ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.16:
ರಾಜ್ಯದಲ್ಲಿ ಎರಡು ವರ್ಷಗಳಲ್ಲಿ ಮೂರು ಭ್ರೂಣಹತ್ಯೆೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ 13 ಜನರನ್ನು ಬಂಧಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಸಚಿವರಾದ ದಿನೇಶ್ ಗಂಡೂರಾವ್ ತಿಳಿಸಿದರು.
ಪರಿಷತ್ತಿಿನಲ್ಲಿ ಪ್ರಶ್ನೋೋತ್ತರ ವೇಳೆ ಸದಸ್ಯರಾದ ಸಿ.ಟಿ.ರವಿ ಅವರ ಪ್ರಶ್ನೆೆಗೆ ಪ್ರತಿಕ್ರಿಿಯಿಸಿದ ಸಚಿವರು, ಭ್ರೂಣ ಹತ್ಯೆೆ ಪ್ರಕರಣಕ್ಕೆೆ ಸಂಬಂಧಪಟ್ಟಂತೆ ಬೆಂಗಳೂರ ಗ್ರಾಾಮಾಂತರ ಜಿಲ್ಲೆಯ ಎಸ್ ಪಿ ಜಿ ಆಸ್ಪತ್ರೆೆಯ 6 ಜನರನ್ನು, ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸರ್ಕಾರಿ ವಸತಿ ಗೃಹದ 6 ಜನರನ್ನು ಮತ್ತು ಬೆಂಗಳೂರ ನಗರ ಜಿಲ್ಲೆಯ ದ್ಯಾಾನಿ ಪಾಲಿ ಕ್ಲಿಿನಿಕ್ ಆಸ್ಪತ್ರೆೆಯ ಒಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಗಳ ತನಿಖೆಯು ನ್ಯಾಾಯಾಲಯಗಳಲ್ಲಿ ಬಾಕಿ ಇರುತ್ತದೆ ಎಂದು ಸಚಿವರು ತಿಳಿಸಿದರು.
ಸೇವೆಯಿಂದ ಅಮಾನತು: ಈ ಹಿಂದೆ ಬೆಳಕಿಗೆ ಬಂದಿದ್ದ ಭ್ರೂಣ ಹತ್ಯೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಕ್ರಮವಹಿಸಲಾಗಿದ್ದು, ರಾಮನಗರ ಜಿಲ್ಲಾ ಆಸ್ಪತ್ರೆೆಯಲ್ಲಿ ಭ್ರೂಣ ಲಿಂಗ ಪತ್ತೆೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಮೀಲಾಗಿರಬೇಕೆಂಬ ಹಿನ್ನೆೆಲೆಯಲ್ಲಿ ಡಾ.ಶಶಿ ಎಸ್.ಎಲ್., ರೇಡಿಯಾಲಜಿಸ್ಟ್ ಇವರನ್ನು ದಿನಾಂಕ: 03-09-2025ರಂದು ಸೇವೆಯಿಂದ ಅಮಾನತ್ತುಗೊಳಿಸಿದೆ ಎಂದು ಸಚಿವರು ಮಾಹಿತಿ ನೀಡಿದರು.

