತು ಕೈಗೆ ಬಂದಂತಹ ಅನೇಕ ಪ್ರಕರಣಗಳು ನಡೆದಿವೆ. ಸರ್ಕಾರ ಗಮವಹಿಸಿ ಉತ್ತಮ ಬಸ್ಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಒಳಚರಂಡಿ, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ, ಗಂಗಾ ಕಲ್ಯಾಾಣ ಸೇರಿದಂತೆ ಅನೇಕ ಸೌಲಭ್ಯಗಳಿಗಾಗಿ ಸರ್ಕಾರ ಮತ್ತು ನಿಗಮಗಳಿಗೆ ಮನವಿ ಮಾಡಿದರೂ ಅನುದಾನದ ಕೊರತೆಯಿಂದ ಯಾವುದೇ ಸೌಲಭ್ಯಗಳು ಸಿಗುತ್ತಿಿಲ್ಲ. ಅತಿವೃಷ್ಟಿಿಯಿಂದಾಗಿ ಬೆಳೆಹಾನಿ ಒಂದುಕಡೆಯಾದರೆ ಸಾಕಷ್ಟು ಸೇತುವೆ ಮತ್ತು ರಸ್ತೆೆಗಳು ಕಿತ್ತುಹೋಗಿವೆ. ಕೂಡಲೇ ಇದನ್ನು ಸರಿಪಡಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ದಕ್ಷಿಣ ಮತ್ತು ಉತ್ತರ ಕರ್ನಾಟಕದ ತಾರತಮ್ಯ ನಿವಾರಿಸಲು ಶಾಸಕಿ ಕರೆಮ್ಮ ನಾಯಕ್ ಆಗ್ರಹ ಕ.ಕ. ಭಾಗಕ್ಕೆ ಹೆಚ್ಚಿನ ಅನುದಾನ, ಕೈಗಾರಿಕೆ ನೀಡಿ

