ಸುದ್ದಿಮೂಲ ವಾರ್ತೆ ಮಸ್ಕಿ, ಡಿ.18:
ರಾಷ್ಟ್ರ ಸೇವಿಕಾ ಸಮಿತಿಯ ಮಸ್ಕಿಿ ಶಾಖೆ ಅಶ್ರಯದಲ್ಲಿ ಮಂಗಳವಾರದಂದು ಪಟ್ಟಣದಲ್ಲಿ ಮಹಿಳೆಯರಿಂದ ಪಥ ಸಂಚಲನ ಕಾರ್ಯಕ್ರಮ ಜರುಗಿತು.
100ಕ್ಕೂ ಹೆಚ್ಚು ಮಹಿಳೆಯರು ಈ ಪಥ ಸಂಚಲನೆಯಲ್ಲಿ ಭಾಗವಹಿಸಿದ್ದರು. ಸಂಜೆ 4:00ಯ ವೇಳೆಗೆ ಪಟ್ಟಣದ ಶ್ರೀ ಭ್ರಮರಾಂಬಾ ದೇವಸ್ಥಾಾನದಿಂದ ಪಥಸಂಚಲನ ಪ್ರಾಾರಂಭವಾಗಿ ಕನಕ ವೃತ್ತ, ಖಲಿಲಾ ವೃತ್ತ ದೈವದ ಕಟ್ಟಿಿ ಮಾರ್ಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹ್ಯಾಾಪಿ ಕಿಡ್ಸ್ ಶಾಲೆ ಆವರಣ ಬಂದು ತಲುಪಿತು.
ನಂತರ ಹ್ಯಾಾಪಿ ಕಿಡ್ಸ್ ಶಾಲೆ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಿಕೊಳ್ಳಲಾಗಿತ್ತು ಈ ವೇಳೆ ಅನೇಕರು ಮಾತನಾಡಿದರು.
ದೇಶ ಭಕ್ತಿಿಯನ್ನು ಪ್ರತಿಬಿಂಬಿಸುವ ಮಹಿಳೆಯರು, ವಿದ್ಯಾಾರ್ಥಿನಿಯರು ಗುಲಾಬಿ ಮಿಶ್ರಿತ ಶ್ವೇತ ಬಟ್ಟೆೆ ಧರಿಸಿ ಪಥ ಸಂಚಲನದಲ್ಲಿ ನೋಡುಗರ ಗಮನ ಸೆಳೆದರು.
ಮಹಿಳೆಯರು ಘೋಷವಾದ್ಯಗಳನ್ನು ನುಡಿಸುವುದು, ದಂಡ ತಿರುಗಿಸುವ ಕಲೆ ನೋಡುಗರನ್ನು ಬೆರಗುಗೊಳಿಸಿತು.
ಈ ಸಂದರ್ಭದಲ್ಲಿ ಸಿಪಿಐ ಬಾಲಚಂದ್ರ ಡಿ ಲಕ್ಕಂ ಹಾಗೂ ಪಿಎಸ್ಐ ಕೆ ರಂಗಯ್ಯ ನೇತೃತ್ವದಲ್ಲಿ 50ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯೊಂದಿಗೆ ಬಿಗಿ ಭದ್ರತೆ ಒದಗಿಸಲಾಗಿತ್ತು.
ಮಸ್ಕಿ : ಮಹಿಳೆಯರಿಂದ ಪಥ ಸಂಚಲನ

