ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.18:
ಹಾವೇರಿ ಜಿಲ್ಲೆೆಯ ನರಸೀಪುರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಆಶ್ರಯದಲ್ಲಿ ಅಂಬಿಗರ 10ನೇ ‘ಶರಣ ಸಂಸ್ಕೃತಿ ಉತ್ಸವ – 2026’ ಹಾಗೂ ‘ವಚನ ಗ್ರಂಥ ಮಹಾ ರಥೋತ್ಸವ’ ಜನವರಿ 14 ಮತ್ತು 15 ನಡೆಯಲಿದೆ.
ನಿಜಶರಣ ಅಂಬಿಗರ ಚೌಡಯ್ಯ ಗುರು ಪೀಠದ ಜಗದ್ಗುರು ಪೂಜ್ಯ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಾಮಿಗಳು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ್ದು, ಅಂಬಿಗರ ಸಮುದಾಯದ ಹತ್ತನೇ ಶರಣ ಸಂಸ್ಕೃತಿ ಉತ್ಸವ ಇದಾಗಿದ್ದು, ವಚನ ಗ್ರಂಥ ಮಹಾ ರಥೋತ್ಸವ ನಡೆಯಲಿದೆ ಎಂದರು.
ಜನವರಿ 14ರಂದು ಬೆಳಗ್ಗೆೆ 6 ಗಂಟೆಗೆ ನಿಜಶರಣ ಅಂಬಿಗರ ಚೌಡಯ್ಯನವರ ತೊಟ್ಟಿಿಲೋತ್ಸವ, ಬೆಳಗ್ಗೆೆ 8 ಗಂಟೆಗೆ ಐಕ್ಯಮಂಟಪ ಪೂಜೆ, 10 ಗಂಟೆಗೆ ಸಾಮೂಹಿಕ ರಕ್ತದಾನ ಶಿಬಿರ, 11 ಗಂಟೆಗೆ ಪ್ರಸಾದ ವಿತರಣೆ, ಮಧ್ಯಾಾಹ್ನ 12 ಗಂಟೆಗೆ ಲಿಂ. ಪೂಜ್ಯ ಸದ್ಗುರು ಶಾಂತಮುನಿ ಮಹಾಸ್ವಾಾಮಿಗಳವರ 10ನೇ ಸ್ಮರಣೋತ್ಸವ, ಸಾಮೂಹಿಕ ಸರಳ ವಿವಾಹ ಮಹೋತ್ಸವ, ರಾಜ್ಯಮಟ್ಟದ ಪ್ರತಿಭಾ ಪುರಸ್ಕಾಾರ ಹಾಗೂ ವಚನ ಕಂಠಪಾಠ ಸ್ಪರ್ಧೆ ಹಾಗೂ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಂಜೆ ಐತಿಹಾಸಿಕ ಗಂಗಾ ಆರತಿ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಅದೇ ರೀತಿಯಾಗಿ ಉತ್ಸವದ ಎರಡನೇ ದಿನ ಅಂದರೆ ಜ. 15ರಂದು ಬೆಳಗ್ಗೆೆ 8 ಗಂಟೆಗೆ ಧರ್ಮಧ್ವಜಾರೋಹಣ, 9.30 ಗಂಟೆಗೆ ಧರ್ಮಸಭೆ, 10 ಗಂಟೆಗೆ ಶಿಲಾಮಂಟಪ, ಕಂಚಿನ ಪುತ್ಥಳಿ ಲೋಕಾರ್ಪಣೆ ಹಾಗೂ ಶ್ರೀ ಮಹರ್ಷಿ ವೇದವ್ಯಾಾಸ ಕಲ್ಯಾಾಣ ಮಂಟಪ ಉದ್ಘಾಾಟನೆ, ಬೆಳಗ್ಗೆೆ 11 ಗಂಟೆಗೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ, ಮಧ್ಯಾಾಹ್ನ 12 ಗಂಟೆಗೆ ಜಗದ್ಗುರು ಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಾಮಿಗಳ ಪೀಠಾರೋಹಣದ ದಶಮಾನೋತ್ಸವ ಮತ್ತು ಸಂಜೆ 5 ಗಂಟೆಗೆ ವಚನ ಗ್ರಂಥ ಮಹಾ ರಥೋತ್ಸವ ನಡೆಯಲಿದೆ ಎಂದರು.
ಈ ಉತ್ಸವದ ಅಂಗವಾಗಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಶಿಲಾಮಂಟಪ ಹಾಗೂ ಕಂಚಿನ ಪುತ್ತಳಿ ಲೋಕಾರ್ಪಣೆ, ಶ್ರೀ ಮಹರ್ಷಿ ವೇದವ್ಯಾಾಸ ಕಲ್ಯಾಾಣ ಮಂಟಪ ಉದ್ಘಾಾಟನೆ ನೆರವೇರಲಿದೆ.
ಮುಖ್ಯಮಂತ್ರಿಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕುಮಾರ್ ಸೇರಿ ನಾಡಿನ ಪ್ರಮುಖ ಮಠಾಧೀಶರು, ಸಂತರು, ಶರಣರು, ಮಹಾತ್ಮರು, ಸಾಹಿತಿಗಳು, ರಾಜ್ಯ ಹಾಗೂ ಕೇಂದ್ರದ ಸಚಿವರು – ಜನಪ್ರಿಿಯ ಜನಪ್ರತಿನಿಧಿಗಳು ಪಾಲ್ಗೊೊಳ್ಳಲಿದ್ದಾಾರೆ.
ಗಂಗಾಮತಸ್ಥ ಸಂಘದ ರಾಜ್ಯಾಾಧ್ಯಕ್ಷ ಪಿ. ಮೌಲಾಲಿ, ಆರ್ಟಿಓ ಪಂಪಾಪತಿ, ಎಳ್ಳಾಾರ್ತಿ ಸಿದ್ದಪ್ಪ, ಕೊರಲಗುಂದಿ ಶಿವಮೂರ್ತಿ, ಜಿಲ್ಲಾಾ ಮಹಿಳಾ ಘಟಕದ ಅಧ್ಯಕ್ಷರಾದ ದಾಕ್ಷಾಯಿಣಿ, ಕೆ.ಎಸ್. ಬಸವರಾಜ್, ಕೆ. ಈಶಣ್ಣ, ಜಗದೀಶ್, ಎಲೆ ನಾಗರಾಜ್, ಹನುಮಂತಪ್ಪ ಸೇರಿ ಗಂಗಾಮತಸ್ಥರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಜ. 14, 15 : ಅಂಬಿಗರ 10ನೇ ಶರಣ ಸಂಸ್ಕೃತಿ ಉತ್ಸವ – ವಚನಗ್ರಂಥ ಮಹಾ ರಥೋತ್ಸವ

