ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.20
ಸೇಡಂ ವಿಧಾನಸಭಾ ಕ್ಷೇತ್ರದ ಕರ್ಚಖೇಡ್ ಗ್ರಾಾಮದಲ್ಲಿ ಅಕ್ರಮವಾಗಿ ನಡೆಸುತ್ತಿಿರುವ ಸಾರಾಯಿ ಅಂಗಡಿ ಬಂದ್ ಮಾಡಿಸಬೇಕು ಎಂದು ಬಿಜೆಪಿ ನಾಯಕಿ ಸಂತೋಷಿರಾಣಿ ಪಾಟೀಲ್ ತೆಲ್ಕೂರ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ಕರ್ಚಖೇಡ್ ಗ್ರಾಾಮದಲ್ಲಿ ಕಾಂಗ್ರೆೆಸ್ ಮುಖಂಡರಾದ ತುಳಜಪ್ಪಾಾ ಹಡಪದ ಹಾಗೂ ಅವರ ಮಗ ಆನಂದ್ ಹಡಪದ ಎಂಬುವರು ಸರ್ಕಾರಿ ಜಾಗದಲ್ಲಿ ಸಾರಾಯಿ ಮಾರುತ್ತಿಿದ್ದು, ಆ ಜಾಗದ ಅಕ್ಕ ಪಕ್ಕದಲ್ಲಿ ಆರೋಗ್ಯ ಕೇಂದ್ರ, ಹನುಮಾನ ದೇವಸ್ಥಾಾನ, ಬಸ್ ನಿಲ್ದಾಾಣ ಇದೆ. ದಿನನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು, ವಯಸ್ಕರು, ಹೆಣ್ಣು ಮಕ್ಕಳು, ಹಿರಿಯರು ಬೇರೆ ಊರುಗಳಿಗೆ, ಶಾಲೆಗಳಿಗೆ ಹಾಗೂ ಹೊಲಗಳಿಗೆ ಹೋಗಲು ಇದೇ ರಸ್ತೆೆಯನ್ನು ಅವಲಂಬಿಸಿರುತ್ತಾಾರೆ. ಇಂತಹ ಸ್ಥಳದಲ್ಲಿ ಅಕ್ರಮ ಸಾರಾಯಿ ಮಾರುವುದರಿಂದ, ಕೆಲವರು ಅಲ್ಲೇ ಕುಡಿದು ಅದೇ ಜಾಗದಲ್ಲಿ ಮಲಗುವುದು ಹಾಗೂ ಜನರಿಗೆ ನಿರಂತರ ತೊಂದರೆ ಮಾಡುತ್ತಿಿದ್ದು, ಜನರು ಸಮಸ್ಯೆೆ ಎದುರಿಸುತ್ತಿಿದ್ದಾರೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಸಮಸ್ಯೆೆ ಕುರಿತು ಗ್ರಾಾಮ ಪಂಚಾಯತಿಯ ಸದಸ್ಯರು, ಗ್ರಾಾಮದ ಮುಖಂಡರು, ಸಾರ್ವಜನಿಕರು ಮೌಖಿಕವಾಗಿ ಹಾಗೂ ಲಿಖಿತ ರೂಪದಲ್ಲಿ ಪಿಡಿಓಗೆ ಮನವಿ ಪತ್ರ ಸಲ್ಲಿಸಿರುತ್ತಾಾರೆ. ಈ ಸಂದರ್ಭದಲ್ಲಿ ಒಂದು ಬಾರಿ ಪಿಡಿಓ ಅವರು ಸಿಸಿ ಕ್ಯಾಾಮರಾ ಅಳವಡಿಸಲು ಮುಂದಾಗಿ ಅಳವಡಿಸಿ ಹೋದ ತಕ್ಷಣವೇ ಈ ಅಕ್ರಮ ಸಾರಾಯಿ ಮಾರುತ್ತಿಿರುವುವವರೇ, ಈ ಸಿಸಿ ಕ್ಯಾಾಮರಾ ಕಿತ್ತು ಬಿಸಾಕಿದ್ದಾರೆ. ಹೀಗಾಗಿ ಸೇಡಂ ಶಾಸಕರು ಆಗಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಸಾರ್ವಜನಿಕರ ಹಿತಾಸಕ್ತಿಿಗೆ ಬೆಲೆ ಕೊಟ್ಟು ಕೂಡಲೇ ಅಕ್ರಮ ಸಾರಾಯಿ ಅಂಗಡಿ ತೆರವುಗೊಳಿಸಿ, ಅಲ್ಲಿ ಸಿಸಿ ಕ್ಯಾಾಮರಾ ಅಳವಡಿಸಲು ಪಿಡಿಓ ಹಾಗೂ ತಮ್ಮ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಾಯಿಸಿದರು.
ಕೂಡಲೇ ಗ್ರಾಾಮದ ಸಮಸ್ಯೆೆ ಬಗೆಹರಿಯದಿದ್ದರೆ, ಬುಧವಾರ ಕರ್ಚಖೇಡ್ ಗ್ರಾಾಮದಲ್ಲಿ ದೊಡ್ಡ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಶೈಲಜಾ ಹಿತ್ತಲ, ಗುರುರಾಜ್ ಕುಲಕರ್ಣಿ, ನರಸರೆಡ್ಡಿಿ ಸೇರಿದಂತೆ ಮತ್ತಿಿತರರು ಇದ್ದರು.

