ಸುದ್ದಿಮೂಲ ವಾರ್ತೆ ಮಸ್ಕಿ, ಡಿ.20:
ತಾಲ್ಲೂಕಿನ ಗುಡಗಲದಿನ್ನಿಿ ಗ್ರಾಾಮದ ಸ.ನಂ 55ರಲ್ಲಿ ಹಂಪನಾಳ ಗ್ರಾಾಮದ ನಾಗಮ್ಮ ಹಾಗೂ ಇತರ ರೈತರಿಗೆ ಉಳುಮೆ ಚೀಟಿ ನೀಡುವಂತೆ ಸರ್ಕಾರವನ್ನು ಒತ್ತಾಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಮಸ್ಕಿಿ ತಾಲೂಕು ವತಿಯಿಂದ ನಗರದ ತಹಸಿಲ್ದಾಾರ್ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿ ತಹಸೀರ್ಲ್ದಾಾ ಮಂಜುನಾಥ್ ಭೋಗಾವತಿವರಿಗೆ ಮನವಿ ಸಲ್ಲಿಸಿಸಲಾಯಿತು.
ಸಂಘದ ಅಧ್ಯಕ್ಷ ಶಿವು ಮಸ್ಕಿಿ ಮಾತನಾಡಿ, ತಾಲ್ಲೂಕಿನಲ್ಲಿ ಬಡ ರೈತರು ಮತ್ತು ಕೂಲಿಕಾರರು ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿಿದ್ದಾರೆ.ಆದರೆ ಸರ್ಕಾರ ಹಲವು ಕಾರಣಗಳನ್ನು ಹೇಳಿ,ಅವರಿಗೆ ಉಳುಮೆ ಚೀಟಿ ನೀಡಲು ನಿರಾಕರಿಸುತ್ತಿಿದೆ ಎಂದು ಆರೋಪಿಸಿದರು.
ಉಳುಮೆ ಚೀಟಿ ನೀಡುವಂತೆ ಸರ್ಕಾರಕ್ಕೆೆ ಈಗಾಗಲೇ ಹಲವು ಬಾರಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದಿಂದ ಇದಕ್ಕೆೆ ಯಾವುದೇ ಪ್ರತಿಕ್ರಿಿಯೆ ದೊರೆತಿಲ್ಲ.ಈ ರೈತರು 45 ವರ್ಷದಿಂದ ಉಳುಮೆ ಮಾಡಿಕೊಂಡು ಬರುತ್ತಿಿದ್ದಾರೆ ಇಲ್ಲಿವರೆಗೂ ಯಾವುದೇ ಉಳುಮೆ ಚೀಟಿ ನೀಡಲು ನಿರಾಕರಿಸಲಾಗುತ್ತಿಿದೆ ಎಂದು ದೂರಿದರು.
ತಹಶೀಲ್ದಾಾರರು ಗುಡಗಲದಿನ್ನಿಿ ಗ್ರಾಾಮದ ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಲಾನುಭವಿಗಳಿಗೆ ಜಮೀನು ಉಳುಮೆ ಚೀಟಿ ನೀಡಿ ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಘನಮಠದಯ್ಯ ಗೋನವಾರ,ಅಮರೇಶ, ಗುರು, ಸುರೇಶ್, ಸುನಿಲ್, ನವೀನ್, ಹನುಮೇಶ ನಾಯಕ,
ಶಿವು,ಸಂತೋಷ್, ಬಸಯ್ಯಸ್ವಾಾಮಿ ಹೊಸಮಠ, ದವಲ್ ಸಾಬ್ ನದ್ಾ,ಸಂದೀಪ ಹಾಗೂ ಇನ್ನಿಿತರ ಸಂಘದ ಪದಾಧಿಕಾರಿಗಳು ಉಪಸ್ಥಿಿತರಿದ್ದರು.ಅಖ
ರೈತರಿಗೆ ಉಳುಮೆ ಚೀಟಿ ನೀಡಲು ಒತ್ತಾಯ

