ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.16:
ಸರಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ ಸೇರಿದಂತೆ ನಗರ ಹಾಗೂ ತಾಲೂಕಿನ ಗ್ರಾಾಮೀಣ ಪ್ರದೇಶದಲ್ಲಿನ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಾಯಿಸಿ ಭಾರತ ಕಮ್ಯುನಿಷ್ಟ ಪಕ್ಷ(ಮಾರ್ಕ್ಸ್ವಾದಿ) ತಾಲೂಕು ಸಮಿತಿ ಮಂಗಳವಾರ ಪ್ರತಿಭಟನೆ ನಡೆಸಿತು.
ತಾಲೂಕಿನಲ್ಲಿ ಪ್ರಾಾಥಮಿಕ ಶಾಲೆಯಲ್ಲಿ ಮಂಜೂರಾದ ಶಿಕ್ಷಕರ ಸಂಖ್ಯೆೆ 1585 ಪೈಕಿ 816 ಜನ ಕಾರ್ಯನಿರ್ವಹಿಸುತ್ತಿಿದ್ದು ಅರ್ಧದಷ್ಟು ಹುದ್ದೆೆಗಳು ಖಾಲಿ ಇವೆ. ತಾಲೂಕಿನಲ್ಲಿರುವ 11 ಪ್ರಾಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮರ್ಪಕ ವೈದ್ಯರಿಲ್ಲ. ಇದರಿಂದ ಗ್ರಾಾಮೀಣ ಜನರಿಗೆ ಉತ್ತಮ ಆರೋಗ್ಯ ಸಿಗದಾಗಿದೆ. ಸಾರ್ವಜನಿಕ ಆಸ್ಪತ್ರೆೆ ಹಾಗೂ ತಾಯಿ-ಮಕ್ಕಳ ಆಸ್ಪತ್ರೆೆಗೂ ಮೂಲಭೂತ ಸೌಲಭ್ಯ ಒದಗಿಸಬೇಕು. ನಗರದಲ್ಲಿ ಯುಜಿಡಿ ಕಾಮಗಾರಿ ಅರೆಬರೆಗೊಳಿಸಿದ್ದು ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನಗರದ ವಾರ್ಡ್ ನಂ.25 ರಲ್ಲಿ ಮಹಿಳಾ ಶೌಚಾಲಯ ಇಲ್ಲ. ನಿರ್ಮಾಣಕ್ಕೂ ಮೀನಾ-ಮೇಷ ಏಣಿಸಲಾಗುತ್ತಿಿದೆ. ತಾಲೂಕಿನಲ್ಲಿ ಸ್ಮಶಾನ ಭೂಮಿ ಕೊರತೆ ಇದೆ. ಬೊಮ್ಮನಾಳ-ದೇವರಗುಡಿ ಮಧ್ಯದ ಸೇತುವೆಯು ನನೆಗುದಿಗೆ ಬಿದ್ದಿದೆ. ನರೇಗಾದಲ್ಲಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೂ ಕೂಲಿ ಪಾವತಿ ಮಾಡಬೇಕೆನ್ನುವ ಹತ್ತಾಾರು ಬೇಡಿಕೆಗಳನ್ನು ಕೂಡಲೇ ಈಡೇರಿಸಲು ಅಗತ್ಯ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಾಯಿಸಲಾಯಿತು.
ಸಮಿತಿ ತಾಲೂಕು ಕಾರ್ಯದರ್ಶಿ ಬಸವಂತರಾಯ ಗೌಡ ಕಲ್ಲೂರು, ಗೋಪಾಲಕೃಷ್ಣ, ಯಂಕಪ್ಪ ಕೆಂಗಲ್, ಮಹಿಳಾ ಸದಸ್ಯರು ಇದ್ದರು.
ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮನವಿ

