ಸುದ್ದಿಮೂಲ ವಾರ್ತೆ ರಾಯಚೂರು, ಡಿ.16:
ರಾಜ್ಯದಲ್ಲಿನ ಘೋಷಿತ ಕೊಳಚೆ ಪ್ರದೇಶ ಸೇರಿ ಇತರ ಸ್ಲಂಗಳಲ್ಲಿನ ಜನ ಅನುಭವಿಸುವ ಸಮಸ್ಯೆೆ ಪರಿಹಾರಕ್ಕೆೆ ಮುಂದಾಗಲು ಬೆಳಗಾವಿಯಲ್ಲಿ ವಸತಿ ಸಚಿವ ಜಮೀರ್ ಆಹ್ಮದ್ ಅವರನ್ನು ಸ್ಲಂ ಜನಾಂದೋಲನಾ ಕರ್ನಾಟಕದ ನಿಯೋಗ ಭೇಟಿ ಮಾಡಿ ಒತ್ತಾಾಯಿಸಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಹಠಾತ್ ಭೇಟಿ ಮಾಡಿ ಸಚಿವರ ತಡೆದು ನಿಯೋಗದ ಮುಖಂಡರು ಮನವಿ ಸಲ್ಲಿಸಿದರು. ಇಡೀ ರಾಜ್ಯದಲ್ಲಿ 709 ಕೊಳಚೆ ಪ್ರದೇಶಗಳು ಖಾಸಗಿ ಮಾಲೀಕತ್ವದಲ್ಲಿದ್ದು ಇವುಗಳ ಸ್ವಾಾಧೀನಕ್ಕೆೆ ಸರ್ಕಾರದಿಂದ ಕ್ರಮ ಕೈಗೊಳ್ಳಲಾಗುವುದು. ಖಾಸಗಿ ಕೊಳಚೆ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋೋಲೆ ವಾಪಾಸ್ ಪಡೆಯಲು ಹಕ್ಕೊೊತ್ತಾಾಯಗಳ ಮಂಡಿಸಲಾಯಿತು.
ಆಗ ಈ ಕುರಿತಂತೆ ಅಧಿವೇಶನದ ನಂತರ ಬೆಂಗಳೂರಿನಲ್ಲಿ ಸಭೆ ಕರೆದು ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ ಸಚಿವರು ನಮ್ಮ ಸರ್ಕಾರ ಸ್ಲಂ ಜನರಿಗೆ ಭೂಮಿ ಮತ್ತು ವಸತಿ ನೀಡಲು ಹಿಂಜರಿಯುವುದಿಲ್ಲ ಎಂದು ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ್, ಶಾಸಕ ಡಾ.ಶಿವರಾಜ ಪಾಟೀಲ, ನಿಯೋಗದಲ್ಲಿ ರಾಜ್ಯ ಸಂಚಾಲ ಎ.ನರಸಿಂಹಮೂರ್ತಿ, ಸಾವಿತ್ರಿಿ ಬಾಯಿ ಮಹಿಳಾ ಸಂಘಟನೆಯ ಚಂದ್ರಮ್ಮ, ಸಂಚಾಲಕರಾದ ಇಮ್ತಿಿಯಾಜ್ ಆರ್ ಮಾನ್ವಿಿ, ಜನಾರ್ಧನ್ ಹಳ್ಳಿಿಬೆಂಚಿ, ಕೀರಪ್ಪ ತಳವಾರ, ಗೋಪಿ ಬಳ್ಳಾಾರಿ, ಶೋಭಾ ಕಮತರ, ಹೊಂಗ್ಯಮ್ಮ, ಅಕ್ರಮ್ ಮಾಶಾಳ್ಕರ, ರೇಣುಕಾ ಸರಡಗಿ, ಶೇಖರ ಬಾಬು, ಅರುಣ್, ಮಂಜುಬಾಯಿ, ಹಣಮಂತ ಕಟ್ಟಿಿಮನಿ, ಸುಧಾ, ರೇಣುಕ ಎಲ್ಲಮ್ಮ ವೆಂಕಮ್ಮ ನಿಯೋಗದಲ್ಲಿದ್ದರು.
ಮಂತ್ರಿಯ ಭೇಟಿಯಾದ ನಿಯೋಗ ಸ್ಲಂ ಜನರ ಸಮಸ್ಯೆ ಪರಿಹಾರಕ್ಕೆ ಶೀಘ್ರ ಸಭೆಯ ಭರವಸೆ

