ಸುದ್ದಿಮೂಲ ವಾರ್ತೆ ಮುದಗಲ್, ಡಿ.20:
ರೈತರ ಪ್ರಮುಖ ಹಬ್ಬವಾದ ಎಳ್ಳು ಅಮವಾಸ್ಯೆೆ ದಿನದಂದು ಪಟ್ಟಣದ ಹಾಗೂ ಸುತ್ತಲಿನ ಹಳ್ಳಿಿಯ ರೈತರು ಹೊಲದಲ್ಲಿ ಚರಗ ಚೆಲ್ಲುವ ಮೂಲಕ ಶುಕ್ರವಾರ ಸಂಭ್ರಮದಿಂದ ಹಬ್ಬ ಆಚರಿಸಿದರು.
ಹೊಲದಲ್ಲಿ ಎಲ್ಲರೊಂದಿಗೆ ರುಚಿರುಚಿಯಾದ ಬೋಜನ ಸವಿದರು. ಹೊಲದಲ್ಲಿ ಮಹಿಳೆಯರು ಬನ್ನಿಿ ಮರಕ್ಕೆೆ ಪೂಜೆ ಸಲ್ಲಿಸಿದರು. ಭೂಮಿ ತಾಯಿಗೆ ಸೀರೆ ಅರ್ಪಿಸಿ ಸಂಪ್ರದಾಯ ಪಾಲಿಸಿದದರು. ಮನೆಯಿಂದ ತಂದಿದ್ದ ಬಾನದ ನೈವೇದ್ಯ ಬೆಳೆಗಳಿಗೆ ಚೆಲ್ಲುವ ಮೂಲಕ ಚರುಗವನ್ನು ಸಂಭ್ರಮದಿಂದ ಆಚರಿಸಿದರು.
ಮುದಗಲ್: ಎಳ್ಳು ಅಮಾವಾಸ್ಯೆಯ ಸಂಭ್ರಮ

