ಸುದ್ದಿಮೂಲ ವಾರ್ತೆ ಚಿಕ್ಕಮಗಳೂರು, ಡಿ.19
ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರಯಾಣಿಸುತ್ತಿಿದ್ದ ಹೆಲಿಕಾಪ್ಟರ್ ತಾಂತ್ರಿಿಕ ದೋಷದ ಹಿನ್ನೆೆಲೆಯಲ್ಲಿ ಚಿಕ್ಕಮಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಹೆಲಿಕಾಪ್ಟರ್ ತುರ್ತು ಭೂಸ್ವರ್ಶದಿಂದ ಸಚಿವರಿಗೆ ಯಾವುದೇ ಸಮಸ್ಯೆೆಯಾಗಿಲ್ಲ. ಅವರು ಸುರಕ್ಷಿತವಾಗಿದ್ದಾರೆ ಎಂದು ಚಿಕ್ಕಮಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಅಧಿವೇಶನ ಮುಗಿಸಿ ಸಚಿವರು ಮಧ್ಯಾಾಹ್ನ ಹೆಲಿಕಾಪ್ಟರ್ನಲ್ಲಿ ಬೆಂಗಳೂರಿನತ್ತ ಧಾವಿಸಿದ್ದರು. ಹೆಲಿಕಾಪ್ಟರ್ ಚಿಕ್ಕಮಗಳೂರು ಬಳಿ ಹಾರಾಟ ನಡೆಸುತ್ತಿಿದ್ದ ವೇಳೆ ಇಂಜಿನಲ್ಲಿ ತಾಂತ್ರಿಿಕ ದೋಷ ಕಾಣಿಸಿಕೊಂಡಿತು. ಕೂಡಲೇ ಪೈಲೆಟ್ ಪೊಲೀಸರಿಗೆ ಮಾಹಿತಿ ನೀಡಿ ಖಾಲಿ ಜಮೀನಿನಲ್ಲಿ ತುರ್ತು ಭೂಸ್ಪರ್ಶ ಮಾಡಿದರು.
ಹೆಲಿಕಾಪ್ಟರ್ ಸಿಂಗಲ್ ಎಂಜಿನ್ ಹೊಂದಿದ್ದು ದೋಷ ಕಂಡು ಬಂದ ಹಿನ್ನೆೆಲೆಯಲ್ಲಿ ಕೆಳಗೆ ಇಳಿಸಲಾಗಿದೆ. ಸಿಂಗಲ್ ಇಂಜಿನ್ ಹೆಲಿಕ್ಯಾಾಪ್ಟರ್ ಬೆಂಗಳೂರು ಜೊತೆ ಬರುವಾಗ ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನದಿಂದ ಮುಂದೆ ಸಾಗದೆ ಹತ್ತಿಿರದ ಪ್ರದೇಶದಲ್ಲಿ ಚಿಕ್ಕಮಂಗಳೂರು ಬಳಿಯ ಖಾಲಿ ಜಮೀನಲ್ಲಿ ಸುರಕ್ಷಿತವಾಗಿ ಇಳಿಸಿದ್ದಾರೆ
ಇಂಜಿನ್ನಲ್ಲಿ ದೋಷ ಕಾಣಿಸಿಕೊಂಡಿದ್ದರ ಜೊತೆಗೆ ಪ್ರತಿಕೂಲ ಹವಾಮಾನದಿಂದ ಗಾಳಿ ಜೋರಾಗಿ ಬೀಸುತ್ತಿಿತ್ತು. ಇದರಿಂದ ಹೆಲಿಕಾಪ್ಟರ್ಮುಂದೆ ಸಾಗಲು ತೊಂದರೆಯಾಗುತ್ತಿಿತ್ತು ಎಂದು ಪೈಲೆಟ್ ಮಾಹಿತಿ ನೀಡಿದ್ದಾರೆ.

