ಸುದ್ದಿಮೂಲ ವಾರ್ತೆ ರಾಯಚೂರು , ಡಿ.20:
ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾಾ ಹಾಗೂ ರಾಜ್ಯ ಸಮಿತಿಯಿಂದ 11ನೇ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಗರದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರ ಮೆರವಣಿಗೆ ಅದ್ದೂರಿಯಾಗಿ ಜರುಗಿತು.
ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಸಾಹಿತಿಗಳು ಅಲ್ಲಿ ಸರ್ವಾಧ್ಯಕ್ಷರಾದ ಡಾ.ಜಯದೇವಿ ಗಾಯಕವಾಡ ಅವರು ಬಸವೇಶ್ವರ ಪುತ್ಥಳಿಗೆ ಹಾಗೂ ನಂತರ ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಹೂವಿನಿಂದ ಅಲಂಕೃತ ರಥದಲ್ಲಿ ಸಮ್ಮೇಳನಾಧ್ಯಕ್ಷೆೆ ಡಾ.ಜಯದೇವಿ ಗಾಯಕವಾಡ ದಂಪತಿಗಳಿಗೆ ಸನ್ಮಾಾನಿಸಿ ಗೌರವಿಸಲಾಯಿತು. ನಂತರ ಮಹಾನಗರ ಪಾಲಿಕೆ ಮೇಯರ್ ನರಸಮ್ಮ ಮಾಡಗಿರಿ ಡೊಳ್ಳು ಬಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ನಂತರ ವಿವಿಧ ಜನಪದ ಕಲಾಮೇಳಗಳೊಂದಿಗೆ ವಿಜೃಂಭಣೆ ಯಿಂದ ಮೆರವಣಿಗೆ ಸಾಗಿ ಬಂದಿತು.
ಈ ಸಂದರ್ಭದಲ್ಲಿ ಉಪಮೇಯರ್ ಸಾಜಿದ್ ಸಮೀರ, ಪರಿಷತ್ತಿಿನ ರಾಜ್ಯಾಧ್ಯಕ್ಷ ಅರ್ಜುನ ಗೋಳಸಂಗಿ, ಪಾಲಿಕೆ ಸದಸ್ಯ ಜಯಣ್ಣ, ನರಸರೆಡ್ಡಿಿ, ಕಾಂಗ್ರೆೆಸ್ ಮುಖಂಡ ಮಹ್ಮದ್ ಶಾಲಂ, ನರಸಿಂಹಲು ಮಾಡಗಿರಿ, ದಲಿತ ಸಾಹಿತ್ಯ ಪರಿಷತ್ ಜಿಲ್ಲಾಾಧ್ಯಕ್ಷ ತಾಯರಾಜ್ ಮರ್ಚಟ್ಹಾಾಳ, ಕೋರೆನಲ್, ವೆಂಕಟೇಶ ಬೇವಿನಬೆಂಚಿ, ಮಲ್ಲಯ್ಯ ಅತ್ತನೂರು, ರಂಗಮುನಿದಾಸ, ಸೇರಿದಂತೆ ರಾಜ್ಯದ ವಿವಿಧಕಡೆಯಿಂದ ಆಗಮಿಸಿದ್ದ ಸಾಹಿತಿಗಳು, ಸಾಹಿತ್ಯಾಾಸಕ್ತರು ಪಾಲ್ಗೊೊಂಡಿದ್ದರು.
ಬೆಳಿಗ್ಗೆೆ 8.30ಕ್ಕೆೆ ಪರಿಷತ್ತಿಿನ ಧ್ವಜಾರೋಹಣವನ್ನು ಕರ್ನಾಟಕ ಆದಿ ಜಾಂಬವ ಅಭಿವೃದ್ದಿ ನಿಗಮದ ವ್ಯವಸ್ಥಾಾಪಕ ರಾಜೇಂದ್ರ ಜಲ್ದಾಾರ್ ನೆರವೇರಿಸಿದರು. ತಹಶೀಲ್ದಾಾರ್ ಸುರೇಶ ವರ್ಮಾ ಇತರರಿದ್ದರು.
ವೇದಿಕೆಗೆ ಶರಣೆ ಆಯ್ದಕ್ಕಿಿ ಲಕ್ಕಮ್ಮ ಹೆಸರಿಡಲಾಗಿದ್ದುಘಿ, ಕವಿ ಬೋಳಬಂಡೆಪ್ಪಘಿ, ಉರುಕುಂದಪ್ಪಘಿ, ಪಂ.ತಾರಾನಾಥ ಹೆಸರಲ್ಲಿ ಮಹಾದ್ವಾಾರ, ಕವಿ ಜಂಬಣ್ಣ ಅಮರಚಿಂತ ಹೆಸರಲ್ಲಿ ಮಂಟಪ, ಪುಸ್ತಕ ಮಳಿಗೆಗೆ ಡಾ.ಚನ್ನಣ್ಣ ವಾಲೀಕಾರ, ಶ್ರೀ ಶಾಂತರಸರ ನಾಮಕರಣ ಮಾಡಿದ್ದು ಗಮನ ಸೆಳೆಯಿತು.
ದಸಾಪ ಪರಿಷತ್ ಧ್ವಜಾರೋಹಣ ಸಾಹಿತಿಗಳ ಹೆಸರಲ್ಲಿ ಪುಸ್ತಕ ಮಳಿಗೆ, ದಲಿತ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಭವ್ಯ ಮೆರವಣಿಗೆ

