ಸುದ್ದಿಮೂಲ ವಾರ್ತೆ ರಾಯಚೂರು , ಡಿ.20:
ನಗರದ ಬಸವ ಕೇಂದ್ರದಲ್ಲಿ ಮರುಳ ಶಂಕರದೇವ ಪ್ರಸಾದ ನಿಲಯದ ಗುರುಪ್ರವೇಶ ಹಾಗೂ ಸಹಜ ಶಿವಯೋಗ ಕಾರ್ಯಕ್ರಮ ಜರುಗಿತು.
ಇಂದು ಬೆಳಿಗ್ಗೆೆ ನಡೆದ ಕಾರ್ಯಕ್ರಮದಲ್ಲಿ ಇಲಕಲ್ ನ ಗುರುಮಹಾಂತ ಪೂಜ್ಯರ ನೇತೃತ್ವದಲ್ಲಿ ನಿರ್ಮಲಾ ನಾಗನಗೌಡ ಹಾಗೂ ಪಾರ್ವತಿ ಪಾಟೀಲ ಬಸವ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು.
ಕೇಂದ್ರದ ಮುಂದಿನ ಪ್ರಮುಖ ರಸ್ತೆೆಯಿಂದ ನೂರಾರು ಜನ ಮಹಿಳೆಯರು, ಮಕ್ಕಳು, ಮುಖಂಡರು ಸೇರಿ ವಚನ ಕಟ್ಟುಗಳ ಹೊತ್ತು ವಚನ ಘೋಷಣೆಯೊಂದಿಗೆ ಆಗಮಿಸಿ ಮರುಳ ಶಂಕರದೇವರ ಪ್ರಸಾದ ನಿಲಯದ ಗುರುಪ್ರವೇಶ ಮಾಡಿದರು.
ನಂತರ ಪೂಜ್ಯರ ನೇತೃತ್ವದಲ್ಲಿ ಸಹಜ ಶಿವಯೋಗ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಲಿಂಗತತ್ವದ ಮಹತ್ವ ಕುರಿತು ತಿಳಿಸಿದರು.
ಕಾರ್ಯಕ್ರಮವು ಇಲಕಲ್ ಗುರುಮಹಾಂತ ಪೂಜ್ಯರ ಸನ್ನಿಿಧಿಕೇಂದ್ರದ ಗೌರವಾಧ್ಯಕ್ಷ ನಾಗನಗೌಡ ಹರವಿ, ಗಿರಿಜಾಶಂಕರ, ಚನ್ನಬಸವ, ಜಾಗತಿಕ ಲಿಂಗಾಯತ ಮಹಾಸಭೆ ತಾಲೂಕಾಧ್ಯಕ್ಷ ಜೆ.ಬಸವರಾಜ, ಚೆನ್ನಬಸವಣ್ಣ ಮಹಾಜನಶೆಟ್ಟಿಿ, ಸರ್ವಮಂಗಳಾ ಸಕ್ರಿಿ, ಜಗದೇವಿ ಚನ್ನಬಸವ, ಡಾ.ಪ್ರಿಿಯಾಂಕ ಗದ್ವಾಾಲ್, ಸುಪ್ರಿಿಯಾ ಪಾಟೀಲ, ಪೂರ್ಣಿಮಾ ಪಾಟೀಲ, ಅನ್ನಪೂರ್ಣ ಹರವಿ, ಬಸವರಾಜ ಕುರುಗೋಡ, ಮಲ್ಲಿಕಾರ್ಜುನ ಗುಡಿಮನಿ, ನಾಗೇಶಪ್ಪ, ಯಂಕಣ್ಣ ಆಶಾಪುರ ಅನೇಕ ಬಸವ ಭಕ್ತರು ಉಪಸ್ಥಿಿತರಿದ್ದರು.

