ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.18:
ಪವನ ವಿದ್ಯುತ್ ಉಪಕರಣಗಳನ್ನು ಹೊತ್ತೊೊಯ್ಯುವ ಲಾರಿಗಳಿಂದ ಗ್ರಾಾಮೀಣ ಭಾಗದ ರಸ್ತೆೆಗಳು ಹಾಳಾದರೆ ಆ ಕಂಪನಿಗಳೇ ಕಡ್ಡಾಾಯವಾಗಿ ರಸ್ತೆೆ ದುರಸ್ತಿಿ ಮಾಡಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಾಕೀತು ಮಾಡಿದರು.
ವಿಧಾನಸೌಧದಲ್ಲಿ ಗುರುವಾರ ಪ್ರಶ್ನೋೋತ್ತರ ಕಲಾಪದಲ್ಲಿ ಕುಷ್ಠಗಿ ಶಾಸಕ ದೊಡ್ಡನಗೌಡ ಹನಮಗೌಡ ಪಾಟೀಲ್ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಸೋಲಾರ್ ಹಾಗೂ ವಿಂಡ್ ಸೇರಿದಂತೆ ಹೈಬ್ರಿಿಡ್ ವಿದ್ಯುತ್ ಉತ್ಪಾಾದನೆಗೆ ಸರ್ಕಾರ ಆದ್ಯತೆ ನೀಡಿದೆ. ಸದ್ಯ ರಾಜ್ಯದಲ್ಲಿ 7,300 ಮೆಗಾವ್ಯಾಾಟ್ ಪವನ ವಿದ್ಯುತ್ ಉತ್ಪಾಾದನೆಯಾಗುತ್ತಿಿದೆ. ಅದರಲ್ಲೂ ಪವನ ವಿದ್ಯುತ್ ಹಗಲು ರಾತ್ರಿಿ ಎನ್ನದೆ ನಿರಂತರವಾಗಿ ಉತ್ಪಾಾದನೆ ಮಾಡುತ್ತದೆ. ಆದರೆ, ಇದರ ಉಪಕರಣಗಳು ಸಾಗಿಸಬೇಕಾದರೆ ದೊಡ್ಡ ದೊಡ್ಡ ವಾಹನಗಳು ಬೇಕಾಗುತ್ತವೆ. ಇದರಿಂದ ರಸ್ತೆೆಗಳು ಹಾಳಾದಲ್ಲಿ ಆ ಭಾಗದಲ್ಲಿ ಪವನ ವಿದ್ಯುತ್ ಸ್ಥಾಾಪನೆಗೆ ಅನುಮತಿ ಪಡೆದ ಕಂಪನಿಯೇ ಅಲ್ಲಿನ ರಸ್ತೆೆಯನ್ನು ಅಭಿವೃದ್ದಿಪಡಿಸಿಬೇಕು ಎಂದು ಹೇಳಿದರು.
ಕುಷ್ಟಗಿ ವಿಧಾನ ಸಭಾ ಕ್ಷೇತ್ರದಲ್ಲಿ 41 ಯೋಜನೆಗಳ 213 ವಿಂಡ್ ಟರ್ಬೈನ್ಗಳಿಂದ 433.12 ಮೆಗಾವ್ಯಾಾಟ್ ಸಾಮಾಥ್ರ್ಯದ ಪವನ ವಿದ್ಯುತ್ ಯೋಜನೆಗಳು ಅನುಷ್ಠಾಾನಗೊಂಡಿವೆ. 2022-23 ರಿಂದ 2025-26 ನವೆಂಬರ್ ಅಂತ್ಯದವರೆಗೆ 1,394 ಮೆಗಾವ್ಯಾಾಟ್ ಪವನ ವಿದ್ಯುತ್ ಯೋಜನೆಗಳು ಹಂಚಿಕೆಯಾಗಿವೆ. ಇದರಲ್ಲಿ 57 ಮೆಗಾವ್ಯಾಾಟ್ ಸಾಮರ್ಥ್ಯದ ಯೋಜನೆಗಳು ಅನುಷ್ಠಾಾನಗೊಂಡಿವೆ. 1,337 ಮೆಗಾವ್ಯಾಾಟ್ ಸಾಮರ್ಥ್ಯದ ಯೋಜನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿವೆ. ಈ ಯೋಜನೆಗಳಿಗೆ ಬೇಕಾಗಿರುವ ಜಮೀನುಗಳನ್ನು ಭೂ ಮಾಲೀಕರಿಂದ ಜಮೀನು ಗುತ್ತಿಿಗೆ ಅಥವಾ ಕ್ರಯಕ್ಕೆೆ ಪಡೆಯುವುದು ಸಂಬಂಧಪಟ್ಟ ಕಂಪನಿಗಳದ್ದಾಗಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಹೇಳಿದರು.
3 ವರ್ಷದಲ್ಲಿ 400 ಸಬ್ಸ್ಟೆೆಷನ್:
ರಾಜ್ಯ ಸರ್ಕಾರ ಈಗಾಗಲೇ 100 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ಹೊಸದಾಗಿ ನಿರ್ಮಿಸಿದೆ. ಮುಂಬರುವ 3 ವರ್ಷದಲ್ಲಿ 400 ಉಪವಿದ್ಯುತ್ ವಿತರಣಾ ಕೇಂದ್ರಗಳನ್ನು ನಿರ್ಮಿಸಿ, ರಾಜ್ಯದ ಮೂಲೆ ಮೂಲೆಗಳಿಗೂ ವಿದ್ಯುತ್ ಸರಬರಾಜು ಸಂಪರ್ಕ ಜಾಲ ಬಲಪಡಿಸಲಾಗವುದು ಎಂದು ಸಚಿವ ಕೆ.ಜೆ.ಜಾರ್ಜ್ ಇದೇ ವೇಳೆ ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ದೊಡ್ಡನಗೌಡ ಪಾಟೀಲ, ನನ್ನ ವಿಧಾನಸಭಾ ಕ್ಷೇತ್ರದಲ್ಲಿ 41 ಕಂಪನಿಗಳಿಗೆ ಪವನ ವಿದ್ಯುತ್ ಸ್ಥಾಾಪನೆಗೆ ಅನುಮತಿ ನೀಡಲಾಗಿದೆ. ಆದರೆ, ಎಲ್ಲಿ ಪವನ ವಿದ್ಯುತ್ ್ಯಾನ್ ಇರುತ್ತದೋ ಅದರ ಸುತ್ತಮುತ್ತಲಿನ ಜಮೀನುಗಳಿಗೆ ತೊಂದರೆಯಾಗುತ್ತದೆ. ದೊಡ್ಡ ಲಾರಿಗಳು ಓಡಾಡುವುದರಿಂದ ಬೆಳೆಯೂ ನಷ್ಟವಾಗುತ್ತದೆ. ಅಲ್ಲದೆ, ಲಾರಿಗಳು ಓಡಾಡುವುದರಿಂದ ರಸ್ತೆೆ ಹಾಳಾಗುತ್ತಿಿದೆ. ಇದನ್ನು ಪ್ರಶ್ನಿಿಸಿದರೆ ಕೆಲವು ಕಂಪನಿಗಳು ಗೂಂಡಾಗಳನ್ನು ಇಟ್ಟುಕೊಂಡು ಜನರಿಗೆ ಬೆದರಿಸುವ ಕೆಲಸ ಮಾಡುತ್ತಿಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಅವರೂ ಕಂಪನಿಯ ಪರವಾಗಿಯೇ ಮಾತನಾಡುತ್ತಾಾರೆ. ಇದಕ್ಕೆೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ಪ್ರಶ್ನೆಗೆ ಸಚಿವ ಕೆ.ಜೆ. ಜಾರ್ಜ್ ಉತ್ತರ ರಸ್ತೆ ಹಾಳಾದರೆ ವಿಂಡ್ ಕಂಪನಿಗಳೇ ದುರಸ್ತಿ ಮಾಡಬೇಕು

