ಸುದ್ದಿಮೂಲ ವಾರ್ತೆ ಕಮಲನಗರ, ಡಿ.20
ರೈತರ ಹಬ್ಬ ಎಂದು ಪ್ರಸಿದ್ಧವಾಗಿರುವ ಎಳ್ಳು ಅಮಾವಾಸ್ಯೆೆ ಹಬ್ಬದ ನಿಮಿತ್ತ ಕಮಲನಗರ ತಾಲೂಕಿನ ಮದನೂರ್ ಗ್ರಾಾಮದಲ್ಲಿ ಮುಖ್ಯ ಗೇಟಿನ ಮುಂಭಾಗದಲ್ಲಿರುವ ಹನುಮಾನ್ ದೇವಸ್ಥಾಾನದಲ್ಲಿ ಹಡಗ್ಯಾಾ ದಹನ ಹಾಗೂ ಬೆಂಕಿ ತುಳಿಯುವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.
ಹಬ್ಬದ ನಿಮಿತ್ತ ವಿವಿಧ ಊರುಗಳಿಂದ ಬಂದಿದ್ದ ಗ್ರಾಾಮಸ್ಥರು ಜೋಳದ ಕಟ್ಟೆೆಗಳಿಂದ ಹಡಗ್ಯಾಾ ಮಾಡಿಕೊಂಡು ಬೆಂಕಿ ತಾಗಿಸಿ ದೇವಸ್ಥಾಾನಕ್ಕೆೆ ತಂದು ಹನುಮಾನ್ ದೇವಸ್ಥಾಾನದ ಮುಖ್ಯದ್ವಾಾರದಲ್ಲಿ ಹಡಗ್ಯಾಾ ದಹನ ಮಾಡಿದರು. ರಸ್ತೆೆಯುದ್ದಕ್ಕೂ ಜನಸಾಗರವೇ ತುಂಬಿತ್ತು. ಸಂಜೆ ನಡೆದ ಹಡಗ್ಯಾಾ ದಹನ ಹಾಗೂ ಬೆಂಕಿ ತುಳಿಯುವ ಕಾರ್ಯಕ್ರಮಕ್ಕೆೆ ಜನರ ತಳ್ಳಾಾಟ ಜೋರಾಗಿತ್ತು. ಕೆಲಸದ ನಿಮಿತ್ತ ಬೇರೆ ಬೇರೆ ಜಾಗಗಳಿಗೆ ಹೋಗಿರುವ ಗ್ರಾಾಮಸ್ಥರು ಗ್ರಾಾಮಕ್ಕೆೆ ಆಗಮಿಸಿ ಹಡಗ್ಯಾಾ ಸುಡುವ ಮೂಲಕ ವರ್ಷಂಪ್ರತಿ ಸಂಪ್ರದಾಯ ಮುಂದುವರಿಸಿದ್ದು, ಇದರಿಂದ ನೂರಾರು ಜನರು ದೇವಸ್ಥಾಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಜಮಾಯಿಸಿದ್ದರು. ಹಡಗ್ಯಾಾ ಸುಟ್ಟು ಐದು ಸುತ್ತು ಹಾಕುವ ಮೂಲಕ ಆನಂದಪಟ್ಟರು.
ಲಿಂಗ ಶೆಟ್ಟಿಿ ಮಂಗಳೂರು ಹಾಗೂ ಸುನೀತಾ ಮಂಗಳೂರು ದಂಪತಿಗಳು ವರ್ಷಂಪ್ರತಿ ಭಾಜಾ ಭಜಂತ್ರಿಿ ನಡೆಸುವ ಮೂಲಕ ಹಡಗ್ಯಾಾ ದಹನ ಕಾರ್ಯಕ್ರಮಕ್ಕೆೆ ಉತ್ಸಾಾಹ ತುಂಬುತ್ತಾಾರೆ. ಬೇರೆ ಬೇರೆ ಜಾಗದಿಂದ ಬಂದಿದ್ದ ಎಲ್ಲಾ ಗ್ರಾಾಮಸ್ಥರು ಹಡಗ್ಯಾಾ ಸುಟ್ಟು ಆನಂದಪಟ್ಟರು.

