ಸುದ್ದಿಮೂಲ ವಾರ್ತೆ ಮಸ್ಕಿ, ಡಿ.16
ಪಟ್ಟಣದ ಬಳಗಾನೂರ ರಸ್ತೆೆಯಲ್ಲಿ ಕೆಳಮಟ್ಟದಲ್ಲಿ ವಿದ್ಯುತ್ ಪರಿವರ್ತಕ ಇರುವುದರಿಂದ ಮಕ್ಕಳಗೆ ಮತ್ತು ಪ್ರಾಾಣಿಗಳಿಗೆ ಅನಾಹುತ ಸಂಭವಿಸುವ ಮೊದಲು ಬೇರೆ ಕಡೆ ಸ್ಥಳಾಂತರಿಸುವಂತೆ ಅಲ್ಲಿನ ಸ್ಥಳೀಯ ನಿವಾಸಿಗಳ ಮನವಿ ಮೇರೆಗೆ ಸುದ್ದಿಮೂಲ ದಿನಪತ್ರಿಿಕೆ ಮುಖಾಂತರ ಪ್ರಕಟಿಸಲಾಗಿತ್ತು.
ಈ ವಿಷಯಕ್ಕೆೆ ಸಂಬಂಧಿಸಿದಂತೆ ಜೆಸ್ಕಾಾಂ ಇಲಾಖೆ ಅಧಿಕಾರಿ ವೆಂಕಟೇಶ್ ಮತ್ತು ಗುತ್ತೇದಾರ ಪ್ರಶಾಂತ್ ಮುರಾರಿ ಅವರು ಸ್ಪಂದಿಸಿ ವಿದ್ಯುತ್ ಪರಿವರ್ತಕ ಬೇರೆ ಕಡೆ ಅಳವಡಿಸಿದ್ದು. ಬಳಗನೂರು ರಸ್ತೆೆಯ ಪಕ್ಕದಲ್ಲಿರುವ ಸ್ಥಳೀಯ ನಿವಾಸಿಗಳು ಹಾಗೂ ಅಂಗಡಿ ಮಾಲಕರು ಧನ್ಯವಾದಗಳು ತಿಳಿಸಿದ್ದಾರೆ.
ಸುದ್ದಿಮೂಲ ವರದಿಗೆ ಸ್ಪಂದನೆ ವಿದ್ಯುತ್ ಪರಿವರ್ತಕ ಬೇರೆ ಕಡೆ ಸ್ಥಳಾಂತರ

