ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.18:
ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕಾರ ರೂಪದಲ್ಲಿರುವ ಗ್ರೇೇರ್ಟ ಬೆಂಗಳೂರು ಆಡಳಿತ ವಿಧೇಯಕ 2025ಕ್ಕೆೆ (2ನೇ ತಿದ್ದುಪಡಿ) ವಿಧಾನ ಪರಿಷತ್ತಿಿನಲ್ಲಿ ಗುರುವಾರ ಅಂಗೀಕಾರ ದೊರೆಯಿತು.
ಬೆಂಗಳೂರು ನಗರಾಭಿವೃದ್ಧಿಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿಿ ಡಿ.ಕೆ. ಶಿವಕಮಾರ್ ಅವರು ವಿಧಾನ ಪರಿಷತ್ತಿಿನಲ್ಲಿ 2024ನೇ ಸಾಲಿನ ಗ್ರೇೇಟರ್ ಬೆಂಗಳೂರು ಆಡಳಿತ ವಿಧೇಯಕ (2ನೇ ತಿದ್ದುಪಡಿ) ಮಂಡಿಸಿದರು. ಈ ವೇಳೆ ಮಾತನಾಡಿ, ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರಕ್ಕೆೆ ಮುಖ್ಯಮಂತ್ರಿಿಗಳು ಅಧ್ಯಕ್ಷರಾಗಿರುತ್ತಾಾರೆ. ಆದರೆ ಮುಖ್ಯ ಕಾರ್ಯದರ್ಶಿಗಳನ್ನು ಈ ಸಮಿತಿಯಲ್ಲಿ ಸೇರಿಸಿರಲಿಲ್ಲ. ನಗರಾಭಿವೃದ್ಧಿಿ ಸಚಿವರ ಜೊತೆಗೆ ನಗರಾಭಿವೃದ್ಧಿಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳನ್ನು ಸೇರಿಸಲಾಗಿದೆ. ಕೆಲವು ರಾಜ್ಯ ಸಭಾ ಸದಸ್ಯರು ಹಾಗೂ ಸಂಸದರ ಪ್ರದೇಶವು ಪಾಲಿಕೆ ವ್ಯಾಾಪ್ತಿಿಯಲ್ಲಿ ಒಳಪಡುವ ಹಿನ್ನೆೆಲೆಯಲ್ಲಿ ಅವರುಗಳನ್ನು ಈ ಸಮಿತಿಯಲ್ಲಿ ಸೇರಿಸಲು ನಿರ್ಧರಿಸಿದ್ದೇವೆ. ಉದಾಹರಣೆಗೆ ಡಾ.ಸುಧಾರ್ಕರ್ ಅವರು ಚಿಕ್ಕಬಳ್ಳಾಾಪುರ ಸಂಸದರಾದರೂ ಯಲಹಂಕದ ಕೆಲವು ಭಾಗ ಅವರ ಕ್ಷೇತ್ರಕ್ಕೆೆ ಸೇರ್ಪಡೆಯಾಗುತ್ತದೆ. ಅದೇ ರೀತಿ ಬೆಂಗಳೂರಿನ ನಿವಾಸಿಯಾಗಿರುವ ರಾಜ್ಯಸಭಾ ಸದಸ್ಯೆೆ ಸುಧಾಮೂರ್ತಿ, ಶಾಸಕ ಶಿವಣ್ಣ ಅವರವನ್ನು ಈ ಸಮಿತಿಯಲ್ಲಿ ಸೇರಿಸಲು ಈ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ನಂತರ ಬಿಜೆಪಿ ಸದಸ್ಯರಾದ ಸಿ.ಟಿ. ರವಿ ಅವರು ಮಾತನಾಡಿ, ನಾನು ಬೆಂಗಳೂರಿನಲ್ಲಿ ವಾಸ ಮಾಡುತ್ತಿಿದ್ದರೂ, ಮತದಾನ ಮಾಡುವುದು ಚಿಕ್ಕಮಗಳೂರಿನಲ್ಲಿ. ನಾನು ಅಲ್ಲಿಯ ಜೊತೆ ಇಲ್ಲೂ ಮತದಾನ ಮಾಡುವ ಅಧಿಕಾರ ಇದೆಯೇ? ಎಂದು ಕೇಳಿದರು.
ಇದಕ್ಕೆೆ ಉತ್ತರಿಸಿದ ಶಿವಕುಮಾರ್ ಅವರು, ಗ್ರೇೇಟರ್ ಬೆಂಗಳೂರು ಪ್ರಾಾಧಿಕಾರ ಪ್ರತಿನಿಧಿಗಳ ಮಂಡಳಿಯಾಗಿದ್ದು, ಇಲ್ಲಿ ಯಾವುದೇ ಚುನಾವಣೆ ನಡೆಯುವುದಿಲ್ಲ. ಸುಧಾಕರ್ ಅವರು ತಮ್ಮ ಕ್ಷೇತ್ರ ವ್ಯಾಾಪ್ತಿಿಯ ಯಲಹಂಕ ಭಾಗದ ವಾರ್ಡ್ ನಲ್ಲಿ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿರುತ್ತಾಾರೆ. ಜೊತೆಗೆ ಯಲಹಂಕ ವಾರ್ಡಿನ ಜನಪ್ರತಿನಿಧಿಯಾಗಿ ಜಿಬಿಎ ಪ್ರಾಾಧಿಕಾರದ ಸದಸ್ಯರಾಗಿರುತ್ತಾಾರೆ. ಯಾವುದೇ ರಾಜ್ಯಸಭೆ, ವಿಧಾನ ಪರಿಷತ್ ಸದಸ್ಯರು ಬೆಂಗಳೂರಿನ ನಿವಾಸಿಯಾಗಿದ್ದು, ಇಲ್ಲಿ ಮತದಾನದ ಹಕ್ಕು ಹೊಂದಿದ್ದರೆ ಅವರಿಗೆ ಸದಸ್ಯತ್ವ ನೀಡಲಾಗುವುದು ಎಂದು ವಿವರಿಸಿದರು.
ಚರ್ಚೆಯ ಬಳಿಕ ಪರಿಷತ್ತಿಿನಲ್ಲಿ ವಿಧೇಯಕಕ್ಕೆೆ ಅಂಗೀಕಾರ ದೊರೆಯಿತು.
ನಗರ ಯೋಜನೆಗಾಗಿ ಪ್ರತ್ಯೇಕ ಕಾಲೇಜು ಆರಂಭ
ನಮ್ಮಲ್ಲಿ ನಗರ ಯೋಜನೆ ರೂಪಿಸುತ್ತಿಿರುವವರು ಕಡಿಮೆಯಾಗಿರುವ ಹಿನ್ನೆೆಲೆಯಲ್ಲಿ ಬೆಂಗಳೂರಿನಲ್ಲಿ ಇದಕ್ಕಾಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುರ್ಮಾ ಅವರು ತಿಳಿಸಿದರು.
ವಿಧಾನಸಭೆಯಿಂದ ಅಂಗೀಕಾರ ರೂಪದಲ್ಲಿದ್ದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿಿ ಪ್ರಾಾಧಿಕಾರ (ಎರಡನೇ ತಿದ್ದುಪಡಿ) ವಿಧೇಯಕವನ್ನು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರ ಪರವಾಗಿ ಸಚಿವ ಬೋಸರಾಜು ಅವರು ವಿಧಾನ ಪರಿಷತ್ತಿಿನಲ್ಲಿ ಗುರುವಾರ ಮಂಡಿಸಿದರು.
ಈ ವೇಳೆ ಬೆಂಗಳೂರು ನಗರಾಭಿವೃದ್ಧಿಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ತಿದ್ದುಪಡಿ ತರುತ್ತಿಿರುವ ಕಾರಣವನ್ನು ವಿವರಿಸಿದರು.
ರಾಜ್ಯದಲ್ಲಿ ನಗರ ಯೋಜನೆ ರೂಪಿಸುವವರು (ಟೌನ್ ಪ್ಲಾಾನರ್ ಗಳು) ಕಡಿಮೆಯಾಗಿದ್ದಾರೆ. ನಗರ ಯೋಜನೆ ವಿಷಯದ ಕಾಲೇಜು ಆರಂಭಿಸಲು ನಿರ್ಧರಿಸಿದ್ದೇವೆ. ಇದಕ್ಕಾಾಗಿ 100 ಕೋಟಿ ಹಣವನ್ನು ಮೀಸಲಿಡಲಾಗಿದೆ. ಈಗ ನಗರ ಯೋಜನೆಗಳನ್ನು ಸಿವಿಲ್ ಇಂಜಿನಿಯರ್ ಗಳ ಬದಲಾಗಿ ಬೇರೆ ಇಂಜಿನಿಯರ್ ಗಳು ನಮ್ಮ ಇಲಾಖೆಗೆ ಬಂದು ಸೇರುತ್ತಿಿದ್ದಾರೆ. ಕೆಂಪೇಗೌಡ ಯೋಜನಾ ಪ್ರಾಾಧಿಕಾರ ರಚಿಸಲಾಗಿದ್ದು, ಮುಖ್ಯಮಂತ್ರಿಿಗಳ ಅಧ್ಯಕ್ಷತೆ ಇತ್ತು. ಬಿಜೆಪಿಯವರ ಕಾಲದಲ್ಲಿ ಅದನ್ನು ಕಂದಾಯ ಸಚಿವರ ಅಧ್ಯಕ್ಷತೆ ಮಾಡಿದ್ದರು. ಈ ಪ್ರಾಾಧಿಕಾರಕ್ಕೆೆ ಬೆಂಗಳೂರಿನ ಸುಮ್ಮನಹಳ್ಳಿಿಯ ಬಳಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ನಗರ ಯೋಜನಾಕಾರರನ್ನು ತಯಾರಿಸಲು ವಿಟಿಯು ಜೊತೆ ಚರ್ಚೆ ಮಾಡಿ ಇದಕ್ಕಾಾಗಿಯೇ ಪ್ರತ್ಯೇಕ ಕಾಲೇಜು ಆರಂಭಿಸಲು ಮುಂದಾಗಿದ್ದೇವೆ. ಇದರಿಂದ ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಭಾಗಗಳಲ್ಲಿ ನಗರ ಯೋಜನೆ ರೂಪಿಸಲು ನೆರವಾಗುತ್ತದೆ. ಈ ಪ್ರಾಾಧಿಕಾರದಲ್ಲಿ ನಗರ ಯೋಜನೆ ಅಧಿಕಾರಿಗಳು ಹಾಗೂ ನಗರ ಯೋಜನೆ ನಿರ್ದೇಶಕರು ಸದಸ್ಯರಾಗಿರಬೇಕು ಎಂದು ಈ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ಪರಿಷತ್ತಿನಲ್ಲಿ ಅನುಮೋದನೆ

