ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.18:
ಮಕ್ಕಳು ಕ್ರೀೆಡೆಯಲ್ಲಿ ಸಕ್ರಿಿಯವಾಗಿ ಭಾಗವಹಿಸುವ ಮೂಲಕ ಕ್ರೀೆಡಾ ಮನೋಭಾವನೆ, ಶಿಸ್ತು ಹಾಗೂ ಸಹಕಾರದ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬಿ. ೌಜಿಯಾ ತರನ್ನುಮ್ ಹೇಳಿದರು.
ನಗರದ ಚಂದ್ರಶೇಖರ ಪಾಟೀಲ ಕ್ರೀೆಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 2025-26ನೇ ಸಾಲಿನ ಅಂತರ ಜಿಲ್ಲಾ ಕ್ರೀೆಡಾಶಾಲೆ/ವಸತಿ ನಿಲಯಗಳ ಅಥ್ಲೆೆಟಿಕ್ಸ್ ಕ್ರೀೆಡಾಕೂಟ ಉದ್ಘಾಾಟಿಸಿ ಮಾತನಾಡಿದರು. ಕ್ರೀೆಡಾಪಟುಗಳು ತಮ್ಮ ಕ್ರೀೆಡಾಸ್ಪೂರ್ತಿಯನ್ನು ಹೆಚ್ಚಿಿಸಿಕೊಳ್ಳಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀೆಡಾ ಇಲಾಖೆ ಸಹಾಯಕ ನಿರ್ದೇಶಕ ಸಂಗಮೇಶ್ವರ ಮಾತನಾಡಿ, ಈ ಅಂತರ ಜಿಲ್ಲಾ ಅಥ್ಲೆೆಟಿಕ್ಸ್ ಕ್ರೀೆಡಾಕೂಟದಲ್ಲಿ ಕಲಬುರಗಿ, ಚಿತ್ರದುರ್ಗ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು 135 ಕ್ರೀೆಡಾಪಟುಗಳು ಭಾಗವಹಿಸುತ್ತಿಿದ್ದಾರೆ ಎಂದು ಮಾಹಿತಿ ನೀಡಿದರು.

