ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.20:
ಶಬರಿಮಲೆ ಅಯ್ಯಪ್ಪ ದೇಗುಲದ ಚಿನ್ನ ಕಳುವು ಪ್ರಕರಣಕ್ಕೆೆ ಸಂಬಂಧಿಸಿದಂತೆ ಬಳ್ಳಾಾರಿಯ ರೊದ್ದಂ ಜ್ಯುವಲರ್ಸ್ನ ಮಾಲೀಕ ಗೋವರ್ಧನ ಅವರನ್ನು ಕೇರಳದ ಎಸ್ಐಟಿ ತನಿಖಾ ತಂಡವು ಬಂಧಿಸಿ, ನ್ಯಾಾಯಾಂಗ ಬಂಧನಕ್ಕೆೆ ಒಪ್ಪಿಸಿದೆ.
ದೇವಸ್ಥಾಾನದಲ್ಲಿ ಚಿನ್ನ ಕಳುವು ಪ್ರಕರಣಕ್ಕೆೆ ಸಂಬಂಧಿಸಿದಂತೆ ಹಲವರು ಈಗಾಗಲೇ ಬಂಧಿಸಲ್ಪಟ್ಟಿಿದ್ದಾಾರೆ. ಶುಕ್ರವಾರ ಗೋವರ್ಧನ್ ಮತ್ತು ‘ಸ್ಮಾಾರ್ಟ್ ಕ್ರಿಿಯೇಷನ್ಸ್ನ ಸಿಇಒ ಪಂಕಜ್ ಭಂಡಾರಿ ಅವರನ್ನೂ ಬಂಧಿಸಿದ್ದಾರೆ. ಇವರು 8 ಮತ್ತು 9ನೇ ಆರೋಪಿಗಳಾಗಿದ್ದಾರೆ. ಬಂಧಿತರನ್ನು ಕೊಲ್ಲಂ ನ್ಯಾಯಾಲಯಕ್ಕೆೆ ಹಾಜರುಪಡಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಉಣ್ಣಿಿಕೃಷ್ಣನ್ ಪೋಟಿಯು ಅಯ್ಯಪ್ಪ ದೇವಸ್ಥಾನದ ದ್ವಾಾರಪಾಲಕ ಮೂರ್ತಿಗಳು ಹಾಗೂ ಗರ್ಭಗುಡಿಯ ದ್ವಾರಕ್ಕೆೆ ವಿದ್ಯುತ್ ಲೇಪನಕ್ಕಾಾಗಿ 2019ರಲ್ಲಿ ಸ್ಮಾರ್ಟ್ ಕ್ರಿಯೇಷನ್ಗೆ ನೀಡಿದ್ದರು. ಆ ಸಂದರ್ಭದಲ್ಲಿ 400 ಗ್ರಾಾಂ ಚಿನ್ನವನ್ನು ತೆಗೆದು, ಬಳ್ಳಾರಿಯ ರೊದ್ದಂ ಜ್ಯುಯಲರ್ಸ್ನ ಗೋವರ್ಧನಗೆ ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ. ಈ ಹಿನ್ನಲೆಯಲ್ಲಿ ಗೋವರ್ಧನ ಅವರ ಬಂಧನವಾಗಿದೆ.

