ಸುದ್ದಿಮೂಲ ವಾರ್ತೆ ರಾಯಚೂರು , ಡಿ.20:
ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನಕ್ಕೆೆ 75 ವರ್ಷಗಳಾದರೂ ಸರ್ವರನ್ನೊೊಳಗೊಳ್ಳುವ ಮೂಲಕ ಪ್ರಸ್ತುತತೆ ಉಳಿಸಿಕೊಂಡಿದೆ ಎಂದು ಕಲಬುರ್ಗಿಯ ಕೇಂದ್ರೀಯ ವಿಶ್ವ ವಿದ್ಯಾಾಲಯದ ಕನ್ನಡ ಪ್ರಾಾಧ್ಯಾಾಪಕ ಡಾ.ಅಪ್ಪಗೆರೆ ಸೋಮಶೇಖರ ಹೇಳಿದರು.
ನಗರದ ಪಂ.ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಶನಿವಾರ ದಲಿತ ಸಾಹಿತ್ಯ ಪರಿಷತ್ತಿಿನ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದ ಮೊದಲ ಗೋಷ್ಠಿಿಯಲ್ಲಿ ಸರ್ವರಿಗೂ ಸಂವಿಧಾನ ಕುರಿತು ಮಾತನಾಡಿದರು.ಭಾರತಕ್ಕೆೆ ಭವಿಷ್ಯವಿಲ್ಲ ಎಂಬುವವರಿಗೆ, ಋಣಾತ್ಮಕವಾಗಿ ಆಲೋಚಿಸುವ ಮನಸುಗಳಿಗೆ ಸಂವಿಧಾನದ ಪ್ರಸ್ತುತತೆ ಬಗ್ಗೆೆ ಮತ್ತೆೆಮತ್ತೆೆ ಚರ್ಚೆಯಾಗಬೇಕಿದೆ.
ಇಂದು ಪ್ರಜಾಪ್ರಭುತ್ವ ದೊಡ್ಡ ಗಂಡಾಂತರ ಎದುರಿಸುತ್ತಿಿದ್ದು ಅದನ್ನು ಪಾರು ಮಾಡುವ ಹೊಣೆಗಾರಿಕೆ ಯಾರದು ಎಂಬ ಪ್ರಶ್ನೆೆ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕು. ಅಸ್ಪೃಶ್ಯತೆ , ಅವಮಾನ ಈಗಲೂ ಅನುಭವಿಸುತ್ತಿಿದ್ದೇವೆ. ಅಕ್ಷರ ಭಾರತದಲ್ಲಿ ಅನಕ್ಷರತೆಯ ಸಂವಿಧಾನ ಎಂಬ ಮಾತು ಅಪಾಯಕಾರಿ ಜೀವಂತವಾಗಿದೆ ಇದನ್ನು ಹೋಗಲಾಡಿಸುವಲ್ಲಿ ನಮ್ಮ ಪಾತ್ರವೇನು ಎಂಬುದರ ಅತ್ಮಾಾವಲೋಕನ ಆಗಬೇಕಿದೆ. ಸಮಸ್ತ ಭಾರತೀಯರು ಸಂವಿಧಾನದ ಋಣದ ಮಕ್ಕಳು ಎಂದ ಅವರು ಸಂವಿಧಾನದಿಂದ ಎಲ್ಲ ಪಡೆದ ನಾವು ಮರಳಿ ಕೊಟ್ಟಿಿದ್ದೇನು. ಸಂವಿಧಾನ, ಅಂಬೇಡ್ಕರ್ ಬಗ್ಗೆೆ ಸಾಕಷ್ಟು ಅನುಮಾನಗಳ ಬಿತ್ತುವ ಕೆಲಸ ನಡೆದಿದೆ. ಅದಕ್ಕೆೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹ ಬದುಕು ಮೂಲಕವೇ ಉತ್ತರ ನೀಡಬೇಕಿದೆ ಎಂದು ಪ್ರತಿಪಾದಿಸಿದರು.
ಸಂವಿಧಾನಕ್ಕೂ ಪೂರ್ವ ಮನುಶಾಸ ಧರ್ಮವಿತ್ತುಘಿ. ಇದನ್ನು ಸಂವಿಧಾನ ರಚನೆಯಾದ ಮೇಲೆ ಅಂಬೇಡ್ಕರರು ಮನುವಾದವನ್ನು ಮೇಲೇಳದಂತೆ ಪೆಟ್ಟು ಕೊಟ್ಟರು. ಈಗಲೂ ಅರಗಿಸಿಕೊಳ್ಳಲಾರದ ಮನಸ್ಸುಗಳು ದೆಹಲಿಯ ಜಂತರ್ಮಂತರ್ನಲ್ಲಿ ಸಂವಿಧಾನ ಪ್ರತಿ ಸುಟ್ಟರೂ ಯಾರೋಬ್ಬರೂ ಮಾತನಾಡಲೇ ಇಲ್ಲಘಿ, ಅದು ರಾಷ್ಟ್ರವಿರೋಧಿ, ಭಾರತ ವಿರೋಧಿ ಎಂದು ಕಾಣಿಸಲೇ ಇಲ್ಲ ಅಂಬೇಡ್ಕರ್ ಮೇಲ್ವರ್ಗದಿಂದ ಅವಮಾನ ಅನುಭವಿಸಿದರೂ ಅವರು ಸಂವಿಧಾನದಲ್ಲಿ ಎಲ್ಲೂ ಯಾವುದೆ ಜಾತಿಗೆ ಅನ್ಯಾಾಯ ಮಾಡಿಲ್ಲ ಆದರೂ ಮೀಸಲು ಸಿಕ್ಕಿಿಲ್ಲ ಒಂದೇ ವರ್ಗಕ್ಕೆೆ ಸಿಕ್ಕಿಿದೆ ಎಂಬ ವಾದ ಸರಿಯಾಗಿದ್ದದ್ದೆೆ ಆಗಿದ್ದರೆ ಈ ದೇಶಕ್ಕೆೆ ಪ್ರಧಾನಿ ದಲಿತರಾಗಿಲ್ಲ ಯಾಕೆ, ಕರ್ನಾಟಕದಲ್ಲಿ ಅಸ್ಪೃಶ್ಯ ಶಾಸಕರಾರು ಮುಖ್ಯಮಂತ್ರಿಿ ಆಗಿಲ್ಲ ಯಾಕೆ ಎಂದು ಪ್ರಶ್ನಿಿಸಿದರು. ಇದೆಲ್ಲ ದಲಿತರ ಏಳಿಗೆ, ಅಂಬೇಡ್ಕರ್ ಅವರ ಸರ್ವರನ್ನೊೊಳಗೊಂಡ ಸಂವಿಧಾನ ಸಹಿಸದವರ ಊಹಾಪೋಹವಷ್ಟೆೆ ಎಂದು ಕುಟುಕಿದರು. ಸಂವಿಧಾನ ಧಾರ್ಮಿಕ, ಜಾತ್ಯಾಾತೀತ, ಸಾಮಾಜಿಕ ನ್ಯಾಾಯದಡಿ ರಚಿಸಿದ್ದಾಾರೆ ಎಂದರು.
ಸಂವಿಧಾನದಲ್ಲಿ ಎಸ್ಸಿ,ಎಸ್ಟಿಿ ವರ್ಗಕ್ಕೆೆ ಶೇ.18ರಷ್ಟು ಮಾತ್ರ ಮೀಸಲಾತಿ ಸಿಕ್ಕಿಿದೆ. ಉಳಿದ ಶೇ.82ರಷ್ಟು ಮೀಸಲಾತಿ ಪಡೆದವರಿಗೆ ಸೌಲಭ್ಯ ಸಿಕ್ಕಿಿವೆಯಲ್ಲ ಆ ಬಗ್ಗೆೆ ಯಾಕೆ ಮಾತನಾಡುತ್ತಿಿಲ್ಲಘಿ. ಎಲ್ಲವೂ ದಲಿತರಿಗೆ ಸಿಕ್ಕಿಿಲ್ಲವಲ್ಲಘಿ. ಇದರ ಆರ್ಥ ಇತರ ಜಾತಿ, ಸಮುದಾಯಗಳನ್ನು ಅಂಬೇಡ್ಕರ್ ದ್ವೇಷಿಸಿಲ್ಲ ಎಂಬುದು ಸಾಕ್ಷಿಿಕರಿಸಿದಂತಾಗಿದೆ.
ಅಂಬೇಡ್ಕರ್ ಸಂವಿಧಾನ ರಚಿಸಿಯೇ ಇಲ್ಲ ಬರೆದಿಲ್ಲ ಎನ್ನುವವರು ಸಂವಿಧಾನ ರಚನಾ ಸಮಿತಿಯ ಡಾ.ಬಾಬು ರಾಜೇಂದ್ರ ಪ್ರಸಾದ್, ಟಿ.ಟಿ.ಕೃಷ್ಣಮಾಚಾರ್ ಅವರ ಹೇಳಿಕೆ ಜೊತೆಗೆ ಸಂವಿಧಾನವನ್ನು ಸಮಗ್ರವಾಗಿ ಓದಲೇಬೇಕು ಎಂದರು.
ನಂತರ ಬೆಂಗಳೂರಿನ ಡಾ.ಉಮಾಶಂಕರ್,ಗಂಗಾವತಿಯ ಕರಿಗೂಳಿ ಸುಂಕೇಶ್ವರ, ವಿಜಯಕುಮಾರ ದಾವಣಗೆರೆ, ಡಾ.ವಚನಹಳ್ಳಿಿ ಕೃಷ್ಣಪ್ಪ ಹಾಸನ,ಡಾ.ಅನಿಲ ಟೆಂಗಳಿ, ಗಂಗಾವತಿಯ ಎಂ.ಸೋಮಕ್ಕಘಿ, ಹುಸೇನಪ್ಪ ಅಮರಾಪೂರ ಮತ್ತಿಿತರರು ಪ್ರತಿಕ್ರಿಿಯಿಸಿದರು.
ವೇದಿಕೆಯಲ್ಲಿ ಹೋರಾಟಗಾರರಾದ ರವೀಂದ್ರನಾಥ ಪಟ್ಟಿಿಘಿ, ಸರ್ವಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ, ಡಾ.ಸುಭಾಷ್ಚಂದ್ರ ಕೌಜಲಗಿ,ಡಾ.ಪರಮಾನಂದ, ಈಶ್ವರ ಹಲಗಿ ಮತ್ತಿಿತರರಿದ್ದರು.
ಸರ್ವರಿಗೂ ಸಂವಿಧಾನ ಗೋಷ್ಠಿ ಸರ್ವರನ್ನೊಳಗೊಂಡು ಪ್ರಸ್ತುತತೆ ಉಳಿಸಿಕೊಂಡ ಸಂವಿಧಾನ – ಡಾ.ಅಪ್ಪಗೆರೆ ಸೋಮಶೇಖರ

