ಸುದ್ದಿಮೂಲ ವಾರ್ತೆ ಬೆಳಗಾವಿ, ಡಿ.18
ಅತಿಥಿ ಶಿಕ್ಷಕರ ಸಂಖ್ಯೆೆ ಕಡಿಮೆ ಮಾಡಿ ಕಾಯಂ ಶಿಕ್ಷಕರ ನೇಮಕಕ್ಕೆೆ ಒತ್ತು ಕೊಡಲಾಗುತ್ತಿಿದ್ದು, ಮುಂದಿನ ಶೈಕ್ಷಣಿಕ ವರ್ಷ ಅರಂಭದ ವೇಳೆಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಿಯೆ ಪೂರ್ಣಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಪ್ರಶ್ನೆೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದಲ್ಲಿ ಶಿಕ್ಷಕರ ನೇಮಕ ಅಧಿಸೂಚನೆಯಾಗಿತ್ತು. ಆದರೆ, ನ್ಯಾಾಯಾಲಯ ಮತ್ತಿಿತರ ಕಾರಣಗಳಿಂದ ನೇಮಕಾತಿ ಆಗಿರಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆೆ ಬಂದ ಬಳಿಕ 13,000 ಶಿಕ್ಷಕರ ನೇಮಕ ಮಾಡಲಾಗಿದೆ. ಈಗ ಮತ್ತೆೆ 11 ಸಾವಿರ ಶಿಕ್ಷಕರ ನೇಮಕಕ್ಕೆೆ ಶಿಕ್ಷಕರ ಅರ್ಹತಾ ಪರೀಕ್ಷೆ ಪೂರ್ಣಗೊಳಿಸಲಾಗಿದ್ದು, ಮುಂದಿನ ವರ್ಷದ ಶಾಲೆ ಆರಂಭದ ವೇಳೆಗೆ ಇವರು ಶಾಲೆಗಳಲ್ಲಿ ಪಾಠ ಮಾಡಲು ಸಿದ್ಧರಾಗುತ್ತಾಾರೆ ಎಂದರು.
ರಾಜ್ಯದಲ್ಲಿ 41,088 ಸರ್ಕಾರಿ ಪ್ರಾಾಥಮಿಕ ಶಾಲೆಗಳಿದ್ದು, ಸರ್ಕಾರಿ ಪ್ರಾಾಥಮಿಕ ಶಾಲೆಗಳಿಗೆ 1,78,935 ಹುದ್ದೆಗಳು ಮಂಜೂರಾಗಿದ್ದು ಈ ಪೈಕಿ 1,33,345 ಹುದ್ದೆಗಳಿಗೆ ಭರ್ತಿಯಾಗಿದ್ದು, 45590 ಹುದ್ದೆಗಳು ಖಾಲಿ ಇರುತ್ತವೆ. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ಅವರು ವಿವರಿಸಿದರು.
ರಾಜ್ಯದಲ್ಲಿ 5024 ಸರ್ಕಾರಿ ಪ್ರೌೌಢ ಶಾಲೆಗಳಿದ್ದು, ಈ ಪ್ರೌೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿರುತ್ತವೆ. ಈ ಪೈಕಿ 32010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇರುತ್ತವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌೌಢಶಾಲೆಗಳಲ್ಲಿ 11,000 ಒಟ್ಟಾಾರೆಯಾಗಿ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆ ಸರಿದೂರಿಸಲಾಗಿದೆ ಹಾಗೂ ವಿದ್ಯಾಾರ್ಥಿಗಳಿಗೆ ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ. ಅಲ್ಲದೇ ವಿಕಲಚೇತನ ವಿದ್ಯಾಾರ್ಥಿಗಳಿಗೆ ಮಾರ್ಗದರ್ಶನ ನೀಡುವ ದೃಷ್ಟಿಿಯಿಂದ ವಿಶೇಷ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸಚಿವರು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಹರೀಶ್ ಪೂಂಜ, ಈ ವರ್ಷ 21 ಸಾವಿರ ಅತಿಥಿ ಶಿಕ್ಷಕರ ಆಯ್ಕೆೆ ಮಾಡಿಕೊಂಡಿದ್ದೀರಿ ಎಂದು ಉತ್ತರ ನೀಡಲಾಗಿದೆ. ಕಾಯಂ ಶಿಕ್ಷಕರಿಗೆ 60-70 ಸಾವಿರ ರೂ. ವೇತನ ಇದ್ದರೆ ಅತಿಥಿ ಶಿಕ್ಷಕರಿಗೆ 12 ಸಾವಿರ ರೂ. ವೇತನ ನೀಡಲಾಗುತ್ತಿಿದೆ. ಈ ತಾರತಮ್ಯ ನಿವಾರಿಸಬೇಕು. ಅಲ್ಲದೆ, ಶಿಕ್ಷಕರಿಗೆ ಗಣತಿ, ಚುನಾವಣೆಯಂತಹ ಕಾರ್ಯಗಳಿಂದ ಬಿಡುಗಡೆ ನೀಡಬೇಕು. ಅಲ್ಲದೆ, ಶಿಕ್ಷಕರಿಗೆ ಶಿಕ್ಷಣದ ಜೊತೆಗೆ ಮಕ್ಕಳಿಗೆ ಮಧ್ಯಾಾಹ್ನ ಬಿಸಿಯೂಟ, ಮೊಟ್ಟೆೆ, ಹಾಲು ಇಂತಹ ಕಾರ್ಯಕ್ರಮಗಳ ಉಸ್ತುವಾರಿಗೆ ಹೆಚ್ಚಿಿನ ಸಮಯ ಹೋಗುತ್ತಿಿದೆ. ಇಂತಹ ಕೆಲಸಗಳ ಹೊರೆ ಕಡಿಮೆ ಮಾಡಬೇಕು ಎಂದರು.
ಇದಕ್ಕೆೆ ಪ್ರತಿಕ್ರಿಿಯಿಸಿದ ಮಧು ಬಂಗಾರಪ್ಪ, ಗಣತಿ ಕಾರ್ಯದಿಂದ ಶಿಕ್ಷಕರನ್ನು ಕೈಬಿಡಬೇಕು ಎಂಬುದು ನನ್ನದೂ ಒತ್ತಾಾಯ ಇದೆ. ಈ ಸಂಬಂಧ ಪತ್ರವನ್ನೂ ಬರೆದಿದ್ದೆ. ಆದರೆ, ಗ್ರಾಾಮಮಟ್ಟದಲ್ಲಿ ಶಿಕ್ಷಕರನ್ನು ಹೊರತುಪಡಿಸಿದರೆ ಬೇರೆ ಸಿಬ್ಬಂದಿ ಸಿಗದಂತಹ ಅನಿವಾರ್ಯತೆ ಇದೆ. ಮುಂದಿನ ವರ್ಷ ಕೇಂದ್ರದ ಜನಗಣತಿ ಆರಂಭವಾಗಲಿದ್ದು, ಆಗಲೂ ಶಿಕ್ಷಕರ ಬಳಕೆ ಬೇಡ ಎಂದು ಕೇಂದ್ರಕ್ಕೂ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ವಿಧಾನಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ವಿಶ್ವಾಾಸ ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪೂರ್ಣ

