ಸುದ್ದಿಮೂಲ ವಾರ್ತೆ ರಾಯಚೂರು ಡಿ.19
ಕರ್ನಾಟಕ ರಾಜ್ಯ ಹಾಗೂ ಜಿಲ್ಲಾಾ ದಲಿತ ಸಾಹಿತ್ಯ ಪರಿಷತ್ತುಗಳ ಸಂಯುಕ್ತಾಾಶ್ರಯದಲ್ಲಿ ಡಿ.20 ಹಾಗೂ 21ರಂದು ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ.
ಶರಣೆ ಆಯ್ದಕ್ಕಿಿ ಲಕ್ಕಮ್ಮ ವೇದಿಕೆಗೆ ಹೆಸರಿಡಲಾಗಿದ್ದುಘಿ, ಕವಿ ಬೋಳಬಂಡೆಪ್ಪಘಿ, ಉರುಕುಂದಪ್ಪಘಿ, ಪಂ.ತಾರಾನಾಥ ಹೆಸರಲ್ಲಿ ಮಹಾದ್ವಾಾರ, ಕವಿ ಜಂಬಣ್ಣ ಅಮರಚಿಂತ ಹೆಸರಲ್ಲಿ ಮಂಟಪ, ಪುಸ್ಕತ ಮಳಿಗೆಗೆ ಡಾ.ಚನ್ನಣ್ಣ ವಾಲೀಕಾರ, ಶ್ರೀ ಶಾಂತರಸರ ನಾಮಕರಣ ಮಾಡಲಾಗಿದೆ.
ಬೆಳಿಗ್ಗೆೆ 8ಕ್ಕೆೆ ಪರಿಷತ್ತಿಿನ ಧ್ವಜಾರೋಹಣವನ್ನು ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ವ್ಯವಸ್ಥಾಾಪಕ ರಾಜೇಂದ್ರ ಜಲ್ದಾಾರ್ ನೆರವೇರಿಸಲಿದ್ದಾಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾದ ಸಾಹಿತಿ ಯಾದಗಿರಿಯ ಡಾ.ಜಯದೇವಿ ಗಾಯಕವಾಡ ಅವರನ್ನು ಬಸವೇಶ್ವರ ವೃತ್ತದಿಂದ ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಗುತ್ತದೆ.
ಎರಡು ದಿನಗಳ ಸಮ್ಮೇಳನವನ್ನು ಸಾಹಿತಿ ಹಾಗೂ ಸಂಸ್ಕೃತಿ ಚಿಂತಕ ಪ್ರೊೊ. ಬರಗೂರು ರಾಮಚಂದ್ರಪ್ಪ ಅವರು ಉದ್ಘಾಾಟಿಸಲಿದ್ದುಘಿ, ರಾಜ್ಯಸಭೆ ಮಾಜಿ ಸದಸ್ಯ ಹಾಗೂ ಸಾಹಿತಿ ಡಾ.ಎಲ್.ಹನುಮಂತಯ್ಯ ಆಶಯ ನುಡಿಗಳನ್ನಾಾಡಲಿದ್ದಾಾರೆ. ಕಾರ್ಯಕ್ರಮದಲ್ಲಿ ಸಚಿವ ಎನ್.ಎಸ್.ಬೋಸರಾಜ್ ಪ್ರಾಾಸ್ತಾಾವಿಕ ನುಡಿಗಳನ್ನು ಆಡಲಿದ್ದು, ನಿಕಟಪೂರ್ವ ಅಧ್ಯಕ್ಷ ಪ್ರೊೊ.ಎಚ್.ಟಿ.ಪೋತೆ, ಡಾ.ಮನುಬಳಿಗಾರ, ಜಿಲ್ಲೆೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸಂಸದರು, ಅಧಿಕಾರಿಗಳು, ದಲಿತ ಸಾಹಿತ್ಯಾಾಸಕ್ತರು, ಸಾಹಿತಿಗಳು ಭಾಗವಹಿಸಲಿದ್ದಾಾರೆ.
ಮಧ್ಯಾಾಹ್ನ 1ಕ್ಕೆೆ ಮೊದಲ ಗೋಷ್ಠಿಿಯಲ್ಲಿ ಸರ್ವರಿಗೂ ಸಂವಿಧಾನ ಕುರಿತು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಾಲಯದ ಕನ್ನಡ ಪ್ರಾಾಧ್ಯಾಾಪಕ ಡಾ.ಅಪ್ಪಗೆರೆ ಸೋಮಶೇಖರ ಮಾತನಾಡಲಿದ್ದು ನಂತರ ಸಂವಾದಿಸಲಿದ್ದಾಾರೆ.
ಮಧ್ಯಾಾಹ್ನ 2.30ಕ್ಕೆೆ 2ನೇ ಗೋಷ್ಠಿಿಯಲ್ಲಿ ಮೀಸಲಾತಿ ಒಳಗೆ, ಹೊರಗೆ ವಿಷಯದ ಕುರಿತು ತುಮಕೂರಿನ ಸಾಹಿತಿ ಗುರುಪ್ರಸಾದ ಕಂಟಲಗೆರೆ ವಿಷಯ ಮಂಡಿಸಲಿದ್ದಾಾರೆ.
ಸಂಜೆ 4ಕ್ಕೆೆ ಸಮ್ಮೇಳನಾಧ್ಯಕ್ಷರ ಸಾಹಿತ್ಯ, ಬರಹ ಕುರಿತು ವಿಚಾರ ಗೋಷ್ಠಿಿ ಹಾಗೂ ಮಹಿಳಾ ಮತ್ತು ಪುರುಷ ಕಾವ್ಯಾಾಯಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಡಿ. 21ರಂದು ಬೆಳಿಗ್ಗೆೆ 10ಕ್ಕೆೆ ರಾಷ್ಟ್ರೀಯ ಗೌರವ, ರಾಷ್ಟ್ರೀಯ ಯುವ ಹಾಗೂ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಿ, ಬಾಲ ಪ್ರಶಸ್ತಿಿ ಪ್ರದಾನ ಮಾಡಲಾಗುವುದು.
ಮಧ್ಯಾಾಹ್ನ 1ಕ್ಕೆೆ ಗೊಷ್ಠಿಿ 5ರಲ್ಲಿ ಸಂಕೀರ್ಣ ಗೋಷ್ಠಿಿಯಲ್ಲಿ ದಲಿತ ಚಳವಳಿ-50 ಕುರಿತು ಪ್ರಾಾಧ್ಯಾಾಪಕ ಶಿವಮೊಗ್ಗದ ಡಾ.ಬಿ.ಎಂ.ಪುಟ್ಟಯ್ಯಘಿ, ರಾಯಚೂರು ಜಿಲ್ಲೆೆಯ ದಲತ ಬಂಡಾಯ ಸಾಹಿತ್ಯ ಕುರಿತು ಉಪನ್ಯಾಾಸಕ ಸಿಂಧನೂರಿನ ರಾಮಣ್ಣ ಹಿರೇಭೇರಿಗಿ, ದಲಿತರ ಶಿಕ್ಷಣ ಮತ್ತು ಉದ್ಯೋೋಗ ಕುರಿತು ರಾಯಚೂರು ವಿವಿಯ ಉಪ ಕುಲಸಚಿವ ಡಾ.ಕೆ.ವೆಂಕಟೇಶ, ದಲಿತ ವಚನಗಾರ್ತಿಯರ ಬಗ್ಗೆೆ ಹಾವೇರಿಯ ಡಾ.ವಿಜಯಲಕ್ಷ್ಮೀ ಗೇಟಿಯವರ ಮಾತನಾಡಲಿದ್ದು ಆರ್.ಮಾನಸಯ್ಯ ಅಧ್ಯಕ್ಷತೆ ವಹಿಸಲಿದ್ದಾಾರೆ ಎಂದು ವಿವರಿಸಿದರು.
ಸಂಜೆ ಕವಿಗೋಷ್ಠಿಿ ನಂತರ ಸಮಾರೋಪ ನಡೆಯಲಿದೆ. ಸಾಧಕರಿಗೆ ಸನ್ಮಾಾನವೂ ಜರುಗಲಿದೆ ಎಂದು ಪರಿಷತ್ತಿಿನ ಜಿಲ್ಲಾಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಾಳ ತಿಳಿಸಿದ್ದಾಾರೆ.

