ಸುದ್ದಿಮೂಲ ವಾರ್ತೆ ರಾಯಚೂರು, ಡಿ.20:
ಸಂವಿಧಾನವೇ ನಮ್ಮ ಬದುಕಾಗಬೇಕು, ಭಾರತೀಯರ ಉಸಿರಾಗ ಬೇಕು, ಎದೆಯ ಹಾಡಾಗಬೇಕು, ದೇಶದ ಧರ್ಮ ಗ್ರಂಥವಾಗಬೇಕು ಎಂದು ಪ್ರತಿಪಾದಿಸಿದ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರು, ಸರ್ಕಾರಿ ಶಾಲೆಯಲ್ಲಿ ಕಲಿತವರಿಗೆ ಉದ್ಯೋೋಗದಲ್ಲಿ ಮೊದಲ ಆದ್ಯತೆ ನೀಡಬೇಕು ಶಿಕ್ಷಣ ರಾಷ್ಟ್ರೀಕರಣ ಮಾಡಬೇಕು, ಜೈಲಿಗೆ ಹೋಗಿ ಬಂದವರನ್ನು ಕಪ್ಪುುಪಟ್ಟಿಿಗೆ ಸೇರಿಸಿ ಪ್ರಶಸ್ತಿಿಘಿ, ಸ್ಥಾಾನ ಮಾನದಿಂದ ಹೊರಗುಳಿಯುವಂತೆ ಮಾಡಬೇಕು ಎಂದು ಹಕ್ಕೊೊತ್ತಾಾಯಗಳನ್ನು ಮಾಡಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಶನಿವಾರ ದಲಿತ ಸಾಹಿತ್ಯ ಪರಿಷತ್ತಿಿನ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾಾನ ವಹಿಸಿ ಮಾತನಾಡಿದರು. ವೌಢ್ಯತೆ ಹೆಚ್ಚಿಿದೆ, ಮಹಿಳೆಯರ ಮೇಲೆ ದೌರ್ಜನ್ಯಗಳು ನಿಲ್ಲುತ್ತಿಿಲ್ಲ ಸತ್ಯ ಮಾತನಾಡುವವರ ಕೊಲ್ಲಲಾಗುತ್ತಿಿದೆ ಸಾವಿನಲ್ಲೂ ಸಂಭ್ರಮ ಪಡುವ ವಿಕೃತ ಮನಸುಗಳ ಅಟ್ಟಹಾಸ ಹೆಚ್ಚಾಾಗಿ ಧರ್ಮಾಂಧತೆ, ಜಾತಿ ಮಿತಿ ಮೀರಿ ಬೆಳೆದು ಅಸಹಿಷ್ಣುತೆ ಸರಿಪಡಿಸಲಾಗದಷ್ಟು ಕಂದಕ ಸಮಾಜದಲ್ಲಿ ತಂದಿಟ್ಟಿಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂವಿಧಾನ ಬದಲಿಸಲೇ ನಾವು ಬಂದಿರುವುದು ಎಂಬ ಧೋರಣೆ ಹೆಚ್ಚಿಿದೆ ಸಂವಿಧಾನದಿಂದಲೇ ರಾಜಕೀಯ ಅಧಿಕಾರ ಪಡೆದದ್ದುಘಿ, ಶಿಕ್ಷಣ, ಸಮಾನತೆ ದಕ್ಕಿಿತ್ತು ಎಂಬುದನ್ನೆೆ ಮರೆ ಮಾಚುವ ನೀತಿ ಹೆಚ್ಚಿಿದೆ ಎಂದು ಆಳುವ ಸರ್ಕಾರಗಳ ವಿರುದ್ಧ ಪರೋಕ್ಷವಾಗಿ ವಾಗ್ದಾಾಳಿ ನಡೆಸಿದರು.
ಜೀವ ಪರ, ಮಾನವಪರ ಸಂವಿಧಾನ ಅಪಾಯದಲ್ಲಿದ್ದು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾಾರಿ ನಮ್ಮೆೆಲ್ಲರ ಮೇಲಿದೆ. ಮೀಸಲಾತಿ ಪಡೆದವರೆಲ್ಲರೂ ಸಂವಿಧಾನ ನಿರಾಕರಿಸುತ್ತಿಿದ್ದಾಾರೆ ಒಂದು ವರ್ಗದ ಜನರ ಮಾತ್ರ ರಕ್ಷಣೆ ಮಾಡುತ್ತಿಿದ್ದಾಾರೆ ಎಂದರು.
ದಲಿತ ಬಡ ಹೆಣ್ಣುಮಕ್ಕಳು ಧರ್ಮದ ವೌಢ್ಯತೆಯಿಂದ ಹೊರ ಬಂದು ವೈಚಾರಿಕ ಮನೋಭಾವ ಬೆಳೆಸಿಕೊಳ್ಳಬೇಕು ಇಂತಹ ವ್ಯವಸ್ಥೆೆ ಧಿಕ್ಕರಿಸಿ ಪ್ರತಿಭಟಿಸಿ ಆತ್ಮಗೌರವ ಹೆಚ್ಚಿಿಸಿಕೊಳ್ಳುವತ್ತ ಸಾಗಬೇಕು. ಅನ್ಯಾಾಯಗಳ ಪ್ರಶ್ನಿಿಸುವ ಗಟ್ಟಿಿತನ ಬರಬೇಕು ಎಂದ ಅವರು, ಗ್ರಾಾಮೀಣ ಮಹಿಳೆಯರಲ್ಲಿ ಅಪೌಷ್ಠಿಿಕತೆ ದೂರವಾಗಿ ಸೂಕ್ತ ಔಷಧ ಉಪಚಾರ ಸಿಗುವಂತಾಗಬೇಕು, ಪೌರಕಾರ್ಮಿಕರಿಗೆ ಗೌರವದ ಬದುಕು ಕಟ್ಟಿಿಕೊಡಬೇಕು ಕರ್ತವ್ಯದಲ್ಲಿ ಮಡಿದರೆ ಸರ್ಕಾರಿ ಗೌರವದೊಂದಿಗೆ ಸಂಸ್ಕಾಾರವಾಗಲಿ ಎಂದು ಆಗ್ರಹಿಸಿದರು.
ಇತ್ತೀಚೆಗೆ ಅಸಹಾಯಕ ಅಹಿಂದ ವರ್ಗದ ಬಡವರ, ವಿದ್ಯಾಾರ್ಥಿಗಳ ಬಳಸಿಕೊಳ್ಳುವುದು ನಿಲ್ಲಬೇಕು ರಾಜಕೀಯ ಧ್ರುವೀಕರಣದಂತೆ ಸಾಹಿತ್ಯ ಚಳವಳಿ ಮರು ಧ್ರುವೀಕರಣ ಆಗಬೇಕು ಸಂವಿಧಾನದ ಲಾನುಭವಿಗಳಾದ ನಾವೆಲ್ಲ ಸ್ವಾಾರ್ಥಿಗಳಾಗಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಡಾ.ಜಯದೇವಿ ಗಾಯಕವಾಡ ಅವರು ಚಳವಳಿ ಮರು ಹುಟ್ಟು ಪಡೆಯಬೇಕಾಗಿದೆ. ಇಂದಿಗೂ ಅಸ್ಪೃಶ್ಯತೆ, ವೌಢ್ಯತೆ, ದೌರ್ಜನ್ಯಗಳು ನಿಂತಿಲ್ಲ ಕಠಿಣ ಕಾನೂನುಗಳು ಜಾರಿಗೆ ಬರಬೇಕು. ಅಲ್ಲದೆ, ಯುವಕರಿಗೆ ಇಂದು ಮಾರ್ಗದರ್ಶನದ ಕೊರತೆಯಾಗಿ ದುಶ್ಚಟಗಳಿಗೆ ಒಳಗಾಗುತ್ತಿಿದ್ದು ಸ್ವಾಾಸ್ಥ್ಯ ಸಮಾಜಕ್ಕೆೆ ಮಾರಕವಾಗಿದೆ. ಕ್ಷಣಿಕ ಸುಖಕ್ಕೆೆ ಮಾರುಹೋಗಿ ಕುಡಿತದ ದಾಸರಾಗುವವರ ಸಂಖ್ಯೆೆ ಹೆಚ್ಚಿಿದೆ ಎಂದು ಕಳವಳಗೊಂಡರು. ಇಂತಹ ಯುವಕರಿಗೆ ಹಿರಿಯ, ಮುಖಂಡರ, ಚಿಂತಕರ ಮಾರ್ಗದರ್ಶನದ ಜೊತೆಗೆ ಅವರಿಗೆ ನಿರುದ್ಯೋೋಗದಿಂದ ಹೊರತರುವ ಯೋಜನೆಗಳಿಗೂ ಒತ್ತು ನೀಡುವ ಹೊಣೆಗಾರಿಕೆ ಸರ್ಕಾರ ವಹಿಸಿಕೊಳ್ಳಬೇಕು.
ಇತ್ತೀಚೆಗೆ ಒಳ ಮೀಸಲಾತಿ ಬಗ್ಗೆೆ ಚರ್ಚೆ ನಡೆದಿದ್ದು ಜನಸಂಖ್ಯೆೆಗನುಗುಣವಾಗಿ ಎಲ್ಲರಿಗೂ ಪಾಲು ಸಿಗಬೇಕು ಸಣ್ಣ ಸಣ್ಣ ಸಮುದಾಯಗಳಿಗೂ ಅನ್ಯಾಾಯವಾಗಬಾರದು ಎಡ-ಬಲ ಸಮುದಾಯಗಳು ಒಂದಾಗಿ ಕೂಡಿ ಹೋಗುವ ಅನಿವಾರ್ಯತೆ ಇದೆ. ರಾಜ್ಯಾಧಿಕಾರ ಹಿಡಿಯುವತ್ತ ಆಲೋಚಿಸಬೇಕಿದೆ ಎಂದರು.
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳಿಿನ ವೈಭವೀಕರಿಸುವ ಕೆಲಸ ನಡೆಯುತ್ತಿಿದ್ದು ಶಾಂತಿ ಕದಡುವ ಮನಸ್ಸುಗಳು ಹೆಚ್ಚಾಾಗಿ ದ್ವೇಷ, ತಾರತಮ್ಯ ಅಸೂಯೆ ಹೆಚ್ಚಿಿದ್ದು ಯುವಜನಾಂಗದ ಭವಿಷ್ಯ ಹಾಳಾಗುತ್ತಿಿದೆ. ಹೀಗಾಗಿ, ಸತ್ಯಘಿ, ಸುಳ್ಳುಗಳ ಪರಾಮರ್ಶಿಸುವ ಸಂಖ್ಯೆೆ ಹೆಚ್ಚಾಾಗಲಿ ಎಂದು ಆಶಿಸಿದರು.
ಸಂವಿಧಾನ ಸಾಮಾಜಿಕ ನ್ಯಾಾಯವನ್ನು ಎತ್ತಿಿ ಹಿಡಿದಿದೆ ಎಲ್ಲ ವರ್ಗಗಳಿಗೂ ಪ್ರಾಾತಿನಿಧ್ಯ ನೀಡಿದೆ ಪ್ರತಿಯೊಬ್ಬರೂ ಓದಿ ತಿಳಿದು ಆರ್ಥೈಸಿಕೊಳ್ಳಬೇಕಲ್ಲದೆ, ಸಂವಿಧಾನ ಪೀಠಿಕೆ ಸಾಹಿತ್ಯ ಮತ್ತು ಚಳವಳಿಯ ಆಶಯವಾಗಬೇಕು ಸಂವಿಧಾನವೇ ನಮ್ಮ ಬದುಕಾಗಬೇಕು ಎಂದು ಆಗ್ರಹಿಸಿದರು.
ಸಮಾಜದ ಸ್ವಾಾಸ್ಥ್ಯ ಕಾಪಾಡುವುದು ಮಾನವನ ಅಂತಃಕರಣ ಎತ್ತಿಿ ಹಿಡಿಯುವುದು ಅಸಹಾಯಕರನ್ನು ಮುಖ್ಯವಾಹಿನಿಗೆ ತರುವ ಮೂಲಕ ಮಾನವನ ಕುಲವೇ ಒಂದು ಕುಟುಂಬ ಎನ್ನುವ ಚಿಂತನೆ ಸಾಹಿತ್ಯದ ಮೂಲ ಉದ್ದೇಶವಾಗಬೇಕು.
ಪ್ರತಿಯೊಬ್ಬ ಸಾಹಿತಿಗೂ ಸಂವೇದನೆಗಳು ಇರಬೇಕು ಸಂವೇದನೆಗಳಿರದಿದ್ದರೆ ಆತ ಸಾಹಿತಿಯೇ ಅಲ್ಲ ಎಂದ ಅವರು ರೈತರು ದೇಶದ ಬೆನ್ನೆೆಲಬು ಆದರೆ ಅನೇಕ ಸಮಸ್ಯೆೆಗಳಿಂದ ನಲುಗಿದ್ದು ಅವರಿಗೆ ಸರ್ಕಾರ ಬಲ ತಂದುಕೊಡಬೇಕು.
ಇಂದಿನ ವಿಕೃತ ಮನಸು, ಚಿಂತನೆಗಳ ಬದಲಾವಣೆಗೆ ಬುದ್ದಘಿ, ಬಸವ ಅಂಬೇಡ್ಕರ್ ಅವರೇ ಸರಿಯಾದ ಮದ್ದು ಎನ್ನುವಂತಾಗಿದ್ದು ಮಕ್ಕಳನ್ನು ವೈಚಾರಿಕೆತೆಯಲ್ಲಿ ಮಿಂದೇಳಲು ಅವಕಾಶ ಕಲ್ಪಿಿಸಿಕೋಡಬೇಕಿದೆ ಎಂದರು.
ಹಕ್ಕೊತ್ತಾಾಯಗಳು :
ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೆ ತಂದು ಶಿಕ್ಷಣವನ್ನು ರಾಷ್ಟ್ರೀಕರಣ ಮಾಡುವ ಮೂಲಕ ಕಡ್ಡಾಾಯ ಜಾರಿಗೆ ಮುಂದಾಗಬೇಕು ಅಲ್ಲದೆ, ಕನ್ನಡ ಶಾಲೆಗಳ ಮುಚ್ಚುವುದು ಕೈ ಬಿಟ್ಟು ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣಕ್ಕೆೆ ಒತ್ತು ಕೊಟ್ಟು ಕನ್ನಡ ಮಾಧ್ಯಮದಲ್ಲಿ ಕಲಿಕೆಯಾಗಲಿ ಸರ್ಕಾರಿ ಶಾಲೆಯಲ್ಲಿ ಓದಿದವರಿಗೆ ಸರ್ಕಾರಿ ನೌಕರಿಯಲ್ಲಿ ಮೊದಲ ಆದ್ಯತೆ ನಿಯಮ ಜಾರಿಗೆ ತರಬೇಕು ಶಿಕ್ಷಣ ಉಳ್ಳವರ ಸ್ವತ್ತಾಾಗಬಾರದು ಎಂದಾದರೆ ರಾಷ್ಟ್ರೀಕರಣವಾದರೆ ವಂಚಿತರೆಲ್ಲರಿಗೂ ಅವಕಾಶ ಸಿಗಲಿದೆ. ಭ್ರಷ್ಟಾಾಚಾರ ಎಲ್ಲ ರಂಗಗಳಲ್ಲೂ ಆವರಿಸಿದ್ದು ಕಡಿವಾಣ ಹಾಕಿ ಈ ವಿಚಾರದಲ್ಲಿ ಜೈಲಿಗೆ ಹೋದವರು ಪುನಃ ರಾಜಾರೋಷ ಭ್ರಷ್ಟಾಾಚಾರ ಮಾಡುತ್ತಿಿದ್ದು ಅನೇಕರು ಬಲಿಪಶು ಆಗುತ್ತಿಿದ್ದಾಾರೆ ಹೀಗಾಗಿ ಜೈಲಿಗೆ ಹೋಗಿ ಬಂದವರನ್ನು ಕಪ್ಪುು ಪಟ್ಟಿಿಗೆ ಸೇರಿಸಿ ಸನ್ಮಾಾನ, ಪ್ರಶಸ್ತಿಿಘಿ, ಉನ್ನತ ಹುದ್ದೆೆಗಳ ನೀಡಬಾರದು. ಬೌದ್ಧ ನೆಲಗಳು ಮತ್ತು ಸನ್ನತಿ ಅಭಿವೃದ್ದಿ ಮಾಡಬೇಕು, ದಲಿತ ಮಹಿಳೆಯರ ಅಭಿವೃದ್ದಿ ನಿಗಮ ಸ್ಥಾಾಪಿಸಲು ಡಾ.ಜಯದೇವಿ ಗಾಯಕವಾಡ ಸರ್ಕಾರಕ್ಕೆೆ ಹಕ್ಕೊೊತ್ತಾಾಯ ಮಾಡಿದರು.
ದಲಿತ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಜಯದೇವಿ ಗಾಯಕವಾಡ ಪ್ರತಿಪಾದನೆ ಸಂವಿಧಾನವೇ ಭಾರತೀಯರ ಬದುಕು, ಧರ್ಮ ಗ್ರಂಥವಾಗಬೇಕು

