ಸುದ್ದಿಮೂಲ ವಾರ್ತೆ ನವದೆಹಲಿ, ಡಿ.16:
ಮೂರು ದೇಶಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಜೋರ್ಡಾನ್ಗೆ ಭೇಟಿ ನೀಡಿದ್ದು, ಶುದ್ದ ಇಂಧನ, ಜಲ ನಿರ್ವಹಣೆ, ಸಂಸ್ಕೃತಿ ಮತ್ತು ಡಿಜಿಟಲ್ ಅವಿಷ್ಕಾಾರ ಸೇರಿದಂತೆ ಹಲವು ವಲಯಗಳಲ್ಲಿ ಹಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
ಒಪ್ಪಂದ ಕುರಿತು ಮಾತನಾಡಿರುವ ಪ್ರಧಾನಿ ಮೋದಿ ಅವರು ಎರಡು ದೇಶಗಳ ನಡುವಿನ ಸಹಕಾರದ ಅರ್ಥಪೂರ್ಣ ವಿಸ್ತರಣೆ ಇದಾಗಿದೆ ಎಂದು ಹೇಳಿದ್ದಾರೆ.
ರಾಜಕುಮಾರ ಅಬ್ದುಲ್ಲಾ 2 ಆಹ್ವಾಾನದ ಮೇರೆಗೆ ಪ್ರಧಾನಿ ಮೋದಿ ಜೋರ್ಡಾನ್ ರಾಜಧಾನಿ ಅಮ್ಮಾಾನ್ಗೆೆ ಸೋಮವಾರ ಭೇಟಿ ನೀಡಿದರು.
ಜೋರ್ಡಾನ್ ಬಳಿಕ ಅವರು ಇಥಿಯೋಪಿಯಾ ಮತ್ತು ಓಮನ್ಗೆ ಭೇಟಿ ನೀಡಲಿದ್ದಾರೆ. ಸಂಸ್ಕೃತಿ, ನವೀಕರಿಸಬಹುದಾದ ಶಕ್ತಿಿ, ಜಲ ನಿರ್ವಹಣೆ, ಡಿಜಿಟಲ್ ಸಾರ್ವಜನಿಕ ಮೂಲಸೌಲಭ್ಯ ಸೇರಿದಂತೆ ಪ್ರಮುಖ ಕ್ಷೇತ್ರಗಳ ಒಪ್ಪಂದಕ್ಕೆೆ ಸೋಮವಾರ ಭಾರತ ಜೋರ್ಡನ್ ಸಹಿ ಹಾಕಿದವು. ಈ ಒಪ್ಪಂದಗಳು ದ್ವಿಿಪಕ್ಷೀಯ ಸಂಬಂಧ ಮತ್ತು ಸ್ನೇಹ ಉತ್ತೇಜಿಸುವ ಗುರಿ ಹೊಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಭಾರತ- ಜೋರ್ಡಾನ್ ಸಹಭಾಗಿತ್ವದ ಅರ್ಥಪೂರ್ಣ ವಿಸ್ತರಣೆಯಾಗಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಮತ್ತು ಜೋರ್ಡಾನ್ ನಡುವಿನ ಸಹಕಾರವು ಶುದ್ಧ ಬೆಳವಣಿಗೆ, ಇಂಧನ ಸುರಕ್ಷತೆ ಮತ್ತು ಹವಾಮಾನ ಜವಾಬ್ದಾಾರಿ ಹಂಚಿಕೆಯ ಬದ್ಧತೆ ಪ್ರತಿಬಿಂಬಿಸುತ್ತದೆ.
ಜಲಸಂಪನ್ಮೂಲ ನಿರ್ವಹಣೆ ಮತ್ತು ಅಭಿವೃದ್ಧಿಿಯಲ್ಲಿನ ಸಹಯೋಗವು ದೀರ್ಘಾವಧಿಯ ಜಲ ಭದ್ರತೆ ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಸಂರಕ್ಷಣೆ, ದಕ್ಷತೆ ಮತ್ತು ತಂತ್ರಜ್ಞಾನದಲ್ಲಿ ಉತ್ತಮ ಅಭ್ಯಾಾಸಗಳನ್ನು ಹಂಚಿಕೊಳ್ಳಲು ಎರಡೂ ದೇಶಗಳಿಗೆ ಇದು ಅವಕಾಶ ಮಾಡಿಕೊಡುತ್ತದೆ. ಸಾಂಸ್ಕೃತಿಕ ಸಹಕಾರದಲ್ಲಿ ಪೆಟ್ರಾಾ ಮತ್ತು ಎಲ್ಲೋರಾ ನಡುವಿನ ಅವಳಿ ಒಪ್ಪಂದವು ಪರಂಪರೆ ಸಂರಕ್ಷಣೆ, ಪ್ರವಾಸೋದ್ಯಮ ಮತ್ತು ಶೈಕ್ಷಣಿಕ ವಿನಿಮಯಕ್ಕೆೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
2025- 2029ಕ್ಕಾಾಗಿ ಸಾಂಸ್ಕೃತಿಕ ವಿನಿಯಮ ಕಾರ್ಯಕ್ರಮವೂ ಎರಡು ದೇಶಗಳ ನಡುವಿನ ಜನರಿಂದ ಜನರ ಸಂಬಂಧವನ್ನು ಆಳಗೊಳಿಸುತ್ತದೆ. ಜೋರ್ಡಾನ್ ಜೊತೆಗೆ ಭಾರತದ ಡಿಜಿಟಲ್ ಅವಿಷ್ಕಾಾರವು ಸಮಗ್ರ ಆಡಳಿತ ಉತ್ತೇಜಿಸುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿದೇಶಾಂಗ ಇಲಾಖೆ ಕಾರ್ಯದರ್ಶಿ ನೀನಾ ಮಲ್ಹೋೋತ್ರಾಾ, ರಾಜಕುಮಾರ ಅಬ್ದುಲ್ಲಾ 2 ಭಯೋತ್ಪಾಾದನೆಯ ವಿರುದ್ಧ ಭಾರತದ ಹೋರಾಟಕ್ಕೆೆ ಬಲವಾದ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಯೋತ್ಪಾಾದನೆಯನ್ನು ಇದೇ ವೇಳೆ ಅವರು ಖಂಡಿಸಿದ್ದಾರೆ ಎಂದು ಹೇಳಿದರು.
ಭೇಟಿ ವೇಳೆ, ಜೋರ್ಡಾನ್ ರಾಜರ ಪ್ರಮುಖ ಪ್ರಯತ್ನಗಳನ್ನು ಪ್ರಧಾನಿ ಶ್ಲಾಾಘಿಸಿದರು. ಮೋದಿ ಅವರ ಜೋರ್ಡಾನ್ ಭೇಟಿಯು ಭಾರತ ಮತ್ತು ಅರಬ್ ರಾಷ್ಟ್ರದ ನಡುವಿನ ರಾಜತಾಂತ್ರಿಿಕ ಸಂಬಂಧಗಳ ಸ್ಥಾಾಪನೆಯ 75 ವರ್ಷಾಚರಣೆ ಸೂಚಿಸುತ್ತಿಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಪೂರ್ಣ ಪ್ರಮಾಣದ ಜೋರ್ಡಾನ್ ಭೇಟಿ ಇದಾಗಿದ್ದು, ಅವರು ೆಬ್ರವರಿ 2018ರಲ್ಲಿ ಪ್ಯಾಾಲೆಸ್ಟೀನ್ಗೆ ಹೋಗುವ ದಾರಿಯಲ್ಲಿ ಜೋರ್ಡಾನ್ ಮೂಲಕ ಪ್ರಯಾಣಿಸಿದ್ದರು.
ಭಾರತ ಮತ್ತು ಜೋರ್ಡಾನ್ ಬಲವಾದ ಆರ್ಥಿಕ ಸಂಬಂಧವನ್ನು ಹೊಂದಿದ್ದು, ಅಮ್ಮಾಾನ್ ನವದೆಹಲಿಯ ಮೂರನೇ ದೊಡ್ಡ ವ್ಯಾಾಪಾರ ಪಾಲುದಾರನಾಗಿದೆ. ಎರಡು ದೇಶಗಳ ನಡುವಿನ ದ್ವಿಿಪಕ್ಷೀಯ ವ್ಯಾಾಪಾರ ಸಂಬಂಧದ ಮೌಲ್ಯ 2.8 ಮಿಲಿಯನ್ ಡಾಲರ್ ಆಗಿದೆ. ಭಾರತಕ್ಕೆೆ ಜೋರ್ಡಾನ್ ರಸಗೊಬ್ಬರ ಪೂರೈಕೆ ಕೂಡಾ ಮಾಡುತ್ತಿಿದೆ.

