ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.19
ರೌಡಿಶೀಟರ್ ಬಿಕ್ಲು ಶಿವ ಹತ್ಯೆೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜು ಹೈಕೋರ್ಟ್ನಲ್ಲಿ ಸಲ್ಲಿಸ್ದಿಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದು ಬಂಧನ ಭೀತಿ ಎದುರಾಗಿದೆ.
ಈ ಪ್ರಕರಣಕ್ಕೆೆ ಸಂಬಂಧಿಸಿ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ನ್ಯಾಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ಆದೇಶ ನೀಡಿದೆ. ಆದರೆ, ಪ್ರಕರಣಕ್ಕೆೆ ಕೋಕಾ ಕಾಯ್ದೆೆ ಅನ್ವಯಿಸುವುದಿಲ್ಲ ಎಂದು ನ್ಯಾಾಯಾಲಯ ಸ್ಪಷ್ಟಪಡಿಸಿದೆ.
ಭೈರತಿ ಬಸವರಾಜು ಅವರು ವಿಚಾರಣಾ ನ್ಯಾಾಯಾಲಯದಲ್ಲೇ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲಿಯವರೆಗೂ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಇದರಿಂದ ಭೈರತಿ ಬಸವರಾಜು ಬಂಧನ ಭೀತಿಯನ್ನು ಎದುರಿಸುವಂತಾಗಿದೆ.
ಇನ್ನೊೊಂದೆಡೆ, ಕೋಕಾ ಕಾಯ್ದೆೆ ರದ್ದಾಗಿರುವ ಹಿನ್ನೆೆಲೆಯಲ್ಲಿ ಜೈಲಿನಲ್ಲಿರುವ ಇತರ ಆರೋಪಿಗಳಿಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಾಗಿದೆ. ಅಲ್ಲದೆ, ಇನ್ನೂ ಆರೋಪಪಟ್ಟಿಿ ಸಲ್ಲಿಕೆಯಾಗದಿರುವ ಕಾರಣ ಮುಂದಿನ ದಿನಗಳಲ್ಲಿ ಜಾಮೀನಿಗೆ ಅವಕಾಶವಿದೆ ಎನ್ನಲಾಗಿದೆ.
ಬಿಕ್ಲು ಶಿವ ಕೊಲೆ ಪ್ರಕರಣದ ಹಿನ್ನೆೆಲೆ
ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವನನ್ನು (40) 2025 ರ ಜುಲೈ 15 ರಂದು ಬೆಂಗಳೂರಿನಲ್ಲಿ ಕೊಚ್ಚಿಿ ಕೊಲ್ಲಲಾಗಿತ್ತು. ಹಲಸೂರು ಪ್ರದೇಶದ ಭಾರತಿನಗರದ ಮಿನಿ ಅವೆನ್ಯೂ ರಸ್ತೆೆಯಲ್ಲಿರುವ ಶಿವ ಮನೆಯ ಬಳಿ 12 ಜನರ ಗುಂಪೊಂದು ಮಾರಕ ಆಯುಧಗಳಿಂದ ಹಲ್ಲೆ ನಡೆಸಿ ಹತ್ಯೆೆ ಮಾಡಿತ್ತು.
ಪ್ರಮುಖ ಆರೋಪಿ ಮತ್ತು ಮಾಸ್ಟರ್ ಮೈಂಡ್ ಜಗದೀಶ್ ಅಲಿಯಾಸ್ ಜಗ್ಗ ಕೊಲೆಯಾದ ತಕ್ಷಣ ದುಬೈ ಮತ್ತು ಇತರ ದೇಶಗಳಿಗೆ ಪರಾರಿಯಾಗಿದ್ದ. ಬ್ಲೂ ಕಾರ್ನರ್ ನೋಟಿಸ್ ಜಾರಿಯಾದ ನಂತರ 2025 ರ ಆಗಸ್ಟ್ 26 ರಂದು ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಾಣದಲ್ಲಿ ಬಂಧಿಸಲ್ಪಟ್ಟಿಿದ್ದ.
ಶಿವನ ತಾಯಿಯ ದೂರಿನ ಆಧಾರದ ಮೇಲೆ ಎ್ಐಆರ್ನಲ್ಲಿ ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಭೈರತಿ ಬಸವರಾಜುರನ್ನು 5 ನೇ ಆರೋಪಿ ಎಂದು ಹೆಸರಿಸಲಾಗಿದೆ .

