ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.18:
ನೆಲಮೂಲ ಸಂಸ್ಕೃತಿಯೇ ಜನಪದ ಸಾಹಿತ್ಯದ ಮೂಲಗುಣ ವೈಶಿಷ್ಟ. ಇದು ಪ್ರಕೃತಿ ಮಡಿಲಿನ ಸಾಹಿತವಾಗಿದ್ದು, ಯಾಂತ್ರಿಿಕ ಬದುಕಿನಲ್ಲಿ ಇದರ ಅಧ್ಯಯನ ಅಗತ್ಯವಾಗಿದೆ ಎಂದು ಡಿವೈಎಸ್ಪಿ ಚಂದ್ರಶೇಖರ ನಾಯಕ ಹೇಳಿದರು.
ನಗರದ ಜ್ಞಾಾನ ಜ್ಯೋೋತಿ ವಿಜ್ಞಾಾನ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಶಾಲಾ ಕಾಲೇಜಿಗೊಂದು ಜಾನಪದ ಉಪನ್ಯಾಾಸ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಜನರ ಅನುಭವವೇ ಜಾನಪದ ಸಾಹಿತ್ಯ. ಒಬ್ಬರ ಬಾಯಿಂದ ಮತ್ತೊೊಬ್ಬರ ಬಾಯಿಗೆ ಮೌಖಿಕವಾಗಿ ಹರಿದು ಬಂದ ಜನ ಸಾಹಿತ್ಯವೇ ಜನಪದ. ಇದೊಂದು ಗಟ್ಟಿಿ ಸಾಹಿತ್ಯವಾಗಿದೆ. ಜನಪದ ಸಾಹಿತ್ಯದ ಬಗ್ಗೆೆ ವಿದ್ಯಾಾರ್ಥಿಗಳಲ್ಲಿ ಅಭಿರುಚಿ ಮೂಡಿಸುವ ಕೆಲಸವಾಗಬೇಕು ಎಂದು ಸಲಹೆ ನೀಡಿದರು.
ಜನಪದ ಗೀತೆಗಳಲ್ಲಿ ಲೋಕ ನೀತಿ ವಿಷಯ ಕುರಿತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಾನಿಲಯದ ಸಿಂಧನೂರು ಸ್ನಾಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಾಪಕ ಡಾ.ಗುರುರಾಜ ಮಾತನಾಡಿ, ಜೀವನ ಮೌಲ್ಯಗಳನ್ನು ಕಲಿಸುವ ಗುಣ ಹೊಂದಿದೆ.ಆಧುನಿಕತೆಯ ಹೆಸರಿನಲ್ಲಿ ಆಹಾರವೂ ಕಲುಷಿತವಾಗುತ್ತಿಿದೆ. ಜನರ ಬದುಕೇ ಒಂದು ವಿಶ್ವವಿದ್ಯಾಾನಿಲಯ. ಜನಪದ ಗೀತೆಗಳು ಬದುಕುವುದನ್ನು ಕಲಿಸುತ್ತದೆ. ಸಾಕಷ್ಟು ಜನಪರ ನಿಲುವುಗಳಿವೆ. ಆಧುನಿಕತೆಯ ಪ್ರಭಾವಕ್ಕೆೆ ಒಳಗಾಗಿ ಅವಲಂಬಿತ ಕೃಷಿ ಬದುಕು ಕುಸಿತವಾಗುತ್ತಿಿದೆ. ಎಳ್ಳು ಜೀರಿಗೆ ಬೆಳೆಯೋಳೆ ಭೂತಾಯಿ ಎಂದು ಹೇಳುತ್ತ ವರ್ತಮಾನದ ಬದುಕನ್ನು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜ್ಞಾಾನ ಜ್ಯೋೋತಿ ಕಾಲೇಜಿನ ಪ್ರಾಾಂಶುಪಾಲ ಎನ್.ಪಿ.ವಿಷ್ಣುವರ್ಧನರೆಡ್ಡಿಿ ಕರ್ನಾಟಕ ಜಾನಪದ ಪರಿಷತ್ತಿಿನ ಅಧ್ಯಕ್ಷರಾದ ಡಾ. ಬಸವರಾಜ. ಪಿ. ನಾಯಕ ಪ್ರಾಾಸ್ತಾಾವಿಕವಾಗಿ ಮಾತನಾಡಿದರು.
ಲಿಂಗಸಗೂರು ಸರ್ಕಾರಿ ಕಾಲೇಜಿನ ಸಹ ಪ್ರಾಾಧ್ಯಾಾಪಕ ಡಾ.ಸಂಗನಗೌಡ, ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಾಸಕ ಡಾ.ಮರಿಲಿಂಗಪ್ಪ, ಜ್ಞಾಾನ ಜ್ಯೋೋತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಾಸಕರಾದ ಬಸವರಾಜ, ಜ್ಞಾಾನೇಶ್ವರ, ನೂರ್ಮಹ್ಮದ್, ಗಿರೀಶ, ವೆಂಕಟೇಶ ಇದ್ದರು. ದುರ್ಗಮ್ಮ ಪ್ರಾಾರ್ಥಿಸಿದರು. ಡಾ.ಧರ್ಮಣ್ಣ ಗೋನಾಳ ನಿರೂಪಿಸಿದರು. ಮಲ್ಲಯ್ಯ ಹಿರೇಮಠ ಸ್ವಾಾಗತಿಸಿದರು. ಶೋಭಾ ತೋರಗಲ್ ವಂದಿಸಿದರು.
ಜ್ಞಾನಜ್ಯೋತಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯಕ್ರಮ ನೆಲಮೂಲ ಸಂಸ್ಕೃತಿಯೇ ಜನಪದ ; ಡಿವೈಎಸ್ಪಿ

