ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.18:
ಸಂಸ್ಕರಿಸದ ಗೃಹತ್ಯಾಾಜ್ಯ ನೀರನ್ನು ಹಾಗೆಯೇ ನದಿಗಳಿಗೆ ಬಿಡುವ ಸ್ಥಳೀಯ ಸಂಸ್ಥೆೆಗಳ ವಿರುದ್ಧ ಕ್ರಿಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆೆ ಹೇಳಿದರು.
ವಿಧಾನಸಭೆಯ ಪ್ರಶ್ನೋೋತ್ತರ ಕಲಾಪದಲ್ಲಿ ಗುರುವಾರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆೆಗೆ ಉತ್ತರಿಸಿದ ಅವರು, ಈಗಾಗಲೇ ಕಾವೇರಿ, ಕಬಿನಿ, ಅರ್ಕಾವತಿ, ತುಂಗಭದ್ರಾಾ, ಭದ್ರಾಾ ಸೇರಿದಂತೆ ವಿವಿಧ ನದಿಗಳಿಗೆ ಸಂಸ್ಕರಿಸದ ಗೃಹ ತ್ಯಾಾಜ್ಯ ನೀರು ಹರಿಯುತ್ತಿಿದ್ದು ನದಿ ದಂಡೆಯ 11 ನಗರ ಮತ್ತು ಪುರಸಭೆಗಳ ವಿರುದ್ಧ ಕ್ರಿಿಮಿನಲ್ ಪ್ರಕರಣ ದಾಖಲಿಸಲಾಗಿದೆ. ವಿವಿಧ ನ್ಯಾಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ತಿಳಿಸಿದರು.
12 ನದಿಗಳ ಪಾತ್ರದಲ್ಲಿ 30 ಸ್ಥಳೀಯ ಸಂಸ್ಥೆೆಗಳಿದ್ದು, ಇಲ್ಲಿ 814 ಎಂ.ಎಲ್.ಡಿ. ಗೃಹ ತ್ಯಾಾಜ್ಯ ನೀರು ಉತ್ಪತ್ತಿಿ ಆಗುತ್ತಿಿದ್ದು, 614 ಎಂ.ಎಲ್.ಡಿ. ಸಂಸ್ಕರಣೆಗೆ ಮಾತ್ರ ಶುದ್ಧೀಕರಣ ಘಟಕ ಇದೆ. 203 ಎಂ.ಎಲ್.ಡಿ. ಜಲ ಶುದ್ಧೀಕರಣಕ್ಕೆೆ ಘಟಕಗಳಿಲ್ಲ. ಹೀಗಾಗಿ ನಿಯಮಿತವಾಗಿ ಜಲ ತಪಾಸಣೆ ಮಾಡಲಾಗುತ್ತಿಿದ್ದು, ಜಲ ಶುದ್ಧೀಕರಣಕ್ಕೆೆ ಕ್ರಮ ವಹಿಸಲು ಸ್ಥಳೀಯ ಸಂಸ್ಥೆೆಗಳಿಗೆ ಸೂಚಿಸಲಾಗಿದೆ ಎಂದರು.
ಎಲ್ಲಾಾ ನದಿಗಳಿಗೆ ಕೈಗಾರಿಕೆ ಮತ್ತು ವಸತಿಗಳ ಕೊಚ್ಚೆೆರೊಚ್ಚು ನೀರನ್ನು ಸಂಸ್ಕರಿಸದೆ ಹರಿಸುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ದರ್ಶನ್ ಪುಟ್ಟಣ್ಣಯ್ಯ, ಪಾಂಡವಪುರದಲ್ಲಿ ಕಲುಷಿತ ನೀರು ನದಿಗೆ ಬಿಡಲಾಗುತ್ತಿಿದೆ. ಅದೇ ನೀರು ಬೆಂಗಳೂರಿಗೆ ಬರುತ್ತಿಿದೆ. ಸ್ಥಳೀಯ ಸಂಸ್ಥೆೆಗಳು ಗೃಹತ್ಯಾಾಜ್ಯ ನೀರು ಸಂಸ್ಕರಣೆ ಮಾಡದೆ ನದಿಗೆ ಬಿಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೈಸೂರು ಮೃಗಾಲಯದಲ್ಲಿ 139 ಹುದ್ದೆ ಭರ್ತಿಗೆ ಪ್ರಸ್ತಾಾವನೆ:
ಮೈಸೂರು ಮೃಗಾಲಯದಲ್ಲಿ 139 ಮಂಜೂರಾದ ಹುದ್ದೆಗಳಿದ್ದು, ಖಾಲಿ ಹುದ್ದೆ ನೇಮಕಾತಿಗೆ ಹಣಕಾಸು ಇಲಾಖೆಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ ಎಂದು ಸಚಿವ ಈಶ್ವರ ಖಂಡ್ರೆೆ ವಿಧಾನಸಭೆಗಿಂದು ತಿಳಿಸಿದ್ದಾರೆ.
ಪ್ರಶ್ನೋೋತ್ತರ ಕಲಾಪದಲ್ಲಿ ಅವರು ಶಾಸಕ ಟಿ.ಎಸ್. ಶ್ರೀವತ್ಸ ಅವರ ಪ್ರಶ್ನೆೆಗೆ ಉತ್ತರ ನೀಡಿ, ಒಳಮೀಸಲಾತಿ, ನ್ಯಾಾಯಾಲಯದ ತೀರ್ಪಿನ ಹಿನ್ನೆೆಲೆಯಲ್ಲಿ ನೇಮಕಾತಿ ವಿಳಂಬವಾಗಿದೆ. ಈ ನೇರನೇಮಕಾತಿಯ ವೇಳೆ ಹೊರಗುತ್ತಿಿಗೆಯಲ್ಲಿ ಸೇವೆ ಸಲ್ಲಿಸುತ್ತಿಿರುವವರಿಗೆ ಅನುಭವದ ಆಧಾರದಲ್ಲಿ ಆದ್ಯತೆ (ವೇಟೇಜ್) ನೀಡಿ ಹುದ್ದೆ ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
‘ಗೃಹತ್ಯಾಜ್ಯ ನೀರು ಸಂಸ್ಕರಿಸದೆ ನದಿಗೆ ಬಿಟ್ಟರೆ ಕ್ರಿಮಿನಲ್ ಕೇಸ್’

